ಮನೆ ರಾಜ್ಯ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ, ಸಿಕ್ಕಿ ಬಿದ್ದ ಕಂದಾಯ ಇಲಾಖೆ ಸಿಬ್ಬಂದಿ

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ, ಸಿಕ್ಕಿ ಬಿದ್ದ ಕಂದಾಯ ಇಲಾಖೆ ಸಿಬ್ಬಂದಿ

0

ಕಲಬುರಗಿ : ಜಿಲ್ಲೆಯ ಜೇವರ್ಗಿಯಲ್ಲಿ ಲಂಚ ಪಡೆಯುವಾಗ ತಾಲೂಕಿನ ಕಂದಾಯ ಇಲಾಖೆ ಸಿಬ್ಬಂದಿ ಸತೀಶಕುಮಾರ್ ರಾಠೋಡ್ ಶುಕ್ರವಾರ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದಿದ್ದಾನೆ.

ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸತೀಶ್ ಕುಮಾರ್ ರಾಠೋಡ್ ಫೋನ್ ಪೇ ಮೂಲಕ 10,000 ರೂ. ಲಂಚ ಪಡೆದಿದ್ದರು. ಲೋಕಾಯುಕ್ತ ಎಸ್ಪಿ ಸಿದ್ದರಾಜು ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಇನ್‌ಸ್ಪೆಕ್ಟರ್‌ ಅರುಣ್ ಕುಮಾರ್ ಅವರ ತಂಡ ಪಟ್ಟಣದ ಮಿನಿ ವಿಧಾನಸೌಧದ ಎದುರುಗಡೆ ಸತೀಶ್ ಕುಮಾರ್ ರಾಠೋಡ್ ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಧಿತ ಸತೀಶ್ ಕುಮಾರ್ ರಾಠೋಡ್‌ ಹೆಚ್ಚಿನ ವಿಚಾರಣೆಗಾಗಿ ಕಲಬುರಗಿಗೆ ಕರೆದೊಯ್ಯಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ. ದಾಳಿಯಲ್ಲಿ ಸಿಬ್ಬಂದಿ ಮಾಜೀದ್, ಅಸ್ಲಾಂ ಕೊಡಚಿ, ಪ್ರಮೋದ್, ರಾಣೋಜಿ ಇದ್ದರು.