ಮಿಚೆಲ್ ಮಾರ್ಷ್ ಅವರ ಶತಕ ಮತ್ತು ಪ್ರಿನ್ಸ್ ಯಾದವ್ ಅವರ ಅದ್ಭುತ ಬೌಲಿಂಗ್ ನೆರವಿನಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡವು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 9 ರನ್ಗಳಿಂದ ರೋಚಕ ಗೆಲುವು ಸಾಧಿಸಿತು. ಈ ಋತುವಿನಲ್ಲಿ ಲಕ್ನೋ ತಂಡವು ಸತತ ಆರು ಪಂದ್ಯಗಳಲ್ಲಿ ಸೋಲನ್ನು ಕಂಡು ಆರ್ಸಿಬಿ ವಿರುದ್ಧ ಗೆಲುವು ಸಾಧಿಸಿ ಪ್ಲೇಆಫ್ ಭರವಸೆಯನ್ನು ಜೀವಂತವಾಗಿರಿಸಿಕೊಂಡಿತು. ಮಿಚೆಲ್ ಮಾರ್ಷ್ ಅವರ ಅದ್ಭುತ ಶತಕಕ್ಕಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು ಎನ್ನಲಾಗುತ್ತಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ 2026ರ 50ನೇ ಪಂದ್ಯ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಮಳೆಯಿಂದಾಗಿ ಪಂದ್ಯವನ್ನು ತಲಾ 19 ಓವರ್ಗಳಿಗೆ ಇಳಿಸಲಾಯಿತು. ಈ ಪಂದ್ಯದಲ್ಲಿ, ಟಾಸ್ ಗೆದ್ದ ಆರ್ಸಿಬಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಅದರಂತೆ ಬ್ಯಾಟಿಂಗ್ ಮಾಡಿದ ಲಕ್ನೋ, ಮಾರ್ಷ್ ಅವರ ಶತಕದ ಸಹಾಯದಿಂದ 19 ಓವರ್ಗಳಲ್ಲಿ 3 ವಿಕೆಟ್ಗಳಿಗೆ 209 ರನ್ ಗಳಿಸಿತು, ಆದರೆ ಡಕ್ವರ್ತ್-ಲೂಯಿಸ್ ನಿಯಮದ ಆಧಾರದ ಮೇಲೆ, ಆರ್ಸಿಬಿ ಗೆಲ್ಲಲು 213 ರನ್ಗಳ ಗುರಿಯನ್ನು ನೀಡಿತು. ಇದಕ್ಕೆ ಉತ್ತರವಾಗಿ, ಆರ್ಸಿಬಿ 19 ಓವರ್ಗಳಲ್ಲಿ 6 ವಿಕೆಟ್ಗಳಿಗೆ 203 ರನ್ಗಳನ್ನು ಮಾತ್ರ ಗಳಿಸಲು ಸಾಧ್ಯವಾಯಿತು. ಹೀಗಾಗಿ ಆರ್ಸಿಬಿ ಪರ ಇನ್ನಿಂಗ್ಸ್ ಆರಂಭಿಸಿದ ಕೊಹ್ಲಿ ತಮ್ಮ ಖಾತೆ ತೆರೆಯಲು ವಿಫಲರಾದರು ಮತ್ತು ಶೂನ್ಯಕ್ಕೆ ಪೆವಿಲಿಯನ್ ಸೇರಿದರು. ಜಾಕೋಬ್ ಬೆಥೆಲ್ ಕೂಡ 4 ರನ್ಗಳಿಗೆ ತಮ್ಮ ವಿಕೆಟ್ ಕಳೆದುಕೊಂಡರು. ರಜತ್ ಪಾಟಿದಾರ್ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿ 61 ರನ್ಗಳಿಗೆ ಔಟಾದರು. ದೇವದತ್ ಪಡಿಕ್ಕಲ್ 34 ರನ್ ಗಳಿಸಿದರೆ, ಜಿತೇಶ್ ಶರ್ಮಾ 1 ರನ್ ಗಳಿಸಿ ನಿರ್ಗಮಿಸಿದರು. ಟಿಮ್ ಡೇವಿಡ್ 17 ಎಸೆತಗಳಲ್ಲಿ 40 ರನ್ ಗಳಿಸಿದರು. ಕೃನಾಲ್ ಪಾಂಡ್ಯ 28 ರನ್ ಗಳಿಸಿದರೆ, ರೊಮಾರಿಯೊ ಶೆಫರ್ಡ್ 23 ರನ್ ಗಳಿಸಿ ಅಜೇಯರಾಗಿ ಉಳಿದರು. ಲಕ್ನೋ ಪರ ಪ್ರಿನ್ಸ್ ಯಾದವ್ 3 ವಿಕೆಟ್ ಪಡೆದರೆ, ಶಹಬಾಜ್ ಅಹ್ಮದ್ 2 ವಿಕೆಟ್ ಕಿತ್ತರುಎನ್ನಲಾಗುತ್ತಿದೆ.
ಇದಕ್ಕೂ ಮೊದಉ ಬ್ಯಾಟಿಂಗ್ ಮಾಡಿದ್ದ ಲಕ್ನೋ ಪರ ಆರಂಭಿಕ ಆಟಗಾರ ಮಿಚ್ ಮಾರ್ಷ್ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರೆ, 49 ಎಸೆತಗಳಲ್ಲಿ ಶತಕ ಪೂರೈಸಿದರು. ಈ ಪಂದ್ಯದಲ್ಲಿ ಮಿಚೆಲ್ 55 ಎಸೆತಗಳಲ್ಲಿ 111 ರನ್ ಗಳಿಸಿ ಔಟಾದರು. ಉಳಿದಥೆ ಅರ್ಶಿನ್ ಕುಲಕರ್ಣಿ 17 ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ನಿಕೋಲಸ್ ಪೂರನ್ ತಂಡಕ್ಕೆ 38 ರನ್ ಕೊಡುಗೆ ನೀಡಿದರು. ನಾಯಕ ಪಂತ್ 10 ಎಸೆತಗಳಲ್ಲಿ 32 ರನ್ ಗಳಿಸಿ ಅಜೇಯರಾಗಿ ಉಳಿದರು. ಆರ್ಸಿಬಿ ಪರ ಹ್ಯಾಜಲ್ವುಡ್, ಕೃನಾಲ್ ಪಾಂಡ್ಯ ಮತ್ತು ರಸಿಕ್ದಾರ್ ತಲಾ ಒಂದು ವಿಕೆಟ್ ಪಡೆದರು ಎಂಬುದ್ದಾಗಿದೆ.















