ಮನೆ ರಾಜ್ಯ ಜುಲೈ 18 ರಿಂದ ಸಂಸತ್ತಿನ ಮುಂಗಾರು ಅಧಿವೇಶನ

ಜುಲೈ 18 ರಿಂದ ಸಂಸತ್ತಿನ ಮುಂಗಾರು ಅಧಿವೇಶನ

0

ಹೊಸದಿಲ್ಲಿ(New Delhi): ಸಂಸತ್ತಿನ ಉಭಯ ಸದನಗಳಾದ ಲೋಕಸಭೆ (ಕೆಳಮನೆ) ಮತ್ತು ರಾಜ್ಯಸಭೆ (ಮೇಲ್ಮನೆ) ಯಲ್ಲಿ ಜುಲೈ 18 ರಿಂದ ಅಧಿವೇಶನಗಳು ಆರಂಭವಾಗಲಿದ್ದು, ಆಗಸ್ಟ್ 13 ರಂದು ಮುಕ್ತಾಯಗೊಳ್ಳಲಿದೆ.

ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ಹೊರಡಿರುವ ಲೋಕಸಭಾ ಕಾರ್ಯದರ್ಶಿ, ಸಾಮಾನ್ಯವಾಗಿ, ಮಾನ್ಸೂನ್ ಅಧಿವೇಶನವು ಜುಲೈ ಮೂರನೇ ವಾರದಲ್ಲಿ ಪ್ರಾರಂಭವಾಗುತ್ತದೆ ಮತ್ತು ಸ್ವಾತಂತ್ರ್ಯ ದಿನದ ಹಿಂದಿನ ದಿನ ಮುಕ್ತಾಯಗೊಳ್ಳುತ್ತದೆ. ವಾಡಿಕೆಯಂತೆ ಈ ವರ್ಷವೂ ಜುಲೈ ೩ನೇ ವಾರವೇ ಮುಂಗಾರು ಅಧಿವೇಶನ ಆರಂಭವಾಗಲಿದೆ ಎಂದು ಹೇಳಿದ್ದಾರೆ.

ಸಂಸತ್ ಅಧಿವೇಶನ ಸಂದರ್ಭದಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಆಡಳಿತ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲು ಯೋಜನೆ ಹಾಕಿಕೊಂಡಿವೆ.

2021 ರಲ್ಲಿ, ಮಾನ್ಸೂನ್ ಅಧಿವೇಶನವು ಗದ್ದಲದಲ್ಲೇ ಮುಕ್ತಾಗೊಂಡಿತ್ತು. ಏಕೆಂದರೆ ರೈತರ ಪ್ರತಿಭಟನೆಗಳು, ಪೆಗಾಸಸ್ ಸ್ನೂಪಿಂಗ್ ಹಗರಣ ಮತ್ತು ಇಂಧನ ಬೆಲೆ ಏರಿಕೆಯ ಬಗ್ಗೆ ಚರ್ಚಿಸಲು ಸರ್ಕಾರ ಮುಂದಾಗುತ್ತಿಲ್ಲ ಎಂದು ವಿರೋಧ ಪಕ್ಷಗಳು ಎರಡೂ ಸಭೆಗಳಲ್ಲಿ ಲೋಕಸಭೆ ಮತ್ತು ರಾಜ್ಯಸಭೆ) ಗದ್ದಲ ಉಂಟುಮಾಡಿದ್ದವು.