ಮನೆ ರಾಜ್ಯ ಅಮೃತ ಯೋಜನೆಯ ಗ್ಯಾಸ್‌ ಪೈಪ್‌ಲೈನ್‌ ಲೀಕಾಗಿ ಬೆಂಕಿ; ತಪ್ಪಿದ ಭಾರೀ ದುರಂತ..!

ಅಮೃತ ಯೋಜನೆಯ ಗ್ಯಾಸ್‌ ಪೈಪ್‌ಲೈನ್‌ ಲೀಕಾಗಿ ಬೆಂಕಿ; ತಪ್ಪಿದ ಭಾರೀ ದುರಂತ..!

0

ಬೀದರ್ : ಅಮೃತ ಯೋಜನೆಯ ಎಲ್‌ಪಿಜಿ ಗ್ಯಾಸ್ ಪೈಪ್‌ಲೈನ್‌ ಲೀಕಾಗಿ ಬೆಂಕಿ ಕಾಣಿಸಿಕೊಂಡು, ಭಾರೀ ದುರಂತ ತಪ್ಪಿದ ಘಟನೆ ಬೀದರ್ ನಗರದ ಜೈಲ್ ಕಾಲೋನಿಯ ಕಾಮತ್ ಹೋಟೆಲ್ ಬಳಿ ನಡೆದಿದೆ.

ಏಕಾಏಕಿ ಎಲ್‌ಪಿಜಿ ಗ್ಯಾಸ್ ಪೈಪ್ ಲೈನ್ ಲೀಕಾಗಿ ಬೆಂಕಿ ಹೊತ್ತಿಕೊಂಡಿತ್ತು, ಇದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.

ಎಲ್‌ಪಿಜಿ ಪೈಪ್‌ಲೈನ್‌ ಸಂಪರ್ಕ ನೀಡಿದ್ದ ಕಂಪನಿಯ ಸಿಬ್ಬಂದಿ ಕರೆಸಿ ಗ್ಯಾಸ್‌ ಲೀಕ್‌ ಬಂದ್‌ ಮಾಡಿಸಿದ್ದಾರೆ. ಬಳಿಕ ಆತಂಕದಲ್ಲಿದ್ದ ಕಾಲೋನಿಯ ಜನ ನಿಟ್ಟುಸಿರುಬಿಟ್ಟಿದ್ದಾರೆ. ನ್ಯೂ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅಗ್ನಿ ಶಾಮಕ ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.