ಮನೆ ಅಪರಾಧ ಸಿವಿಲ್​ ಕೋರ್ಟ್​ನಲ್ಲಿ ಸ್ಫೋಟ, ಪೊಲೀಸ್​ ಅಧಿಕಾರಿಗೆ ಗಾಯ

ಸಿವಿಲ್​ ಕೋರ್ಟ್​ನಲ್ಲಿ ಸ್ಫೋಟ, ಪೊಲೀಸ್​ ಅಧಿಕಾರಿಗೆ ಗಾಯ

0

ಬಿಹಾರ(Bihar): ಪಾಟ್ನಾ ನಗರದ ಸಿವಿಲ್ ನ್ಯಾಯಾಲಯದಲ್ಲಿ ನಡೆದ ಸ್ಫೋಟದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ.

ಪೊಲೀಸ್ ಠಾಣೆಯಿಂದ ವಶಪಡಿಸಿಕೊಂಡ ಸ್ಫೋಟಕಗಳನ್ನು ನ್ಯಾಯಾಲಯಕ್ಕೆ ತರಲಾಯಿತು. ಗನ್​​ಪೌಡರ್​ ಅನ್ನು ಮೇಜಿನ ಮೇಲೆ ಇರಿಸಲಾಗಿದ್ದ ಸಂದರ್ಭದಲ್ಲಿ ಸ್ಫೋಟಗೊಂಡಿದೆ ಎನ್ನಲಾಗ್ತಿದೆ.

ಬೆಂಕಿ ನಂದಿಸಲು ಹರಸಾಹಸ ಪಡಲಾಗುತ್ತಿದೆ. ಗಾಯಗೊಂಡ ಪೊಲೀಸ್ ಅಧಿಕಾರಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಸ್ಥಳಕ್ಕೆ ಪಿರಬಹೋರ್ ಪೊಲೀಸ್ ಠಾಣೆಯ ಪೊಲೀಸರು ಆಗಮಿಸಿದ್ದು, ಘಟನೆ ಬಗ್ಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.