ಮನೆ ಸುದ್ದಿ ಜಾಲ ಶಬರಿಮಲೆಯಿಂದ 900 ಕಿ.ಮೀ ಕ್ರಮಿಸಿ, ಮರಳಿ ಗೂಡು ಸೇರಿದ ಪಾರಿವಾಳ

ಶಬರಿಮಲೆಯಿಂದ 900 ಕಿ.ಮೀ ಕ್ರಮಿಸಿ, ಮರಳಿ ಗೂಡು ಸೇರಿದ ಪಾರಿವಾಳ

0

ಚಿತ್ರದುರ್ಗ : ಶಬರಿಮಲೆಯಲ್ಲಿ ಹಾರಿಬಿಟ್ಟ ಪಾರಿವಾಳವೊಂದು 900 ಕಿಲೋ ಮೀಟರ್ ಕ್ರಮಿಸಿದ ಬಳಿಕ ಮರಳಿ ಗೂಡು ಸೇರಿರುವ ಅಚ್ಚರಿ ಘಟನೆ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ತಳವಾರಹಟ್ಟಿಯಲ್ಲಿ ಬೆಳಕಿಗೆ ಬಂದಿದೆ.

ಈ ಗ್ರಾಮದ ರಾಜು ಎಂಬವರು ಸಾಕಿದ್ದ ‘ಮದಕರಿ’ ಎಂಬ ಪಾರಿವಾಳವನ್ನು ಶಬರಿಮಲೆಗೆ ತೆರಳುವ ಮಾಲಾಧಾರಿಗೆ ನೀಡಿದ್ದರು. ಶಬರಿಮಲೆಯಿಂದ ಪಾರಿವಾಳವನ್ನು ಹಾರಿಬಿಡಲು ತಿಳಿಸಿದ್ದರು. ಹೀಗಾಗಿ ಆ ಮಾಲಾಧಾರಿಯು ಡಿ.31ರಂದು ಶಬರಿಮಲೆಯಲ್ಲಿ ಪಾರಿವಾಳವನ್ನು ಹಾರಿಬಿಟ್ಟಿದ್ದು, ಜ.21ರಂದು ಪಾರಿವಾಳ ಮರಳಿ ತಳವಾರಹಟ್ಟಿಯಲ್ಲಿರುವ ತನ್ನ ಗೂಡು ಸೇರಿದೆ.

ಸತತ 900 ಕಿಲೋ ಮೀಟರ್ ಕ್ರಮಿಸಿರುವ ಪಾರಿವಾಳ 21 ದಿನಗಳ ಬಳಿಕ ಮರಳಿ ಗೂಡು ಸೇರಿದೆ. ಹೀಗಾಗಿ ಪಾರಿವಾಳದ ದಿಕ್ಕು ಪತ್ತೆ, ತೀಕ್ಷ÷್ಣ ದೃಷ್ಠಿ ಹಾಗು ನೆನಪಿನ ಶಕ್ತಿ ಬಗ್ಗೆ ಗ್ರಾಮಸ್ಥರಲ್ಲಿ ಭಾರೀ ಅಚ್ಚರಿ ಮೂಡಿದೆ.