ಪಾಟ್ನಾ (ಬಿಹಾರ): ಬಿಹಾರದ ಕೊಲೆ ಪ್ರಕರಣವೊಂದು ಇದೀಗ ಎಲ್ಲರನ್ನು ಬೆಚ್ಚಿಬೀಳಿಸಿದೆ. ಮೇ 10ರಂದು ದುರ್ಗಾವತಿ ನದಿ ಸೇತುವೆ ಕೆಳಗೆ ದೊರೆತ ಎರಡು ಸೂಟ್‌ಕೇಸ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇದನ್ನು ತೆರೆದು ನೋಡಿದಾಗ ಬೆಚ್ಚಿ ಬಿದ್ದಿದ್ದಾರೆ. ಕಾರಣ ಅದರಲ್ಲಿ ಪತ್ತೆಯಾಗಿದ್ದು ಎಂಟು ಛಿದ್ರಗೊಂಡ ಕೈಗಳು ಮತ್ತು ಕಾಲು ಮತ್ತು ಎರಡು ಮುಂಡ. ಇದೀಗ ತನಿಖೆಯಲ್ಲಿ ಇದು ಓರ್ವ ಪುರುಷ, ಒಬ್ಬ ಮಹಿಳೆ, ಓರ್ವ ಹುಡುಗ ಮತ್ತು ಒಬ್ಬ ಹುಡುಗಿ ದೇಹ ಭಾಗ ಎಂಬುದು ಬೆಳಕಿಗೆ ಬಂದಿದ್ದು ಘಟನೆ ಬೆನ್ನಲ್ಲೇ ಇಡೀ ಗ್ರಾಮಸ್ಥರು ಕೂಡ ಆತಂಕಕ್ಕೆ ಒಳಗಾಗಿದ್ದು, ಇವುಗಳ ಕುರಿತು ಪೊಲೀಸರು ತನಿಖೆಗೆ ಮುಂದಾದರು. ಈ ವೇಳೆ ಈ ದೇಹದ ಭಾಗದ ಸಂತ್ರಸ್ತರು ಕೆಲ ದಿನಗಳ ಹಿಂದೆಯೇ ಸಾವನ್ನಪ್ಪಿವುದು ವಿಧಿ ವಿಜ್ಞಾನ ಪರೀಕ್ಷೆಯಲ್ಲಿ ಬಯಲಾಗಿದೆ. ಈ ಸಂಬಂಧ ಮೇ 11ರಂದು ನಡೆದ ಘಟನೆಗೆ ಸಂಬಂಧಿಸಿದಂತೆ ರಾಮಗಢ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಇದಾದ ಬೆನ್ನಲ್ಲೇ ಮೇ 12ರಂದು ರಾಮಗಢ ಪೊಲೀಸ್ ಠಾಣೆ ವ್ಯಾಪ್ತಿಯ ಅಭಯೇದಿಯ ಗ್ರಾಮದ ಕಾಲುವೆಯ ಬಳಿ ಮತ್ತೆ ಕತ್ತರಿಸಿದ ದೇಹ ಭಾಗದ ಎರಡು ಮುಂಡಗಳನ್ನು ಹೊಂದಿದ್ದ ಟ್ರಾಲಿ ಬ್ಯಾಗ್‌ಗಳು ಪತ್ತೆಯಾಗಿದ್ದು, ಇದು ಮುಂಚೆ ಪತ್ತೆಯಾಗಿದ್ದ ದೇಹದ ಇನ್ನೆರಡು ಮುಂಡಗಳಾಗಿದ್ದವು ಎಂಬುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಈ ದೇಹದ ಭಾಗಗಳ್ನು ಕಾಲುವೆ ಮತ್ತು ನದಿ ನೀರಿನ ಬಳಿ ದೊರೆ ಕಾರಣ ಇವುಗಳ ಮೂಲ ಪತ್ತೆ ಹಚ್ಚುವಲ್ಲಿ ಹಿಡಿಯುವಲ್ಲಿ ಶ್ವಾನಗಳು ಕೂಡ ವಿಫಲವಾಗಿದ್ದು, ಇವುಗಳ ಸುಳಿವು ದೊರೆಯದಂತೆ ಆಯಿತು. ಅಲ್ಲದೇ, ದೊರೆತ ದೇಹದ ಭಾಗದ ನಾಲ್ವರು ನಾಪತ್ತೆಯಾಗಿರುವ ಕುರಿತು ಜಿಲ್ಲೆಯ ಯಾವುದೇ ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿರಲಿಲ್ಲ. ಅಲ್ಲದೆ, ಡೈವರ್‌ಗಳು ದುರ್ಗಾವತಿ ನದಿ ಮತ್ತು ಕಾಲುವೆಯಲ್ಲಿ ಶೋಧಿಸಿದರೂ ನಾಲ್ಕು ಶವಗಳ ತಲೆಗಳು ಪತ್ತೆಯಾಗಿಲ್ಲ. ಮೃತರನ್ನು ಪತ್ತೆಹಚ್ಚುವಲ್ಲಿ ಇದು ಪ್ರಮುಖ ಅಡಚಣೆಯಾಗಿತ್ತು. ಆದರೆ ಶವಗಳಿಂದ ನಮಗೆ ಕೇವಲ ಎರಡು ಸುಳಿವುಗಳು ಸಿಕ್ಕಿತ್ತು. ಅದರಲ್ಲಿ ಪ್ರಮುಖವಾಗಿದ್ದು ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾಗಿರುವ ಮಕ್ಕಳಿಗೆ ನೀಡಲಾಗುವ ಅಂಗನವಾಡಿ ಉಡುಗೆಯಾಗಿತ್ತು. ಈ ಉಡುಪುಗಳನ್ನು ಮಕ್ಕಳ ಅಭಿವೃದ್ಧಿ ಯೋಜನಾ ಅಧಿಕಾರಿಗಳು (ಸಿಡಿಪಿಒ) ಒದಗಿಸುತ್ತಾರೆ. ಇನ್ನೊಂದು ದರ್ಜಿಯ ಟ್ಯಾಗ್ ಇರುವ ಶರ್ಟ್ ಆಗಿತ್ತು. ಈ ಸುಳಿವಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದರು. ಶರ್ಟ್ ಹೊಲಿದ ದರ್ಜಿ ರಾಮಗಢ ಮೂಲದವರಾಗಿದ್ದರೂ ಅವರಿಂದ ಈ ಕುರಿತು ಹೆಚ್ಚಿನ ಸುಳಿವು ಲಭ್ಯವಾಗಲಿಲ್ಲ.
ಆದರೆ, ಅವರು ಈ ಶರ್ಟ್ ಕೆಲಸ ಪಡೆದವರ ನಂಬರ್ ನೀಡಿದರು. ಆದರೆ, ಈ ವ್ಯಕ್ತಿ ಎರಡು ಮತ್ತು ಮೂರು ಹಳ್ಳಿಗಳಿಂದ ಶರ್ಟ್ಗಳನ್ನು ಇವರ ಬಳಿ ಹೊಲಿಯಲು ಕಳುಹಿಸುತ್ತಿದ್ದರು. ಮಕ್ಕಳ ಮೇಲಿದ್ದ ಬಟ್ಟೆ ಆಧಾರದ ಮೇಲೆ ರಾಮಗಢ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ 151 ಅಂಗನವಾಡಿ ಕೇಂದ್ರಗಳನ್ನು ಪರಿಶೀಲಿಸಿದರು. ಇತ್ತೀಚೆಗೆ ಕೇಂದ್ರಗಳಿಗೆ ಬರುವುದನ್ನು ನಿಲ್ಲಿಸಿರುವ ಮಕ್ಕಳ ಬಗ್ಗೆ ಡೇಟಾವನ್ನು ಒದಗಿಸಲು ಕೋರಲಾಯಿತು. ಅದರಂತೆ, ಅದು ಕೃಷ್ಣ ಮುರಾರಿ ಗುಪ್ತಾ, ಅವರ ಪತ್ನಿ ದುರ್ಗೇಶ್ ಕುಮಾರಿ ಮಗಳು ಕೃತಿಕಾ ಎಂಬುದಾಗಿತ್ತು. ಅಲ್ಲದೇ, ಮಗು ಕೆಲವು ದಿನಗಳಿಂದ ಅಂಗನವಾಡಿ ಕೇಂದ್ರಕ್ಕೆ ಬರುವುದನ್ನು ನಿಲ್ಲಿಸಿರುವುದು ತಿಳಿದುಬಂದಿತ್ತು. ಅಂಗನವಾಡಿಯಲ್ಲಿ ದೊರೆತ ವಿಳಾಸದ ಆಧಾರದ ಮೇಲೆ ಅವರ ಮನೆಗೆ ಹೋಗಿ ಶೋಧಿಸಿದಾಗ ಮನೆ ಬೀಗ ಹಾಕಿದ್ದು, ನೆರೆ ಹೊರೆಯವರು ಅವರು ಅಜ್ಜಿ ಊರಿಗೆ ತೆರಳಿದ್ದಾಗಿ ಹೇಳಿದರು. ಆದರೆ, ಅವರು ಅಲ್ಲಿಯೂ ಕಂಡುಬಂದಿರಲಿಲ್ಲ. ದರ್ಜಿಯಿಂದ ಪಡೆದ ಮೊಬೈಲ್ ಫೋನ್ ಸಂಖ್ಯೆಯ ಸಿಡಿಆರ್ನಲ್ಲಿ ಅದು ಕೃಷ್ಣ ಮುರಾರಿ ಗುಪ್ತಾ ಎಂಬುವರಿಗೆ ಸೇರಿದ್ದು ಅನ್ನೋದು ಗೊತ್ತಾಯಿತು. ಈತ ತನ್ನ ಕುಟುಂಬವನ್ನು ಕೊಲೆ ಮಾಡಿದ ದಿನದಿಂದ ಅಂದರೆ, ಮೇ 7 ರಿಂದ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಕೃಷ್ಣ ಮುರಾರಿ ಗುಪ್ತಾ ನಾಲ್ವರು ಸಹೋದರರಲ್ಲಿ ಹಿರಿಯನಾಗಿದ್ದು, ಈತ ತಾಯಿ ಜೊತೆಗೆ ಅದೇ ಗ್ರಾಮದಲ್ಲಿ ವಾಸಿಸುತ್ತಿದ್ದ.
ಈತನ ಕಿರಿಯ ಸಹೋದರ ಹೈದರಾಬಾದ್‌ನಲ್ಲಿ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದು, ಘಟನೆಯ ಬಗ್ಗೆ ಅವನಿಗೆ ತಿಳಿದಿರಲಿಲ್ಲ. ಇತರೆ ಇಬ್ಬರು ಕಿರಿಯ ಸಹೋದರರಾದ ವಿಕಾಸ್ ಕುಮಾರ್ ಗುಪ್ತಾ ಮತ್ತು ರಾಹುಲ್ ಕುಮಾರ್ ಗುಪ್ತಾ ಅಲಿಯಾಸ್ ಗೌತಮ್ ಕುಮಾರ್ ಗುಪ್ತಾ ಅವರು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಅನುಮಾನಗಳು ಮತ್ತು ವಿಧಿವಿಜ್ಞಾನ ಸಾಕ್ಷ್ಯಗಳ ಹಿನ್ನೆಲೆಯಲ್ಲಿ, ಪೊಲೀಸರು ಕೃಷ್ಣ ಮುರಾರಿ ಗುಪ್ತಾ ಅವರ ಕಿರಿಯ ಸಹೋದರ ವಿಕಾಸ್ ಗುಪ್ತಾ ಅವರನ್ನು ವಿಚಾರಣೆಗಾಗಿ ಬಂಧಿಸಿದರು. ವಿಚಾರಣೆಯ ಸಮಯದಲ್ಲಿ, ಅವರು ಕೊಲೆಗಳನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ಗೌತಮ್, ಅವರ ಕಿರಿಯ ಸಹೋದರ ರಾಹುಲ್ ಮಾತ್ರವಲ್ಲದೆ, ಮಹಾರಾಷ್ಟ್ರದ ಸ್ನೇಹಿತ ದೀಪಕ್ ಕುಮಾರ್ ರಜಪೂತ್ ಮತ್ತು ಇತರೆ ಸಹಚರರು ಸಹ ಇದರಲ್ಲಿ ಭಾಗಿಯಾಗಿದ್ದಾರೆ. ಪೊಲೀಸರ ಹೇಳಿಕೆಗಳ ಪ್ರಕಾರ, ಕೌಟುಂಬಿಕ ಕಲಹ ಮತ್ತು ಹಣಕಾಸಿನ ಕಾರಣಕ್ಕೆ ಕೊಲೆಗೆ ವಿಕಾಸ್ ಯೋಜಿಸಿದ್ದ. ಬಿಹಾರಕ್ಕೆ ಹಿಂತಿರುಗುವ ಮೊದಲು ಮಹಾರಾಷ್ಟ್ರದಲ್ಲಿ ದೀಪಕ್ ಜೊತೆಗೆ ಕೊಲೆಗಳಿಗೆ ಸಂಚು ರೂಪಿಸಿದ್ದ. ಕಳೆದ ಮೇ 7 ರ ಬೆಳಗ್ಗೆ ಅವರು ತಮ್ಮ ತಾಯಿ ಪ್ರೇಮಲತಾ ಅವರ ಮುಂದೆಯೇ ಕೃಷ್ಣನನ್ನು ಚಾಕುವಿನಿಂದ ಇರಿದು ಕೊಂದರು. ಕೃಷ್ಣನ ಪತ್ನಿ ದುರ್ಗೇಶ್ ಅವನ ಕಿರುಚಾಟ ಕೇಳಿ ಅಲ್ಲಿಗೆ ಧಾವಿಸಿದರು. ಅವರನ್ನೂ ಕೊಲ್ಲಲಾಯಿತು. ಶಾಲೆಯಿಂದ ಮರಳಿದ ಮಗಳು ಕೃತಿಕಾ, ಎಂಟು ವರ್ಷದ ಮಗ ಅಂಶ್ನನ್ನು ಕೂಡ ಕೊಂದರು.
ಈ ಕುರಿತು ಪೊಲೀಸರಿಗೆ ಸುಳಿವು ಸಿಗದಂತೆ ಮಾಡಲು, ಒಟಿಟಿ ವೆಬ್ ಸರಣಿಯಿಂದ ಪ್ರೇರಿತಗೊಂಡು ಆರೋಪಿಗಳು ಶವಗಳನ್ನು ವಿದ್ಯುತ್ ಕಟ್ಟರ್ ಸಹಾಯದಿಂದ ಕತ್ತರಿಸಿ, ಟ್ರಾಲಿ ಬ್ಯಾಗ್‌ಗಳು ಮತ್ತು ಗೋಣಿ ಚೀಲಗಳಲ್ಲಿ ತುಂಬಿಸಿ, ನಂತರ ಬೇರೆ ಬೇರೆ ಸ್ಥಳಗಳಲ್ಲಿ ಎಸೆದು, ತಲೆಗಳನ್ನು ಪ್ರತ್ಯೇಕವಾಗಿ ವಿಲೇವಾರಿ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅತ್ಯಂತ ಸವಾಲಿನ ಪ್ರಕರಣಗಳಲ್ಲಿ ಒಂದಾಗಿತ್ತು. ಅಪರಾಧದ ಎರಡೂ ತುದಿಗಳು, ಬಲಿಪಶುಗಳು ಮತ್ತು ಅಪರಾಧಿಗಳು ಯಾರೆಂದು ತಿಳಿದಿರಲಿಲ್ಲ. ಅಂಗನವಾಡಿಯ ಉಡುಗೆ ಮತ್ತು ಶರ್ಟ್ ಮಾತ್ರ ನಮ್ಮ ಸುಳಿವುಗಳಾಗಿದ್ದವು. ನಾವು ಕಠಿಣ ಪರಿಶ್ರಮ ಮತ್ತು ದೃಢ ನಿಶ್ಚಯದಿಂದ ಅದನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಮಾಹಿತಿ ನೀಡಿದರು ಎನ್ನಲಾಗಿದೆ.

















