ಮನೆ ಸುದ್ದಿ ಜಾಲ ದಸರಾ ಖರ್ಚುವೆಚ್ಚದ ಲೆಕ್ಕವನ್ನು 8 ತಿಂಗಳ ನಂತರ ಕೊಟ್ಟ ಮೈಸೂರು ಜಿಲ್ಲಾಡಳಿತ

ದಸರಾ ಖರ್ಚುವೆಚ್ಚದ ಲೆಕ್ಕವನ್ನು 8 ತಿಂಗಳ ನಂತರ ಕೊಟ್ಟ ಮೈಸೂರು ಜಿಲ್ಲಾಡಳಿತ

0

ಮೈಸೂರು ದಸರಾ ಮಹೋತ್ಸವ-2025ರ ಖರ್ಚು ವೆಚ್ಚವನ್ನು ಜಿಲ್ಲಾಡಳಿತ ಎಂಟು ತಿಂಗಳು ನಂತರ ಇದೀಗ ಬಿಡುಗಡೆ ಮಾಡಿದೆ. ದಸರಾದ ಪ್ರಮುಖ ಆಕರ್ಷಣೆಗಳಲ್ಲೊಂದಾದ ಯುವ ದಸರಾಗೆ 15.94 ಕೋಟಿ ರೂ. ವ್ಯಯಿಸಿರುವುದು ಇಲ್ಲಿ ಗಮನಾರ್ಹ ಎನ್ನಲಾಗಿದೆ.

ಇದರ ವಿವರ ಸ್ವಾಗತ ಆಮಂತ್ರಣ ಮತ್ತು ಸ್ಥಳಾವಕಾಶ- 5,57,27,095 ರೂ., ಮೆರವಣಿಗೆ- 1.60 ಕೋಟಿ ರೂ., ಪಂಜಿನ ಕವಾಯತು-1.48 ಕೋಟಿ ರೂ., ಸ್ತಬ್ಧಚಿತ್ರ-7 ಲಕ್ಷ ರೂ., ರೈತ ದಸರಾ(ಗ್ರಾಮೀಣ ದಸರಾ)-52 ಲಕ್ಷ ರೂ., ಸಾಂಸ್ಕೃತಿಕ ದಸರಾ- 2.08 ಕೋಟಿ ರೂ., ಲಲಿತ ಕಲೆ- 22 ಲಕ್ಷ ರೂ., ಕವಿಗೋಷ್ಠಿ- 68.90 ಲಕ್ಷ ರೂ., ಯೋಗ ದಸರಾ- 23 ಲಕ್ಷ ರೂ., ಯುವದಸರಾ 15.94 ಕೋಟಿ ರೂ., ಯುವ ಸಂಭ್ರಮ- 2,52,50,000 ರೂ., ಮಹಿಳಾ ಮತ್ತು ಮಕ್ಕಳ ದಸರಾ- 40 ಲಕ್ಷ ರೂ., ಚಲನಚಿತ್ರ 40.50 ಲಕ್ಷ ರೂ., ಕುಸ್ತಿ- 49 ಲಕ್ಷ ರೂ., ಅರಣ್ಯ ಇಲಾಖೆ (ಗಜಪಯಣ, ಅರಮನೆ ಆವರಣದಲ್ಲಿ ಆನೆಗಳ ನಿರ್ವಹಣೆ ವೆಚ್ಚ)- 80 ಲಕ್ಷ, ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನ ಅವರಣದಲ್ಲಿ ಆಯೋಜಿಸಲಾದ ದಸರಾ ಕಾರ್ಯಕ್ರಮ ನಿರ್ವಹಣೆ ವೆಚ್ಚ- 60 ಲಕ್ಷ ರೂ., ರಂಗಾಯಣ (ನವರಾತ್ರಿ ರಂಗೋತ್ಸವ)- 10 ಲಕ್ಷ ರೂ., ಸೇರಿದಂತೆ ಇವುಗಳ ವೆಚ್ಚ 33,72,27,095 ರೂ., ಆಗಿದೆ. ಹಾಗೂ ವಿವಿಧ ಅನುಷ್ಠಾನಾಧಿಕಾರಿಗೆ ಬಿಡುಗಡೆ ಮಾಡಲಾದ ಮೊತ್ತ 5,73,72,727 ರೂ., ಏರ್ ಶೋಗೆ 55 ಲಕ್ಷ ರೂ., ಇತರೆ ಜಿಲ್ಲೆ ಮತ್ತು ಕಚೇರಿಗಳಿಗೆ ಬಿಡುಗಡೆಗೊಳಿಸಿರುವ ಅನುದಾನದ ವಿವರ ಮಂಡ್ಯ- 2 ಲಕ್ಷ ರೂ., ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ- 55 ಲಕ್ಷ ರೂ. (ಜಿಎಸ್‌ಟಿ- 37,27,185 ರೂ.), ಕನ್ನಡ ಪುಸ್ತಕ ಪ್ರಾಧಿಕಾರ- 2 ಲಕ್ಷ ಒಟ್ಟು 2,94,27,185 ರೂ., ಒಟ್ಟು ವೆಚ್ಚಗಳು 42,95,27,007 ರೂ.ಗಳು. ಸರಕಾರದಿಂದ ಬಿಡುಗಡೆ ಮಾಡಲಾದ ಅನುದಾನ- 30 ಕೋಟಿ, ಮೈಸೂರು ಅಭಿವೃದ್ದಿ ಪ್ರಾಧಿಕಾರದಿಂದ ಬಿಡುಗಡೆ ಮಾಡಲಾದ ಅನುದಾನ 10 ಕೋಟಿ ರೂ., ಪ್ರಾಯೋಜಕತ್ವ ಮೊತ್ತ- 1,81,96,000 ರೂ., ಟಿಕೆಟ್ ಮಾರಾಟದಿಂದ ಬಂದ ಆದಾಯ- 3,22,92,055 ರೂ.ಗಳು, ಒಟ್ಟು ಸ್ವೀಕೃತವಾದ ಮೊತ್ತ 45,03,88,055 ರೂ. ಆಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ ಎನ್ನಲಾಗಿದೆ.