ಮನೆ ರಾಜ್ಯ ಬಂಡವಾಳಗಳು ಗುಜರಾತ್‌ಗೆ ಹೋಗ್ತಿದೆ; ಐಪಿಎಲ್‍ ಹೈಜಾಕ್ ಮಾಡಿದ್ದಾರೆ – ಕೇಂದ್ರದ ವಿರುದ್ಧ ಪ್ರಿಯಾಂಕ್‌ ಖರ್ಗೆ ಕಿಡಿ

ಬಂಡವಾಳಗಳು ಗುಜರಾತ್‌ಗೆ ಹೋಗ್ತಿದೆ; ಐಪಿಎಲ್‍ ಹೈಜಾಕ್ ಮಾಡಿದ್ದಾರೆ – ಕೇಂದ್ರದ ವಿರುದ್ಧ ಪ್ರಿಯಾಂಕ್‌ ಖರ್ಗೆ ಕಿಡಿ

0

ಬೆಂಗಳೂರು : ದೇಶದ ಎಲ್ಲಾ ಬಂಡವಾಳ ಗುಜರಾತ್‌ ರಾಜ್ಯಕ್ಕೆ ಹೋಗುತ್ತಿದೆ. ಐಪಿಎಲ್‍ನ್ನೂ ಸಹ ಹೈಜಾಕ್ ಮಾಡಿದ್ದಾರೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಈ ವೇಳೆ, ಐಪಿಎಲ್ ಫೈನಲ್ ಪಂದ್ಯ ಶಿಫ್ಟ್ ಆದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಐಪಿಎಲ್ ಮ್ಯಾಚ್‍ಗಳು ಗುಜರಾತ್‌ಗೆ ಹೋಗ್ತಾ ಇದೆ. ಬಂಡವಾಳ ಗುಜರಾತ್‌ಗೆ ಹೋಗ್ತಾ ಇದೆ. ಬಿಸಿಸಿಐ, ಐಸಿಸಿನಲ್ಲಿ ಜೈ ಶಾ ಇದ್ದಾರೆ ಅವರಿಗೆ ಮನಸ್ಸಿಗೆ ಬಂದ ಹಾಗೆ ಹಾಕ್ತಾರೆ. ಬೆಂಗಳೂರಿಂದ ಎತ್ತಿ ಹೈದರಾಬಾದ್‌ಗಾದರೂ ಹಾಕ್ತಾರೆ, ಗುಜರಾತ್‌ಗಾದ್ರೂ ಹಾಕ್ತಾರೆ. ಇಲ್ಲೇನೂ ಭದ್ರತೆ ಇಲ್ವಾ? ಯಾಕೆ ಶಿಫ್ಟ್ ಆಗಿದೆ? ಎಂದು ಪ್ರಶ್ನಿಸಿದರು.

ಗುಜರಾತ್‍ಗೆ ಆರು ಸೆಮಿಕಂಡಕ್ಟರ್ ಯೋಜನೆಗಳು ಹೋಗಿವೆ. ಕಂಪನಿಗಳಿಗೆ ಸಬ್ಸಿಡಿ ಕೊಡುವಾಗ ಅರ್ಜಿ ಹಾಕುತ್ತಾರೆ. ಅರ್ಜಿಯಲ್ಲಿ ನಿಮ್ಮ ಮೊದಲ ಆಯ್ಕೆ ಯಾವುದು ಅಂತ ಇರುತ್ತೆ. ಕರ್ನಾಟಕ ಅಂತ ಬರೆದರೂ, ತಮಿಳುನಾಡು ಅಂತ ಬರೆದರೂ ಕೂಡ ಗುಜರಾತ್‌ಗೆ ಹೋಗುತ್ತೆ ಅಸ್ಸಾಂಗೆ ಹೋಗುತ್ತೆ ಇದು ಹೇಗೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

ಅಸ್ಸಾಂ ವಿದ್ಯಾರ್ಥಿಗಳು ಇಲ್ಲಿ ಬಂದು ಖಾಸಗಿ ಕಂಪನಿಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ. 30-40 ವರ್ಷದಿಂದ ಒಂದು ವ್ಯವಸ್ಥೆ ಕಟ್ಟಲಾಗಿದೆ. ಆ ವ್ಯವಸ್ಥೆಯನ್ನು ಹಾಳು ಮಾಡ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.