ಪ್ರಸ್ತುತ ದಿನಗಳಲ್ಲಿ ಹೃದಯದ ಕಾಳಜಿ ವಹಿಸುವುದು ಬಹುಮುಖ್ಯ. ಹೃದಯದ ಬ್ಲಾಕ್ ಎನ್ನುವುದು ನಿಮ್ಮ ಹೃದಯದ ವ್ಯವಸ್ಥೆಯಲ್ಲಿನ ಸಮಸ್ಯೆಯಾಗಿದೆ. ಇದು ನಿಮ್ಮ ಹೃದಯ ಬಡಿತ ಮತ್ತು ಲಯವನ್ನು ನಿಯಂತ್ರಿಸುತ್ತದೆ. ಈ ಸ್ಥಿತಿಯನ್ನು ಆಟ್ರಿಯೊವೆಂಟ್ರಿಕ್ಯುಲರ್ (AV) ಬ್ಲಾಕ್ ಅಥವಾ ವಹನ ಅಸ್ವಸ್ಥತೆ ಎಂದೂ ಕರೆಯಲಾಗುತ್ತದೆ. ಈ ಕಾರಣದಿಂದಾಗಿ, ದೇಹದಲ್ಲಿನ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆಯಲ್ಲಿ, ಹೃದಯ ಬಡಿತ ಕಡಿಮೆಯಾಗುತ್ತದೆ ಮತ್ತು ಹೃದಯವು ದೇಹದಲ್ಲಿ ರಕ್ತವನ್ನು ಸರಿಯಾಗಿ ಪಂಪ್ ಮಾಡಲು ಸಾಧ್ಯವಾಗುವುದಿಲ್ಲ. ಹೃದಯಾಘಾತದ ಲಕ್ಷಣಗಳನ್ನು ಕಂಡಾಗ, ರೋಗಿಯು ತಕ್ಷಣ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಚಿಕಿತ್ಸೆ ಪಡೆಯಬೇಕು.
ಹೃದಯ ಬ್ಲಾಕ್ ಆಗುವುದಕ್ಕೆ ಸಾಮಾನ್ಯ ಕಾರಣವೆಂದರೆ ಹೃದಯಾಘಾತ. ಇತರ ಕಾರಣಗಳಲ್ಲಿ ಹೃದಯ ಸ್ನಾಯುವಿನ ಕಾಯಿಲೆಗಳು ಸೇರಿವೆ. ಇದನ್ನು ಸಾಮಾನ್ಯವಾಗಿ ಕಾರ್ಡಿಯೊಮಿಯೊಪತಿ ಎಂದು ಕರೆಯಲಾಗುತ್ತದೆ. ಹೃದಯ ಕವಾಟದ ಕಾಯಿಲೆಗಳು ಮತ್ತು ಹೃದಯದ ರಚನೆಯೊಂದಿಗೆ ಸಮಸ್ಯೆಗಳು, ತೆರೆದ ಹೃದಯ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಹೃದಯಕ್ಕೆ ಹಾನಿಯಾಗುವುದರಿಂದ, ಕೆಲವು ಔಷಧಿಗಳ ಅಡ್ಡ ಪರಿಣಾಮ ಅಥವಾ ವಿಷಕ್ಕೆ ಒಡ್ಡಿಕೊಳ್ಳುವುದರಿಂದ ಹಾರ್ಟ್ ಬ್ಲಾಕ್ ಉಂಟಾಗಬಹುದು. ಜೆನೆಟಿಕ್ಸ್ ಮತ್ತೊಂದು ಕಾರಣವಾಗಿರಬಹುದು.
ಅಥ್ಲೀಟ್‌ಗಳು, ಹದಿಹರೆಯದವರು, ಯುವ ವಯಸ್ಕರು ಮತ್ತು ಹೆಚ್ಚು ಕ್ರಿಯಾಶೀಲ ವಾಗಸ್ ನರ ಹೊಂದಿರುವವರಲ್ಲಿ ಮೊದಲ ಹಂತದ ಬ್ಲಾಕ್ ಸಾಮಾನ್ಯವಾಗಿರುತ್ತದೆ. ಮೂರ್ಛೆ ಹೋಗುವುದು, ತಲೆತಿರುಗುವಿಕೆ, ಎದೆ ನೋವು, ಸುಸ್ತಾಗುವುದು, ಉಸಿರಾಟದ ತೊಂದರೆ, ಹೃದಯ ಬಡಿತ, ತ್ವರಿತ ಉಸಿರಾಟ, ವಾಕರಿಕೆ ಹೃದಯ ಬ್ಲಾಕ್ ನ ಲಕ್ಷಣಗಳು.
ನೀವು ಮೊದಲ ಹಂತದ ಹಾರ್ಟ್ ಬ್ಲಾಕ್ ಹೊಂದಿದ್ದರೆ, ನಿಮಗೆ ಬಹುಶಃ ಚಿಕಿತ್ಸೆಯ ಅಗತ್ಯವಿರುವುದಿಲ್ಲ. ನೀವು ಎರಡನೇ ಹಂತದ ಹೃದಯದ ಬ್ಲಾಕ್‌ನ್ನು ಹೊಂದಿದ್ದರೆ ಮತ್ತು ರೋಗಲಕ್ಷಣಗಳನ್ನು ಹೊಂದಿದ್ದರೆ, ನಿಮ್ಮ ಹೃದಯ ಬಡಿತವನ್ನು ಇರುವಂತೆ ಇರಿಸಿಕೊಳ್ಳಲು ನಿಮಗೆ ಪೇಸ್‌ಮೇಕರ್ ಬೇಕಾಗಬಹುದು. ಇದು ನಿಮ್ಮ ಹೃದಯಕ್ಕೆ ವಿದ್ಯುತ್ ಪಲ್ಸ್ ಪ್ರಚೋದನೆಗಳನ್ನು ಕಳುಹಿಸುವ ಸಣ್ಣ ಸಾಧನವಾಗಿದೆ. ಥರ್ಡ್ ಡಿಗ್ರಿ ಹಾರ್ಟ್ ಬ್ಲಾಕ್ ಅನ್ನು ಸಾಮಾನ್ಯವಾಗಿ ತುರ್ತು ಪರಿಸ್ಥಿತಿಯಲ್ಲಿ ಕಂಡುಹಿಡಿಯಲಾಗುತ್ತದೆ. ಚಿಕಿತ್ಸೆಯು ಯಾವಾಗಲೂ ಪೇಸ್‌ಮೇಕರ್ ಅನ್ನು ಒಳಗೊಂಡಿರುತ್ತದೆ.
ಒತ್ತಡ ಜೀವನದ ನಡುವೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮೇಲಿನ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.