ಮನೆ ರಾಷ್ಟ್ರೀಯ ಎಸ್‌ಸಿಪಿ ಬಣಗಳ ವಿಲೀನ ನಿರ್ಧಾರವನ್ನು ಅಜಿತ್‌ ಪವಾರ್‌ ಫೆ.12ಕ್ಕೆ ಪ್ರಕಟಿಸಬೇಕಿತ್ತು – ಶರದ್ ಪವಾರ್

ಎಸ್‌ಸಿಪಿ ಬಣಗಳ ವಿಲೀನ ನಿರ್ಧಾರವನ್ನು ಅಜಿತ್‌ ಪವಾರ್‌ ಫೆ.12ಕ್ಕೆ ಪ್ರಕಟಿಸಬೇಕಿತ್ತು – ಶರದ್ ಪವಾರ್

0

ಮುಂಬೈ : ಕಳೆದ ನಾಲ್ಕು ತಿಂಗಳಿಂದ ಎನ್‌ಸಿಪಿ ಎರಡು ಬಣಗಳ ವಿಲೀನ ಬಗ್ಗೆ ಮಾತುಕತೆ ನಡೆದಿತ್ತು ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ತಿಳಿಸಿದ್ದಾರೆ. ಜಯಂತ್ ಪಾಟೀಲ್ ಮತ್ತು ಅಜಿತ್ ಪವಾರ್ ನಡುವೆ ಎರಡು ಎನ್‌ಸಿಪಿ ಬಣಗಳ ವಿಲೀನದ ಕುರಿತು ಚರ್ಚೆಗಳು ನಡೆದಿದ್ದವು. ಸಕಾರಾತ್ಮಕ ದಿಕ್ಕಿನಲ್ಲಿ ಚರ್ಚೆಗಳು ಸಾಗುತ್ತಿವೆ. ಜನವರಿ 12 ರಂದು ಅಜಿತ್‌ ಪವಾರ್‌ ಬಣಗಳ ವಿಲೀನ ನಿರ್ಧಾರವನ್ನು ಪ್ರಕಟಿಸಬೇಕಿತ್ತು. ಅಷ್ಟರಲ್ಲಿ ಈ ದುರ್ಘಟನೆ ಆಗಿದೆ ಎಂದು ಹೇಳಿದ್ದಾರೆ.

ಎರಡೂ ಎನ್‌ಸಿಪಿಗಳು ಒಟ್ಟಿಗೆ ಬರಬೇಕೆಂಬುದು ಅಜಿತ್ ದಾದಾ ಅವರ ಆಶಯವಾಗಿತ್ತು. ನಮ್ಮ ಆಶಯವೂ ಆದೇ ಆಗಿತ್ತು. ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಅವರ ಹಠಾತ್ ನಿಧನವು ಈಗ ಈ ವಿಲೀನ ಚರ್ಚೆಗಳಲ್ಲಿ ವಿರಾಮವನ್ನುಂಟು ಮಾಡಿದೆ ಎಂದು ಮಾತನಾಡಿದ್ದಾರೆ. ನಾವು ಹೋದವರನ್ನು ಮರಳಿ ತರಲು ಸಾಧ್ಯವಿಲ್ಲ. ಪ್ರಸ್ತುತ ಪರಿಸ್ಥಿತಿಯನ್ನು ಎದುರಿಸುವುದು ಒಂದು ಸವಾಲಾಗಿದೆ. ಯಾರಾದರೂ ಅಜಿತ್ ಪವಾರ್ ಅವರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಅಜಿತ್ ಪವಾರ್ ಪತ್ನಿ ಸುನೇತ್ರಾ ಉಪಮುಖ್ಯಮಂತ್ರಿಯಾಗಿ ನೇಮಿಸುವ ವಿಚಾರ ಕುರಿತು ಮಾತನಾಡಿ, ಈ ಬಗ್ಗೆ ನನ್ನೊಟ್ಟಿಗೆ ಯಾರು ಕೂಡ ಯಾವುದೇ ಸಮಾಲೋಚನೆ ನಡೆಸಿಲ್ಲ. ಈ ಬಗ್ಗೆ ನಾನು ಸುನೇತ್ರಾ ಪವಾರ್ ಅವರೊಂದಿಗೆ ಯಾವುದೇ ಚರ್ಚೆ ನಡೆಸಿಲ್ಲ. ಬೆಳಗಿನ ಸುದ್ದಿಗಳ ಮೂಲಕವೇ ನನಗೆ ಪ್ರಮಾಣವಚನ ಸಮಾರಂಭದ ಬಗ್ಗೆ ತಿಳಿದುಕೊಂಡೆ ಎಂದು ಶರದ್ ಪವಾರ್ ತಿಳಿಸಿದ್ದಾರೆ.