ಮೈಸೂರು (Mysuru): ಮೈಸೂರು ಮಹಾನಗರಪಾಲಿಕೆ ವತಿಯಿಂದ ಕೈಗೊಂಡಿರುವ ಮಹಾತ್ಮಗಾಂಧಿ ನಗರವಿಕಾಸ ಯೋಜನೆಯಡಿ ರೂ. 2 ಕೋಟಿ ಅನುದಾನದಲ್ಲಿ ನಗರಪಾಲಿಕೆಯ ವಾರ್ಡ್ ನಂ.24, 25 ರಲ್ಲಿ ರಸ್ತೆ ಅಭಿವೃದ್ಧಿ, ಚರಂಡಿ ನಿರ್ಮಾಣ, ಫುಟ್ ಬಾತ್ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಲ್. ನಾಗೇಂದ್ರ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ವಾರ್ಡ್ ನಂ.24ರ ನಗರಪಾಲಿಕೆ ಸದಸ್ಯರಾದ ಶ್ರೀ ರಮಣಿ, ವಾರ್ಡ್ ನಂ.25ರ ನಗರಪಾಲಿಕೆ ಸದಸ್ಯರಾದ ಶ್ರೀ ರಂಗಸ್ವಾಮಿ, ನಗರ ಪಾಲಿಕೆಯ ಕಾರ್ಯಪಾಲಕ ಇಂಜಿನಿಯರ್ ಶ್ರೀ ರಂಜಿತ್ ಕುಮಾರ್, ಅಭಿವೃದ್ದಿ ಅಧಿಕಾರಿ ಶ್ರೀ ಮಂಜುನಾಥ್, ಅಭಿಯಂತರರಾದ ಶ್ರೀ ಮೋಹನ್, ಶ್ರೀ ಕೃಷ್ಣಮೂರ್ತಿ, ನಗರಪಾಲಿಕೆ ಮಾಜಿ ಸದಸ್ಯರಾದ ಶ್ರೀ ದಾಸಪ್ರಕಾಶ್, ಎಂ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕರಾದ ಶ್ರೀ ರವಿ ರಾಜಕೀಯ, ಉಪಾಧ್ಯಕ್ಷ ಶ್ರೀ ಕುಮಾರಗೌಡ, ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀ ಅರ್ಜುನ್, ವಾರ್ಡ ಅಧ್ಯಕ್ಷರಾದ ಶ್ರೀ ವಿನಯ್ ಕುಮಾರ್, ಶ್ರೀ ಜೀವಧಾರ ಟ್ರಸ್ಟ್ ಶ್ರೀ ಗಿರೀಶ್, ಶ್ರೀ ವಿಜಯ್ (ಕೇಬಲ್) ಮತ್ತಿತರರು ಉಪಸ್ಥಿತರಿದ್ದರು.