ಮನೆ ಸುದ್ದಿ ಜಾಲ ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿಗೆ ಬಾಲಕ ಬಲಿ,  ಕುಟುಂಬಕ್ಕೆ 20 ಲಕ್ಷ ರೂ ಪರಿಹಾರ...

ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿಗೆ ಬಾಲಕ ಬಲಿ,  ಕುಟುಂಬಕ್ಕೆ 20 ಲಕ್ಷ ರೂ ಪರಿಹಾರ : ಅರಣ್ಯ ಇಲಾಖೆ

0

ಮಲೆ ಮಹದೇಶ್ವರ ಬೆಟ್ಟದಲ್ಲಿ ತಾಯಿ ಜೊತೆ ದರ್ಶನಕ್ಕೆ ತೆರಳಿದ ಬೆಂಗಳೂರಿನ ಬಾಲಕ ಹರ್ಷಿತ್ ಗೌಡ ಮೇಲೆ ಚಿರತೆ ದಾಳಿ ನಡೆಸಿತ್ತು. ತಾಯಿ ಕಣ್ಣ ಮುಂದೆ ಚಿರತೆ ಬಾಲಕನ ಹೊತ್ತೊಯ್ದು ಕೊಂದು ಹಾಕಿತ್ತು. ಹರ್ಷಿತ್ ಗೌಡ ಮೃತದೇಹ ಚಾಮರಾಜನಗರದಿಂದ ನಿನ್ನ ರಾತ್ರಿ ಬೆಂಗಳೂರಿಗೆ ತರಲಾಗಿದೆ.ಇಂದು ಅಂತ್ಯಕ್ರಿಯೆ ನಡೆದಿದೆ ಎನ್ನಲಾಗಿದೆ.

ಮೃತ ಹರ್ಷಿತ್ ಗೌಡ ಸಾವಿಗೆ ಅರಣ್ಯ ಇಲಾಖೆ ನಿರ್ಲಕ್ಷ್ಯ ಕಾರಣ ಎಂಬ ಆರೋಪ ಕೇಳಿಬಂದಿದೆ. ಇತ್ತ ಅರಣ್ಯ ಇಲಾಖೆ ಒಟ್ಟು 20 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದೆ. ಈ ಪೈಕಿ 5 ಲಕ್ಷ ರೂಪಾಯಿ ಮೊತ್ತವನ್ನು ಈಗಾಗಲೇ ಕುಟುಂಬಕ್ಕೆ ನೀಡಲಾಗಿದೆ. ಸುಮ್ಮನಹಳ್ಳಿ ಚಿತಾಗಾರದಲ್ಲಿ ಬಾಲಕ ಹರ್ಷಿತ್ ಗೌಡ ಅಂತ್ಯಸಂಸ್ಕಾರ ನಡೆದಿದೆ. ಮಗನ ಅಂತಿಮ ವಿಧಿವಿಧಾನ ನಡೆಯುತ್ತಿದ್ದಂತೆ ತಾಯಿ ಆಕ್ರಂದನ ಮುಗಿಲು ಮುಟ್ಟಿದೆ. ಪೋಷಕರ ಆಕ್ರಂದನ ನೋಡಿ ಕುಟುಂಬಸ್ಥರು ಕಣ್ಣೀರಾಗಿದ್ದಾರೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ಕಾಲ್ನಡಿಯಲ್ಲಿ ಸಾಗುತ್ತಿದ್ದ ವೇಳೆ ಚಿರತೆ ದಾಳಿ ಮಾಡಿದೆ. ತಾಯಿ ಕೈಹಿಡಿದು ಕೊಂಡು ಬಾಲಕ ಹರ್ಷಿತ್ ಗೌಡ ಸಾಗಿದ್ದ. ಈ ವೇಳೆ ಚಿರತೆ ದಾಳಿ ಮಾಡಿ ಬಾಲಕ ಹೊತ್ತೊಯ್ದಿದೆ. ತಾಯಿ ಚೀರಾಡಿದರೂ ಚಿರತೆ ಕೆಲವೇ ಕ್ಷಣದಲ್ಲಿ ದಾಳಿ ಮಾಡಿ ಬಾಲಕನ ಕೊಂದಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ, ಹುಲಿಗಳಿವೆ ಎಂಬ ಯಾವುದೇ ಬೋರ್ಡ್ ಇಲ್ಲ. ಇತ್ತ ಭಕ್ತರಿಗೆ ಅರಣ್ಯ ಇಲಾಖೆ ಯಾವುದೇ ಸೂಚನೆಯನ್ನು ನೀಡಿಲ್ಲ. ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ತಮ್ಮ ಮಗನ ಬಲಿ ಪಡೆದಿದೆ ಎಂದು ಮೃತ ಬಾಲಕನ ಪೋಷಕರು ಆರೋಪಿಸಿದ್ದಾರೆ ಎನ್ನಲಾಗಿದೆ.