ಸಿಬ್ಬಂದಿ ನೇಮಕಾತಿ ಆಯೋಗವು ದೆಹಲಿ ಪೊಲೀಸ್ ಇಲಾಖೆಯಲ್ಲಿ ಅಗತ್ಯ ಪೊಲೀಸ್ ಕಾನ್ಸ್‌ಟೇಬಲ್ (ಡ್ರೈವರ್) ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದೆ.
ಒಟ್ಟು 1411 ಹುದ್ದೆಗಳಿಗೆ ದ್ವಿತೀಯ ಪಿಯುಸಿ/ತತ್ಸಮಾನ ವಿದ್ಯಾರ್ಹತೆ ಪಡೆದವರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳ ನೇಮಕಾತಿಗೆ ಎಸ್‌ಎಸ್‌ಸಿ ನೇಮಕಾತಿ ಪರೀಕ್ಷೆ ನಡೆಸಲಿದೆ. ಹೆವಿ ವೆಹಿಕಲ್‌ಗಳನ್ನು ಕಾನ್ಫಿಡೆನ್ಸ್‌ನಿಂದ ಡ್ರೈವ್ ಮಾಡುವವರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 30 ವರ್ಷವನ್ನು ದಿನಾಂಕ 01-07-2022 ಕ್ಕೆ ಮೀರಿರಬಾರದು. ಒಬಿಸಿ’ಗೆ 3 ವರ್ಷ, ಎಸ್‌ಸಿ / ಎಸ್‌ಟಿ’ಗೆ 5 ವರ್ಷ, ಮಾಜಿ ಸೈನಿಕರಿಗೆ 3 ವರ್ಷ ವಯೋಮಿತಿ ಸಡಿಲಿಕೆ ನಿಯಮ ಇರುತ್ತದೆ.
ವರ್ಗಾವಾರು ಹುದ್ದೆಗಳ ವಿವರ: ಜೆನೆರಲ್ /UR : 604 ಹುದ್ದೆಗಳು, ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು: 142 ಹುದ್ದೆಗಳು, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು : 353 ಹುದ್ದೆಗಳು, ಎಸ್‌ಸಿ : 262 ಹುದ್ದೆಗಳು, ಎಸ್‌ಟಿ : 50 ಹುದ್ದೆಗಳಿವೆ.
ಜುಲೈ 8 ರಿಂದ ಅರ್ಜಿ ಸಲ್ಲಿಸಬಹುದಾಗಿದ್ದು, ಜುಲೈ 29 ಅರ್ಜಿ ಸಲ್ಲಿಸಲು ಕೊನೆಯ ದಿನ. ಆನ್‌ಲೈನ್ ಮೂಲಕ ಹಾಗೂ ಚಲನ್ ಮೂಲಕ ಶುಲ್ಕ ಪಾವತಿಗೆ ಜುಲೈ 30 ಕೊನೆ ದಿನ. ಅರ್ಜಿ ತಿದ್ದುಪಡಿಗೆ ಆಗಸ್ಟ್ 2 ರಂದು ರಾತ್ರಿ 11 ಗಂಟೆಯವರೆಗೆ ವಿಂಡೋ ಓಪನ್ ಮಾಡಬಹುದು. ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ ಅಕ್ಟೋಬರ್ 2022.
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ಟ್ರೇಡ್ ಟೆಸ್ಟ್ ಅನ್ನು ನಡೆಸಲಾಗುತ್ತದೆ. ವೇತನ ಶ್ರೇಣಿ ಪೇ ಲೆವೆಲ್ -3 ಪ್ರಕಾರ ರೂ.21700 – 69,100 ಆಗಿದೆ.
ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಎಸ್‌ಎಸ್‌ಸಿ ವೆಬ್‌ಸೈಟ್ https://ssc.nic.in ಗೆ ಭೇಟಿ ನೀಡಬಹುದು.