ಬೆಂಗಳೂರು : ಶಿಡ್ಲಘಟ್ಟದಲ್ಲಿ ಪೌರಾಯುಕ್ತೆಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನನ್ನು ಸರ್ಕಾರ ರಕ್ಷಣೆ ಮಾಡಲ್ಲ. ಕಾನೂನು ಪ್ರಕಾರ ಶಿಕ್ಷೆ ಆಗುತ್ತದೆ ಎಂದು ಸಚಿವ ಬೈರತಿ ಸುರೇಶ್ ತಿಳಿಸಿದರು. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಪ್ರಶ್ನೆ ಕೇಳಿದರು.
ಪೌರಾಡಳಿತ ಇಲಾಖೆಯಲ್ಲಿ ಬ್ಯಾನರ್ ಹಾಕಲು ನಿಯಮ ಇದೆ. ಅನುಮತಿ ಪಡೆದು ಹಾಕಬಹುದು ಅಂತಿದೆ. ಶಿಡ್ಲಘಟ್ಟದಲ್ಲಿ ರಾಜೀವ್ ಗೌಡ ಅನ್ನೋರು ಮಹಿಳಾ ಅಧಿಕಾರಿಯನ್ನ ನಿಂದಿಸಿದ್ದಾರೆ. ಫೋನ್ನಲ್ಲಿ ಕೆಟ್ಟದಾಗಿ ಮಾತಾಡಿದ್ದಾರೆ. ಆ ಅಧಿಕಾರಿ ಕಣ್ಣೀರು ಹಾಕಿದ್ದಾರೆ. ಮಹಿಳಾ ಅಧಿಕಾರಿ ವೈಯಕ್ತಿಕ ಕೇಸ್ ಹಾಕಿದ್ದಾರೆ. ಇದಕ್ಕೆ ರಾಜೀವ್ ಗೌಡ ಧಮ್ಕಿ ಹಾಕಿದ್ದಾರೆ.
ಪೌರಾಡಳಿತ ಇಲಾಖೆಯಿಂದ ರಾಜೀವ್ ಗೌಡ ಮೇಲೆ ಕೇಸ್ ಹಾಕಬೇಕು. ರಾಜೀವ್ ಗೌಡ ಹಿಡಿಯೋಕೆ 3 ತಂಡ ಪೊಲೀಸರ ನೇಮಕ ಅಂತೆ. ಇಲಾಖೆಯಿಂದ ಕೇಸ್ ಹಾಕಿದ್ರೆ ಸ್ಟ್ರಾಂಗ್ ಆಗುತ್ತಿತ್ತು. ಸೋಮವಾರ (ಜ.26) ರಾತ್ರಿ ಬಂಧನ ಆಗಿದೆ. ಮಹಿಳೆಯರಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ರಕ್ಷಣೆ ಇಲ್ಲ. ಮಹಿಳಾ ಅಧಿಕಾರಿಗೆ ರಕ್ಷಣೆ ಇಲ್ಲ. ಸರಿಯಾಗಿ ಪೊಲೀಸರು ಸರಿಯಾದ ಕೇಸ್ ಹಾಕಿಲ್ಲ. ಸಿಎಸ್ ಮಹಿಳೆ ಆದರೂ ನ್ಯಾಯ ಸಿಗ್ತಿಲ್ಲ ಈ ಬಗ್ಗೆ ಕ್ರಮ ಆಗಬೇಕು ಎಂದರು.
ಇದಕ್ಕೆ ಸಚಿವ ಬೈರತಿ ಸುರೇಶ್ ಉತ್ತರ ನೀಡಿ, ಈ ಘಟನೆ ಆದ ಕೂಡಲೇ ಎಸ್ಪಿಗೆ ಸೂಚನೆ ಕೊಡಲಾಗಿದೆ. ಆಕೆಯೇ ದೂರು ಕೊಟ್ಟಿದ್ದಾರೆ. ಅದರ ಆಧಾರದಲ್ಲಿ ಕ್ರಮ ಆಗಿದೆ. ರಾಜೀವ್ ಗೌಡನನ್ನ ಬಂಧನ ಮಾಡಲಾಗಿದೆ. ಮಹಿಳಾ ಅಧಿಕಾರಿ ಸಹೋದರಿ ಸಮಾನ. ಎಸ್ಪಿ 3 ತಂಡ ಮಾಡಿ, ಹೊರರಾಜ್ಯದಲ್ಲಿ ಅರೆಸ್ಟ್ ಮಾಡಿದ್ದಾರೆ. ಕಾನೂನು ಅಡಿ ಎಲ್ಲಾ ಸೆಕ್ಷನ್ ಹಾಕಲಾಗಿದೆ. ಈಗ ಆತನ ಬಂಧನ ಮಾಡಲಾಗಿದೆ. ಪಕ್ಷಾತೀತವಾಗಿ ಶಿಕ್ಷೆ ಕೊಡ್ತೀವಿ. ಯಾರನ್ನು ಸರ್ಕಾರ ರಕ್ಷಣೆ ಮಾಡಲ್ಲ ಕಾನೂನು ಕ್ರಮ ಆಗುತ್ತದೆ ಎಂದು ಹೇಳಿದರು.















