ಇಸ್ಲಾಮಾಬಾದ್ : ಅಂತಾರಾಷ್ಟ್ರೀಯ ಮಟ್ಟದಲ್ಲಿ ʻಭಿಕಾರಿಸ್ತಾನʼ ಅಂತಲೇ ಕುಖ್ಯಾತಿ ಪಡೆದಿರುವ ಪಾಕಿಸ್ತಾನ ಮತ್ತೊಮ್ಮೆ, ಮುಖಭಂಗ ಮಾಡಿಕೊಂಡಿದೆ. ಭಾರತದ ವಿರುದ್ಧ ಸದಾ ವಿಷಕಾರುವ ರಕ್ಷಣಾ ಸಚಿವ ಖವಾಜ ಆಸಿಫ್ಗೂ ಇದು ಕಾನೂನು ಸಂಕಷ್ಟ ತಂದೊಡ್ಡಿದೆ.
ಖವಾಜ ಆಸೀಫ್ ದೇಶದ ಸಿಯಾಲ್ಕೋಟ್ನಲ್ಲಿ ಪಿಜ್ಜಾ ಹಟ್ ಔಟ್ಲೆಟ್ ಒಂದನ್ನು ಉದ್ಘಾಟಿಸಿದ್ದರು. ಅಚ್ಚರಿ ಏನಪ್ಪಾ ಅಂದ್ರೆ ಆ ಪಿಜ್ಜಾ ಹಟ್ ಅಸಲಿಯೇ ಆಗಿರಲಿಲ್ಲ. ನಕಲಿ ಔಟ್ ಲೆಟ್ ಅನ್ನೋದು ತಡವಾಗಿ ಗೊತ್ತಾಗಿದೆ. ದೇಶದ ರಕ್ಷಣಾ ಸಚಿವರಿಗೆ ಯಾವುದು ಅಸಲಿ ಯಾವುದು ನಕಲಿ ಎನ್ನುವುದು ಗೊತ್ತಿಲ್ಲವೇ ದುರದೃಷ್ಟ ಎಂದು ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ಗೆಳೆದಿದ್ದಾರೆ.
ಅನಧಿಕೃತ ಪಿಜ್ಜಾ ಹಟ್ ಔಟ್’ಲೆಟ್ ಅನ್ನು ಉದ್ಘಾಟಿಸಿದ ಕೆಲವೇ ಗಂಟೆಯಲ್ಲಿ ಅಧಿಕೃತ ಪಿಜ್ಜಾ ಹಟ್ ಸಂಸ್ಥೆಯಿಂದ ಸ್ಪಷ್ಟನೆ ಬಂದಿದೆ. ನಮಗೂ, ನೀವು ಉದ್ಘಾಟಿಸಿದ ಪಿಜ್ಜಾ ಹಟ್ಗೂ ಯಾವುದೇ ಸಂಬಂಧವಿಲ್ಲ ಅಂತ ಸಂಸ್ಥೆ ಪಬ್ಲಿಕ್ ನೋಟಿಸ್ ನೀಡಿದೆ. ಇದು ಸೋಷಿಯಲ್ ಮೀಡಿಯಾದಲ್ಲೂ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ರಕ್ಷಣಾ ಸಚಿವರಿಗೆ ಮುಜುಗರ ತರಿಸಿದೆ.
ರಕ್ಷಣಾ ಸಚಿವ ನಕಲಿ ಪಿಜ್ಜಾ ಹಟ್ ಉದ್ಘಾಟಿಸಿದ ಬೆನ್ನಲ್ಲೇ ಅಸಲಿ ಸಂಸ್ಥೆ ಸ್ಪಷ್ಟನೆ ನೀಡಿದೆ. ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಸಿಯಾಲ್ ಕೋಟ್ ಕಂಟೋನ್ಮೆಂಟ್ ನಲ್ಲಿ ಉದ್ಘಾಟಿಸಿದ ಹೊಸ ಪಿಜ್ಜಾ ಹಂಟ್ ಔಟ್ಲೆಟ್ ಅಧಿಕೃತ ಪಿಜ್ಜಾ ಹಟ್ ಫ್ರಾಂಚೈಸ್ ನೊಂದಿಗೆ ಯಾವುದೇ ಸಂಬಂಧವಿಲ್ಲ. ಈ ಅನಧಿಕೃತ ಔಟ್ ಲೆಟ್ ಪಿಜ್ಜಾ ಹಟ್ ಬ್ರ್ಯಾಂಡ್ ಅನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಪಿಜ್ಜಾ ಹಟ್, ಪಾಕಿಸ್ತಾನ ಹೇಳಿದೆ.
ಅಷ್ಟೇ ಅಲ್ಲದೇ ನಮ್ಮ ಸಂಸ್ಥೆಯ ಟ್ರೇಡ್’ಮಾರ್ಕ್ ದುರುಪಯೋಗ ತಡೆಯಲು ಮತ್ತು ತಕ್ಷಣವೇ ಕ್ರಮ ತೆಗೆದುಕೊಳ್ಳುವಂತಾಗಲು, ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಪಿಜ್ಜಾ ಹಟ್ ಪಾಕಿಸ್ತಾನ ಹೇಳಿದೆ.















