ಮನೆ ರಾಜ್ಯ ನಿರಂಜನ ಮಠದ ಪ್ರವೇಶಕ್ಕೆ ನಿರಾಕರಣೆ: ಪ್ರತಿಭಟನೆ

ನಿರಂಜನ ಮಠದ ಪ್ರವೇಶಕ್ಕೆ ನಿರಾಕರಣೆ: ಪ್ರತಿಭಟನೆ

0

ಮೈಸೂರು(Mysuru): ವಿವೇಕ ಸ್ಮಾರಕ ವಿವಾದ ನ್ಯಾಯಾಲಯದಲ್ಲಿದ್ದರೂ ನಿರಂಜನ ಮಠದ ಆವರಣದಲ್ಲಿ ಭೂಮಿಪೂಜೆ ನಡೆಸಲಾಗಿದೆ.  ಮಠದ ಪ್ರವೇಶಕ್ಕೂ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಅಖಿಲ ವೀರಶೈವ ಲಿಂಗಾಯತ ಮಹಾಸಭಾ, ಬಸವ ಬಳಗಗಳ ಒಕ್ಕೂಟದ ಸದಸ್ಯರು ಪ್ರತಿಭಟನೆ ನಡೆಸಿದರು.

ಇಂದು ಮಠಕ್ಕ ಪ್ರವೇಶಿಸಲು ಯತ್ನಿಸಿದ ಅಖಿಲ ವೀರಶೈವ ಲಿಂಗಾಯತ ಮಹಾಸಭಾ ಹಾಗೂ ಬಸವ ಬಳಗಗಳ ಒಕ್ಕೂಟದ ಸದಸ್ಯರನ್ನು ತಡೆದ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು.

ಈ ಸಂದರ್ಭ ಪ್ರತಿಭಟನಾಕಾರರು, ರಾಮಕೃಷ್ಣ ಮಠದ ದಳ್ಳಾಳಿಯಂತೆ ಸರ್ಕಾರ ವರ್ತಿಸುತ್ತಿದೆ. ವೀರಶೈವ ಲಿಂಗಾಯತರನ್ನು ಕಡೆಗಣಿಸಿದೆ. ನಮ್ಮನ್ನು ಮಠಕ್ಕೆ ಪ್ರವೇಶ ನೀಡದೆ ತಡೆಹಿಡಿದಿದೆ ಎಂದು ಘೋಷಣೆ ಕೂಗಿದರು.

ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಟಿ.ಎಸ್. ಲೋಕೇಶ್ ಮಾತನಾಡಿ, ವಿವಾದವನ್ನು ಬಗೆಹರಿಸುವುದಾಗಿ ಉಸ್ತುವಾರಿ ಸಚಿವ ಸೋಮಶೇಖರ್ ಹೇಳಿದ್ದರು. ಒಂದು ವರ್ಷದಿಂದ ಹೋರಾಟ ನಡೆಸುತ್ತಿದ್ದೇವೆ. ವಿವಾದ ಇತ್ಯರ್ಥವಾಗದೆ ಭೂಮಿಪೂಜೆ ನಡೆದಿದೆ ಎಂದು ದೂರಿದರು.

ಬಸವ ಬಳಗ ಒಕ್ಕೂಟದ ಅಧ್ಯಕ್ಷ ಮಹದೇವಸ್ವಾಮಿ, ಹಿನಕಲ್ ಬಸವರಾಜ, ದೂರ ಶಿವಕುಮಾರ್, ಪ್ರಸಾದ್, ನಾಗರಾಜ್ ಇದ್ದರು.