ಮನೆ ರಾಷ್ಟ್ರೀಯ ಭಾರತದ ಸಂತ ಪರಂಪರೆ ಏಕ ಭಾರತ, ಶ್ರೇಷ್ಠ ಭಾರತದ ಪರವಾಗಿದೆ: ಪ್ರಧಾನಿ ಮೋದಿ

ಭಾರತದ ಸಂತ ಪರಂಪರೆ ಏಕ ಭಾರತ, ಶ್ರೇಷ್ಠ ಭಾರತದ ಪರವಾಗಿದೆ: ಪ್ರಧಾನಿ ಮೋದಿ

0

ನವದೆಹಲಿ (NewDelhi): ಭಾರತದ ಸಂತ ಪರಂಪರೆಯು ಯಾವಾಗಲೂ ʼಏಕ ಭಾರತ, ಶ್ರೇಷ್ಠ ಭಾರತದ ಪರವಾಗಿ ನಿಂತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.

ಸ್ವಾಮಿ ಆತ್ಮಸ್ಥಾನಂದ ಅವರ ಜನ್ಮ ಶತಮಾನೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿದ್ದಾರೆ.

ರಾಮಕೃಷ್ಣ ಮಿಷನ್‌ ಸ್ಥಾಪಿಸಿದ ಸ್ವಾಮಿ ವಿವೇಕಾನಂದರು ಭಾರತವನ್ನು ಶ್ರೇಷ್ಠಗೊಳಿಸಲು ಶ್ರಮಿಸಿದರು. ದೇಶದ ಎಲ್ಲಾ ಭಾಗಗಳಲ್ಲಿ ವಿವೇಕಾನಂದರ ಪ್ರಭಾವವಿದೆ. ಅವರ ಸಂಚಾರದಿಂದಾಗಿ ಗುಲಾಮಗಿರಿಯ ಯುಗದಲ್ಲಿ ರಾಷ್ಟ್ರೀಯ ಪ್ರಜ್ಞೆ ಜಾಗೃತವಾಯಿತು. ವಿವೇಕಾನಂದರ ಈ ಸಂಪ್ರದಾಯವನ್ನು ಆತ್ಮಸ್ಥಾನಂದರು ತಮ್ಮ ಜೀವನದುದ್ದಕ್ಕೂ ಮುನ್ನಡೆಸಿಕೊಂಡು ಬಂದರು ಎಂದು ಮೋದಿ ತಿಳಿಸಿದರು.

ನೂರಾರು ವರ್ಷಗಳ ಹಿಂದಿನ ಆದಿ ಶಂಕರಾಚಾರ್ಯರಿರಲಿ ಅಥವಾ ಆಧುನೀಕ ಕಾಲದಲ್ಲಿ ಸ್ವಾಮಿ ವಿವೇಕಾನಂದರಿರಲಿ ಭಾರತದ ಸಂತ ಪರಂಪರೆಯು ಯಾವಾಗಲೂ ಏಕ ಭಾರತ, ಶ್ರೇಷ್ಠ ಭಾರತದ ಪರವಾಗಿತ್ತು. ರಾಮಕೃಷ್ಣ ಮಿಷನ್ ಸ್ಥಾಪನೆಯು ಇದೇ ಕಲ್ಪನೆಗೆ ಸಂಬಂಧಿಸಿದ್ದಾಗಿದೆ ಎಂದು ಪ್ರಧಾನಿಯವರು ವಿಡಿಯೋ ಸಂದೇಶದಲ್ಲಿ ಅಭಿಪ್ರಾಯಪಟ್ಟಿದ್ದಾರೆ.