ಹಾವೇರಿ : ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೆಸರು ಮಾಡಿದ್ದ ಕೊಬ್ಬರಿ ಹೋರಿಯು ಅನಾರೋಗ್ಯದಿಂದ ಸಾವನ್ನಪ್ಪಿದ ಘಟನೆ ಹಾವೇರಿ ತಾಲ್ಲೂಕಿನ ಕರ್ಜಗಿ ಗ್ರಾಮದಲ್ಲಿ ನಡೆದಿದೆ.
ಕರ್ಜಗಿ ಓಂ-112 ಹೆಸರಿನ ಹೋರಿ ಅನಾರೋಗ್ಯದಿಂದ ಸಾವನ್ನಪ್ಪಿದೆ. ಗ್ರಾಮದ ರೈತ ಜಗದೀಶ್ ನಾಗಪ್ಪ ಮಾಣೆಗಾರ ಎಂಬವರಿಗೆ ಸೇರಿದ ಕೊಬ್ಬರಿ ಹೋರಿ ಎನ್ನಲಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಸುಮಾರು 3 ಲಕ್ಷ ರೂಪಾಯಿ ಕೊಟ್ಟ ಖರೀದಿ ಮಾಡಿದ್ದರು.
ಅಭಿಮಾನಿಗಳ ಪೈಲ್ವಾನ್ ಎಂದು ಹೆಸರು ಮಾಡಿದ್ದ ಕೊಬ್ಬರಿ ಹೋರಿಯು ಸಾವನ್ನಪ್ಪಿದೆ. ರಾಜ್ಯ ಮಟ್ಟದ ಹೋರಿ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರು ಬೈಕ್, ಬೆಳ್ಳಿ ಗದೆ, ಟ್ರಜೂರಿ ಸೇರಿದಂತೆ ಹಲವು ಬಹುಮಾನ ಗೆದ್ದು ಹೋರಿ ಹೆಸರು ಮಾಡಿದೆ.
ಮಾಲೀಕರು ಹೋರಿಯ ತಬ್ಬಿಕೊಂಡು ಕಣ್ಣೀರು ಹಾಕಿದ್ದಾರೆ. ಹೋರಿ ಅಂತಿಮ ದರ್ಶನ ಪಡೆಯಲು ಸಾವಿರಾರು ಅಭಿಮಾನಿಗಳು ಆಗಮಿಸಿದರು. ಗ್ರಾಮದ ಪ್ರಮುಖ ಬೀದಿಯಲ್ಲಿ ಭವ್ಯ ಮೆರವಣಿಗೆ ನಡೆಸಿ ಮಾಲೀಕನ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಿಸಿದರು.















