ಮನೆ ರಾಜ್ಯ ಆಜಾದಿ ಕಾ ಅಮೃತ್ ಮಹೋತ್ಸವ್:  ಮೈಸೂರು ರೈಲ್ವೆ ಸಂರಕ್ಷಣಾ ದಳದಿಂದ ಬೈಕ್ ಅಭಿಯಾನ

ಆಜಾದಿ ಕಾ ಅಮೃತ್ ಮಹೋತ್ಸವ್:  ಮೈಸೂರು ರೈಲ್ವೆ ಸಂರಕ್ಷಣಾ ದಳದಿಂದ ಬೈಕ್ ಅಭಿಯಾನ

0

ಮೈಸೂರು(Mysuru): ನವದೆಹಲಿಯಲ್ಲಿನ ರೈಲ್ವೆ ಮಂಡಳಿಯ ರೈಲ್ವೆ ಸಂರಕ್ಷಣಾ ದಳದ ಮಹಾನಿರ್ದೇಶಕರ ನಿರ್ದೇಶನದಂತೆ ಮೈಸೂರು ವಿಭಾಗದ  ರೈಲ್ವೆ ಸಂರಕ್ಷಣಾ ದಳದ ವತಿಯಿಂದ ಇಂದು ‘ಆಜಾದಿ ಕಾ ಅಮೃತ್ ಮಹೋತ್ಸವ್’ ಅಂಗವಾಗಿ ಬೈಕ್ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಯಿತು.

ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್ ಅಗರ್ವಾಲ್, ಮೈಸೂರು ರೈಲ್ವೆ ನಿಲ್ದಾಣದ ಆವರಣದಿಂದ ಪ್ರಾರಂಭವಾದ ಬೈಕ್ ಅಭಿಯಾನಕ್ಕೆ ಚಾಲನೆ ನೀಡಿದರು. ರೈಲ್ವೆ ಸಂರಕ್ಷಣಾ ದಳದ ಸುಮಾರು 10 ಸಿಬ್ಬಂದಿಗಳು 5 ಬೈಕ್‌ಗಳಲ್ಲಿ ವಿವಿಧ ರಾಜ್ಯಗಳ ಮುಖಾಂತರ ಸಂಚರಿಸಿ ಅಂತಿಮವಾಗಿ ಆಗಸ್ಟ್ 14 ರಂದು ನವದೆಹಲಿ ತಲುಪಲಿದ್ದಾರೆ.

ನಂತರ ಮಾತನಾಡಿದ ರಾಹುಲ್ ಅಗರ್ವಾಲ್, ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಭಾರತ ಸರ್ಕಾರವು 75 ವರ್ಷಗಳ ಸ್ವಾತಂತ್ರ್ಯ ಆಚರಣೆಯ ಸ್ಮರಣಾರ್ಥ ‘ಆಜಾದಿ ಕಾ ಅಮೃತ್ ಮಹೋತ್ಸವ್’ನ ಅಂಗವಾಗಿ ಬೈಕ್ ಅಭಿಯಾನ ಆಯೋಜಿಸಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮೈಸೂರು ವಿಭಾಗದ ವಿಭಾಗೀಯ ಸಂರಕ್ಷಣಾ ಆಯುಕ್ತ ಥಾಮಸ್ ಜಾನ್, ಹಿರಿಯ ವಿಭಾಗೀಯ ವಿತ್ತೀಯ ವ್ಯವಸ್ಥಾಪಕ ಲೆವಿನ್ ಪ್ರಭು ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.