ಮನೆ ರಾಜಕೀಯ ಪ್ರತಾಪ್ ಸಿಂಹ- ಎಂ.ಲಕ್ಷ್ಮಣ್ ವಾಕ್ಸಮರ: ಬಹಿರಂಗ ಚರ್ಚೆಗೆ ಮತ್ತೊಮ್ಮೆ ದಿನಾಂಕ ನಿಗದಿ

ಪ್ರತಾಪ್ ಸಿಂಹ- ಎಂ.ಲಕ್ಷ್ಮಣ್ ವಾಕ್ಸಮರ: ಬಹಿರಂಗ ಚರ್ಚೆಗೆ ಮತ್ತೊಮ್ಮೆ ದಿನಾಂಕ ನಿಗದಿ

0

ಮೈಸೂರು(Mysuru): ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ  ಸಂಸದ ಪ್ರತಾಪ್ ಸಿಂಹ ಹಾಗೂ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರ ಕ್ರೆಡಿಟ್ ವಾರ್ ತಾರಕಕ್ಕೇರಿದ್ದು, ಬಹಿರಂಗ ಚರ್ಚೆಗೆ ಮತ್ತೊಮ್ಮೆ ದಿನಾಂಕ ನಿಗದಿಪಡಿಸಲಾಗಿದೆ.

ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಂ.ಲಕ್ಷ್ಮಣ್, ಪ್ರತಾಪ್ ಸಿಂಹ ನನ್ನನ್ನು  ಹಂದಿ, ಕತ್ತೆಗೆ ಹೋಲಿಸಿದ್ದೀರಿ. ಜುಲೈ 5 ರಂದು ಎರಡು ಹಂದಿ ಹಾಗೂ ಎರಡು ಕತ್ತೆಗಳ ಜೊತೆಗೆ ಕಾಂಗ್ರೆಸ್ ಕಚೇರಿಯಿಂದ ಸಂಸದರ ಕಚೇರಿ ವರೆಗೆ ಮೆರವಣಿಗೆ ಬರಲಿದ್ದೇವೆ ಎಂದು ಹೇಳಿದರು.

ಚರ್ಚೆಗೆ ಹಂದಿ ಹೊಡೆಯೋರು ಬೇಡ. ತಿಳಿದಿರುವವರನ್ನು ಚರ್ಚೆಗೆ ಕಳುಹಿಸಿ. ನಮ್ಮ ಚರ್ಚೆಗೆ ಪೊಲೀಸರು ಅವಕಾಶ‌ ಕೊಡಬೇಕು ಎಂದ ಅವರು,  ಸಾಯುವವರೆಗೂ ನಾನೇ ಗೆಲ್ಲುತೇನೆ ಎನ್ನುವಂತೆ ನಡೆದುಕೊಳ್ಳುತ್ತೀರಿ. 2023ರಲ್ಲಿ ನೀವು ಹೇಗೆ ಗೆಲ್ಲುತ್ತೀರ ನಾವು ನೋಡುತ್ತೇವೆ ಎಂದು ಕಿಡಿಕಾರಿದರು.

ಪ್ರತಾಪ್ ಸಿಂಹ ರೀತಿ ನಾನು ಒಂದು ರೂಪಾಯಿ ಮಾನನಷ್ಟ ಮೊಕದ್ದಮೆ ಹಾಕಿಸಿಕೊಂಡಿಲ್ಲ. ನಿಮ್ಮ ರೀತಿ ಹೆಂಡತಿಯನ್ನ ತಂಗಿ ಎಂದು ಮೂಡಾ ಸೈಟ್ ಪಡೆದಿಲ್ಲ‌. ಸೆಕ್ಸ್ ಸ್ಕ್ಯಾಂಡಲ್ ಸಿಡಿಗೆ ಸ್ಟೇ ತಂದಿಲ್ಲ‌. ನಿಮ್ಮ 17 ಎಪಿಸೋಡ್ ಸಿಡಿಗಳು ನನ್ನ ಬಳಿ ಇವೆ. ಪ್ರಾಮಾಣಿಕವಾಗಿದ್ರೆ ತಡೆಯಾಜ್ಞೆ ರದ್ದುಗೊಳಿಸಿ. ಆಮೇಲೆ ನಿಮ್ಮ ಬಂಡವಾಳ ಬಯಲಾಗುತ್ತೆ ಎಂದು ಕಿಡಿಕಾರಿದರು.

ಬಿಜೆಪಿ ಪಕ್ಷದ ಹೆಸರಿಲ್ಲದೇ ಪ್ರತಾಪ್ ಸಿಂಹ ಗೆದ್ದರೆ ನಾನು ಅವರ ಪಿಎ ಅಥವಾ ವಾಚ್ ಮ್ಯಾನ್ ಕೆಲಸ  ಮಾಡುತ್ತೇನೆ  ಎಂದು ಪ್ರತಾಪ್ ಸಿಂಹ ಅವರಿಗೆ ತಿರುಗೇಟು ನೀಡಿದ್ದಾರೆ.

ಗ್ರಾ. ಪಂ ಚುನಾವಣೆಯನ್ನೂ ಗೆಲ್ಲಲಾರದ ಎಂ. ಲಕ್ಷ್ಮಣ್  ಎಂಬ ಪ್ರತಾಪ್ ಸಿಂಹ ಟೀಕೆಗೆ ಪ್ರತಿಕ್ರಿಯಿಸಿ ಗ್ರಾ. ಪಂ  ಚುನಾವಣೆಯಲ್ಲಿ ಪಕ್ಷವನ್ನು ಬಿಟ್ಟು ಪ್ರತಾಪ್ ಸಿಂಹ ಆಗಿ ಸ್ಪರ್ದಿಸಿ. ನಾನು ಸಹ ಪಕ್ಷೇತರವಾಗಿ ಸ್ಪರ್ಧೆಸುತ್ತೇನೆ. ನಮ್ಮಿಬ್ಬರ ನಡುವಿನ ಚುನಾವಣೆಯಲ್ಲಿ ಗೆದ್ದು ತೋರಿಸಿ. ಚುನಾವಣೆಯಲ್ಲಿ ನೀವು  ಗೆದ್ದರೆ ನಾನು ನಿಮ್ಮ ಪಿಎ ಆಗಿ ಅಥವಾ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.