ಬೆಂಗಳೂರು : ಅಜಿತ್ ಪವಾರ್ ಒಳ್ಳೆಯ ಪ್ರೋಗ್ರೆಸಿವ್ ಲೀಡರ್, ಇಂದು ನಮ್ಮಿಂದ ದೂರ ಆಗಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳ್ಳಂಬೆಳ್ಳಗ್ಗೆ ಈ ವಿಚಾರ ಕೇಳಿ ನನಗೂ ಶಾಕ್ ಆಯ್ತು. ಹಿರಿಯ ನಾಯಕರು ಯಾವಾಗಲೂ ಪಾಸಿಟಿವ್ ಆಗಿ ಆಲೋಚನೆ ಮಾಡ್ತಾ ಇದ್ರು. ಪಾರ್ಟಿ ಬಿಟ್ಟು ಹೋದಾಗ ನಮಗೆ ಬೇಜಾರು ಆಗಿತ್ತು. ಆದರೆ ಅದು ಅವರ ತೀರ್ಮಾನವಾಗಿದೆ.
ಒಳ್ಳೆ ಪ್ರೋಗ್ರೆಸಿವ್ ಲೀಡರ್ ಆಗಿದ್ರು. ಇವತ್ತು ಅವರು ನಮ್ಮಿಂದ ದೂರ ಆಗಿದ್ದಾರೆ ಅವರ ಅತ್ಮಕ್ಕೆ ಶಾಂತಿ ಸಿಗಲಿ. ದೇವರು ಕುಟುಂಬದ ಅನುಯಾಯಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ತಿಳಿಸಿದ್ದಾರೆ.
ಅವರ ಕುಟುಂಬದವರು ಬೆಂಗಳೂರಿನಲ್ಲಿ ಇದ್ದಾರೆ. ನಿನ್ನೆ ತಾನೇ ಅವರ ಬೀಗರನ್ನ ನಾನು ಭೇಟಿ ಮಾಡಿದ್ದೆ. ಈ ಥರ ಆಗುತ್ತೆ ಅಂತಾ ನಾನು ಅಂದುಕೊಂಡಿರಲಿಲ್ಲ. ನಾವು ರಾಜಕಾರಿಣಿಗಳು ಬಹಳ ಹುಷಾರಾಗಿ ಇರಬೇಕು. ಈಗಾಗಲೇ ನಾವು ತುಂಬಾ ಜನರನ್ನು ಕಳೆದುಕೊಂಡಿದ್ದೇವೆ ಎಂದಿದ್ದಾರೆ.
ವಿಮಾನ ಪತನಕ್ಕೆ ತಾಂತ್ರಿಕ ದೋಷನಾ ಎಂಬ ಪ್ರಶ್ನೆಗೆ ನನಗೆ ಏನ್ರಿ ಗೊತ್ತು ಸೋಶಿಯಲ್ ಮೀಡಿಯಾ ಮಾಹಿತಿ ಕೊಟ್ಟಿದ್ದು, ನನ್ನ ಫ್ರೆಂಡ್ಸ್ ಕೂಡ ಮುಂಬೈನಿಂದ ಕಾಲ್ ಮಾಡಿ, ಮಾಹಿತಿ ಕೊಟ್ರು ಅಷ್ಟೆ ಎಂದು ಹೇಳಿದ್ದಾರೆ.















