ಮನೆ ರಾಜ್ಯ ಟೆಕ್ಕಿ ಮಾಜಿ ಪತ್ನಿಯ ಮನೆಗೆ ನುಗ್ಗಿ ಇರಿದು ಕೊಂದ ವ್ಯಕ್ತಿ..!

ಟೆಕ್ಕಿ ಮಾಜಿ ಪತ್ನಿಯ ಮನೆಗೆ ನುಗ್ಗಿ ಇರಿದು ಕೊಂದ ವ್ಯಕ್ತಿ..!

0

ಹೈದರಾಬಾದ್ : ವ್ಯಕ್ತಿಯೊಬ್ಬ ಟೆಕ್ಕಿಯಾಗಿದ್ದ ತನ್ನ ಮಾಜಿ ಪತ್ನಿಯ ಮನೆಗೆ ನುಗ್ಗಿ ಆಕೆಗೆ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ತನ್ನ ತಾಯಿಯ ಸಾವಿಗೆ 29 ವರ್ಷದ ಐಟಿ ಕಂಪನಿ ಉದ್ಯೋಗಿಯಾಗಿದ್ದ, ಆ ಮಹಿಳೆಯೇ ಕಾರಣ ಎಂದು ವ್ಯಕ್ತಿ ಆರೋಪಿಸಿದ್ದಾನೆ. ಮಹಿಳೆಯ ಎರಡನೇ ಪತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆಕೆ ಮೂರು ತಿಂಗಳ ಗರ್ಭಿಣಿ ಎಂದು ಪೊಲೀಸರಿಗೆ ತಿಳಿಸಿದ್ದಾರೆ.

30 ರ ಹರೆಯದ ಕೊಲೆ ಆರೋಪಿ 2022 ರಲ್ಲಿ ಆ ಮಹಿಳೆಯನ್ನು ವಿವಾಹವಾಗಿದ್ದ. ಮದುವೆ ಭಾರತದಲ್ಲಿ ನಡೆದಿತ್ತು. ಆರೋಪಿ ನಂತರ ಕೆನಡಾಕ್ಕೆ ತೆರಳಿದ್ದ. ಅಲ್ಲಿ ಪತ್ನಿ ಜೊತೆ ವಾಸವಾಗಿದ್ದ. ದಂಪತಿ ನಡುವೆ ಕೆಲವು ಭಿನ್ನಾಭಿಪ್ರಾಯಗಳು ಉಂಟಾಗಿ ಮಹಿಳೆ ಭಾರತಕ್ಕೆ ವಾಪಸ್‌ ಆಗಿದ್ದರು.

ನಂತರ ಮಹಾರಾಷ್ಟ್ರದಲ್ಲಿ ಪತಿ ವಿರುದ್ಧ ಕೌಟುಂಬಿಕ ಹಿಂಸಾಚಾರದ ಪ್ರಕರಣ ದಾಖಲಿಸಿದ್ದರು. ಈ ದಂಪತಿ 2024 ರಲ್ಲಿ ವಿಚ್ಛೇದನ ಪಡೆದರು. ಆ ಮಹಿಳೆ 2025 ರ ಏಪ್ರಿಲ್‌ನಲ್ಲಿ ಬೇರೊಬ್ಬ ವ್ಯಕ್ತಿ ಜೊತೆ ಮತ್ತೆ ವಿವಾಹವಾದರು.