ಮನೆ ರಾಜ್ಯ ಮನೆಯ ಮೇಲ್ಛಾವಣಿ ಕುಸಿದು ಮಹಿಳೆ ಜೀವಂತ ಸಮಾಧಿ..!

ಮನೆಯ ಮೇಲ್ಛಾವಣಿ ಕುಸಿದು ಮಹಿಳೆ ಜೀವಂತ ಸಮಾಧಿ..!

0

ವಿಜಯಪುರ : ಮನೆಯ ಮೇಲ್ಛಾವಣಿ ಕುಸಿದು ಮಹಿಳೆ ಜೀವಂತ ಸಮಾಧಿಯಾದ ಘಟನೆ ವಿಜಯಪುರ ಜಿಲ್ಲೆ ನಿಡಗುಂದಿ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಗೌರೀಶ್ವರ ದೇವಸ್ಥಾನ ಬಳಿ ಘಟನೆ ನಡೆದಿದ್ದು, ಮಹಾದೇವಿ ವಾರದ (55) ಸಾವಿಗೀಡಾಗಿದ್ದಾರೆ.

ಮೊನ್ನೆ ಸುರಿದ ಮಳೆಗೆ ನೆನೆದಿದ್ದ ಹಳೆಯ ಮನೆ ಮೇಲ್ಛಾವಣಿ ಕುಸಿದು ಅನಾಹುತ ಸಂಭವಿಸಿದೆ. ಮನೆಯಲ್ಲಿ ಮಹಾದೇವಿ ಮಲಗಿದ್ದಾಗ, ನಸುಕಿನ ಜಾವ ಮೇಲ್ಛಾವಣಿ ಕುಸಿದು ಜೀವಂತ ಸಮಾಧಿಯಾಗಿದ್ದಾರೆ. ಮನೆಯ ಹೊರಗೆ ಪತಿ ಶಿವಾನಂದ ಮಲಗಿದ್ದ ಕಾರಣ ಪ್ರಾಣಾಪಾಯದಿಂದ ಪರಾಗಿದ್ದಾನೆ. ಸ್ಥಳಕ್ಕೆ ನಿಡಗುಂದಿ ಪೊಲೀಸರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.