ಮನೆ ರಾಜ್ಯ ಅನ್ಯಕೋಮಿನ ಯುವಕನೊಂದಿಗೆ ಹಿಂದು ಯುವತಿ ವಿವಾಹ: ಲವ್ ಜಿಹಾದ್ ಎಂದ ಹಿಂದೂ ಸಂಘಟನೆಗಳು

ಅನ್ಯಕೋಮಿನ ಯುವಕನೊಂದಿಗೆ ಹಿಂದು ಯುವತಿ ವಿವಾಹ: ಲವ್ ಜಿಹಾದ್ ಎಂದ ಹಿಂದೂ ಸಂಘಟನೆಗಳು

0

ವಿಟ್ಲ(Vitla): ಮೂಲದ ಅನ್ಯಕೋಮಿನ ಯುವಕನೋರ್ವ ಹಿಂದೂ ಯುವತಿಯನ್ನು ವಿವಾಹವಾಗಿದ್ದು, ಈ ಜೋಡಿಯ ಮದುವೆ ರಿಜಿಸ್ಟರ್ ಪತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಟ್ಲ ನೀರಕಣಿ ಮಾರ್ನೆಮಿಗುಡ್ಡೆ ನಿವಾಸಿ ಉಬೈದ್(27) ಹಾಗೂ ಮೈಸೂರು ಲೋಕನಾಯಕ ನಗರದ ಸೌಂದರ್ಯ(24) ಎಂಬುವವರು ಮದುವೆ ರಿಜಿಸ್ಟರ್ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಕೇರಳದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವ ಉಬೈದ್ ಮತ್ತು ಸೌಂದರ್ಯ ಮೈಸೂರಿನಲ್ಲಿ ರಿಜಿಸ್ಟರ್ ವಿವಾಹವಾಗಿದ್ದಾರೆ. ಯುವತಿಯ ಮನೆಯವರ ಒಪ್ಪಿಗೆಯ ಮೇರೆಗೆ ಮದುವೆ ನಡೆದಿದೆ ಎಂದು ಹೇಳಲಾಗಿದ್ದು, ಇದೇ ತಿಂಗಳು ಹಾಲ್ ಒಂದರಲ್ಲಿ ರಿಸೆಪ್ಷನ್ ಕೂಡ ನಡೆಸಲು ತಯಾರಿ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ವ್ಯವಸ್ಥಿತ ಲವ್ ಜಿಹಾದ್

ಅನ್ಯಕೋಮಿನ ಜೋಡಿಯ ವಿವಾಹಕ್ಕೆ ಹಿಂದೂ ಸಂಘಟನೆಗಳು ಅಸಮಧಾನ ವ್ಯಕ್ತಪಡಿಸಿದ್ದು, ಹಿಂದೂ ಯುವತಿಯರನ್ನು ಪ್ರೀತಿಯ ಮೂಲಕ ತಮ್ಮ ಬಲೆಗೆ ಹಾಕಿಕೊಂಡು ಮದುವೆಯಾಗುವ ಮೂಲಕ ಮತಾಂತರ ಮಾಡಿ ಅವರನ್ನು ಹಿಂದೂ ಧರ್ಮದಿಂದ ಅನ್ಯಮತಕ್ಕೆ ಮತಾಂತರ ಮಾಡುವ ದುರುದ್ದೇಶ ಹೊಂದಿದ್ದು, ಇದೊಂದು ವ್ಯವಸ್ಥಿತ ಲವ್ ಜಿಹಾದ್ ಎಂದು ಆರೋಪಿಸಿದ್ದಾರೆ.