ಮನೆ ರಾಜ್ಯ ಫೈನಾನ್ಸ್ ಸಿಬ್ಬಂದಿ ಬೆದರಿಕೆ – ವಿಷ ಕುಡಿದು ರೈತ ಆತ್ಮಹತ್ಯೆ..!

ಫೈನಾನ್ಸ್ ಸಿಬ್ಬಂದಿ ಬೆದರಿಕೆ – ವಿಷ ಕುಡಿದು ರೈತ ಆತ್ಮಹತ್ಯೆ..!

0


ಹಾಸನ : ಮನೆ ಸೀಜ್‌ ಮಾಡೋದಾಗಿ ಫೈನಾನ್ಸ್ ಸಿಬ್ಬಂದಿ ಬೆದರಿಕೆ ಹಾಕಿದ್ದಕ್ಕೆ ಮನನೊಂದು ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಶ್ರವಣಬೆಳಗೊಳ ಬಳಿಯ ಕೊತ್ತನಘಟ್ಟ ಗ್ರಾಮದಲ್ಲಿ ನಡೆದಿದೆ.

ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ರೈತನನ್ನು ಯೋಗೇಶ್ (50) ಎಂದು ಗುರುತಿಸಲಾಗಿದೆ. ಚನ್ನರಾಯಪಟ್ಟಣದ ಫೈನಾನ್ಸ್‌ ಒಂದರಲ್ಲಿ 7 ಲಕ್ಷ ರೂ. ಸಾಲ ಪಡೆದಿದ್ದರು. ಪ್ರತಿ ತಿಂಗಳು ಸರಿಯಾಗಿ ಕಂತು ಕಟ್ಟುತ್ತಿದ್ದ ಅವರು, ವೈಯಕ್ತಿಕ ಸಮಸ್ಯೆಯಿಂದ ಕಳೆದ 2 ತಿಂಗಳ ಕಂತನ್ನು ಬಾಕಿ ಉಳಿಸಿಕೊಂಡಿದ್ದರು.

ಫೆ.4ರ ರಾತ್ರಿ ಯೋಗೇಶ್‌ ಅವರ ಮನೆಗೆ ಬಂದಿದ್ದ ಇಬ್ಬರು ಫೈನಾನ್ಸ್ ಸಿಬ್ಬಂದಿ‌ ಮನೆ ಸೀ ಜ್‍ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ಮಾನಕ್ಕೆ ಅಂಜಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಫೈನಾನ್ಸ್ ವಿರುದ್ಧ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.