ಮನೆ ಸುದ್ದಿ ಜಾಲ ಸೇವಾ ಭದ್ರತೆ ಒದಗಿಸಿ ಹಾಗೂ ಗೌರವಧನ ಹೆಚ್ಚಿಸಲು ಅತಿಥಿ ಉಪನ್ಯಾಸಕರ ಪ್ರತಿಭಟನೆ

ಸೇವಾ ಭದ್ರತೆ ಒದಗಿಸಿ ಹಾಗೂ ಗೌರವಧನ ಹೆಚ್ಚಿಸಲು ಅತಿಥಿ ಉಪನ್ಯಾಸಕರ ಪ್ರತಿಭಟನೆ

0

ಉಪನ್ಯಾಸಕರ ಸೇವೆಯನ್ನು ಮುಂದುವರಿಸಬೇಕು, ₹30 ಸಾವಿರ ಕನಿಷ್ಠ ಗೌರವಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆ ಪ್ರತಿಭಟನೆ ನಡೆಸಿತು. ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಅತಿಥಿ ಉಪನ್ಯಾಸಕರು, ಶೀಘ್ರ ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿದರು. ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಅತಿಥಿ ಉಪನ್ಯಾಸಕರನ್ನು ಈ ವರ್ಷವೂ ಸೇವೆಯಲ್ಲಿ ಮುಂದುವರಿಸಿ, ಸೇವಾ ಭದ್ರತೆ ನೀಡಬೇಕು. ಕೇವಲ ಹೆಚ್ಚು ಮೆರಿಟ್‌ ಇರುವ ಅಭ್ಯರ್ಥಿಗಳನ್ನು ಪ್ರತಿ ವರ್ಷವೂ ನೇಮಕ ಮಾಡಿಕೊಳ್ಳಲು ಆದೇಶ ನೀಡುತ್ತಿರುವುದು, ಸೇವಾ ಹಿರಿತನವುಳ್ಳ ಅತಿಥಿ ಉಪನ್ಯಾಸಕರಿಗೆ ಮಾಡುವ ಅನ್ಯಾಯವಾಗಿದೆ. ಈ ನಿಯಮದಿಂದ ಪ್ರತಿ ವರ್ಷವೂ ಹಲವರು ಕೆಲಸ ಕಳೆದುಕೊಂಡು ಬೀದಿ ಪಾಲಾಗುತ್ತಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿದರು ಎನ್ನಲಾಗುತ್ತಿದೆ.

ಈ ಕುರಿತು ವಾರಕ್ಕೆ ಕೇವಲ 10ರಿಂದ 12 ಗಂಟೆ ಕಾರ್ಯಭಾರ ನೀಡಬೇಕೆಂದು ನಿಯಮವಿದ್ದರೂ 20 ಗಂಟೆಗಳಿಗಿಂತ ಹೆಚ್ಚು ಕಾರ್ಯಭಾರ ನೀಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯದಲ್ಲಿ 5 ಸಾವಿರಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೆ. ಪಿ.ಎಫ್, ಇಡುಗಂಟು ವ್ಯವಸ್ಥೆ ಇಲ್ಲ. ಎರಡು ತಿಂಗಳಲ್ಲಿ ಇಬ್ಬರು ಅಕಾಲಿಕ ಮರಣ ಹೊಂದಿದ್ದಾರೆ. ಮೃತರ ಕುಟುಂಬಗಳಿಗೆ ಸರ್ಕಾರ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಸಹಾಯ ದೊರಕಿಲ್ಲ. 10ರಿಂದ 15 ವರ್ಷ ಕೆಲಸ ಮಾಡಿರುವ ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಸರ್ಕಾರ ₹14 ಸಾವಿರ ಗೌರವ ಧನ ನೀಡುತ್ತಿದ್ದು, ಇದರಿಂದ ಜೀವನ ನಿರ್ವಹಣೆ ಕಷ್ಟ. ಹಾಗಾಗಿ ₹30 ಸಾವಿರ ನೀಡಬೇಕು. ಸೇವಾ ಪ್ರಮಾಣ ಪತ್ರ, ಗುರುತಿನ ಚೀಟಿ ಮತ್ತು ಕೃಪಾಂಕ ನೀಡುವುದರ ಮುಖಾಂತರ ಸೇವಾ ಭದ್ರತೆ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು ಎಂದು ತಿಳಿದುಬಂದಿದೆ.