ಮನೆ ಸುದ್ದಿ ಜಾಲ ಅಫ್ಘಾನಿಸ್ತಾನ ವಿರುದ್ಧ ಗೆಲುವು ಸಾಧಿಸಿ ದಾಖಲೆ ಬರೆದ ಭಾರತ

ಅಫ್ಘಾನಿಸ್ತಾನ ವಿರುದ್ಧ ಗೆಲುವು ಸಾಧಿಸಿ ದಾಖಲೆ ಬರೆದ ಭಾರತ

0

ಭಾರತ ಮತ್ತು ಅಫ್ಘಾನಿಸ್ತಾನ ಮಧ್ಯೆ ನಡೆದಿದ್ದ ಏಕೈಕ ಟೆಸ್ಟ್​ ಪಂದ್ಯ ಕೇವಲ 3 ದಿನಗಳಲ್ಲೇ ಮುಕ್ತಾಯಗೊಂಡಿದೆ. ಮುಲ್ಲಾನ್ಪುರದ ಮಹಾರಾಜ ಯಾದವೀಂದ್ರ ಸಿಂಗ್​ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡಿದ ಟೀಮ್​ ಇಂಡಿಯಾ ಇನ್ನಿಂಗ್ಸ್​ ಸಮೇತ 300 ರನ್​ಗಳಿಂದ ಗೆಲುವು ಸಾಧಿಸಿತು. ಟೆಸ್ಟ್​ ಕ್ರಿಕೆಟ್ ಇತಿಹಾಸದಲ್ಲಿ ಭಾರತ ಸಾಧಿಸಿದ ಅತೀ ದೊಡ್ಡ ಇನ್ನಿಂಗ್ಸ್​ ಗೆಲುವು ಇದಾಗಿದೆ. ಇದಕ್ಕೂ ಮೊದಲು, ಅಕ್ಟೋಬರ್ 2018 ರಲ್ಲಿ ರಾಜ್‌ಕೋಟ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ಇನ್ನಿಂಗ್ಸ್ ಮತ್ತು 272 ರನ್‌ಗಳಿಂದ ಜಯಗಳಿಸಿತ್ತು. ಈ ಪಂದ್ಯದಲ್ಲಿ ಟಾಸ್​ ಗೆದ್ದ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಟಿದ್ದ ಭಾರತ 564/8 ರನ್​ಗಳ ಬೃಹತ್​ ಮೊತ್ತ ಕಲೆಹಾಕಿ ಇನ್ನಿಂಗ್ಸ್​ ಡಿಕ್ಲೇರ್​ ಘೋಷಣೆ ಮಾಡಿತು. ಇದಕ್ಕೆ ಪ್ರತಿಯಾಗಿ ಅಫ್ಘಾನ್ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 152 ರನ್‌ಗಳಿಗೆ ಆಲೌಟ್​ ಆಯ್ತು. ಮೊದಲ ಇನ್ನಿಂಗ್ಸ್‌ನ ಆಧಾರದ ಮೇಲೆ, ಭಾರತವು 412 ರನ್‌ಗಳ ಮುನ್ನಡೆ ಸಾಧಿಸಿತು. ಅಲ್ಲದೇ ಅಫ್ಘಾನ್​ ಮೇಲೆ ಭಾರತ ಫಾಲೋ ಆನ್‌ಗೆ ಹೇರಿತು. ನಂತರ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಅಫ್ಘಾನಿಸ್ತಾನದ ಕೇವಲ 112 ರನ್‌ಗಳಿಗೆ ಸೀಮಿತವಾಯಿತು ಎನ್ನಲಾಗಿದ.

ಹಾಗೂ ಎರಡನೇ ಇನ್ನಿಂಗ್ಸ್​ನಲ್ಲೂ ಅಫ್ಘಾನ್ ತಂಡ ಕಳಪೆ ಆರಂಭ ಪಡೆದುಕೊಂಡಿತು. ಅಬ್ದುಲ್ ಮಲಿಕ್ ಅವರನ್ನು ಮೊಹಮ್ಮದ್ ಸಿರಾಜ್ ಕೇವಲ 8 ರನ್‌ಗಳಿಗೆ ಔಟ್ ಮಾಡಿದರು. ಅಲ್ಲಿಂದ ಅಫ್ಘಾನಿಸ್ತಾನ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಂಡಿತು. ಆರಂಭಿಕ ಸೆದಿಕುಲ್ಲಾ ಅಟಲ್ 42 ರನ್‌ಗಳೊಂದಿಗೆ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ರಹಮಾನುಲ್ಲಾ ಗುರ್ಬಾಜ್ (24 ರನ್) ಮತ್ತು ರಹಮತ್ ಶಾ (13 ರನ್) ಎರಡಂಕಿಯ ರನ್ ಗಳಿಸಿದರು. ಉಳಿದ ಬ್ಯಾಟರ್​ಗಳು ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ಸ್ಪಿನ್ ಬೌಲರ್‌ಗಳಾದ ವಾಷಿಂಗ್ಟನ್ ಸುಂದರ್ ನಾಲ್ಕು ವಿಕೆಟ್ ಮತ್ತು ಕುಲದೀಪ್ ಯಾದವ್ ಮೂರು ವಿಕೆಟ್ ಪಡೆದರು. ಶರಫುದ್ದೀನ್ ಗಾಯದಿಂದಾಗಿ ಬ್ಯಾಟಿಂಗ್ ಮಾಡಲಿಲ್ಲ. ಅಫ್ಘಾನ್ ತಂಡಕ್ಕೆ ಮೊದಲ ಇನ್ನಿಂಗ್ಸ್ ನಲ್ಲಿ ಉತ್ತಮ ಆರಂಭ ಸಿಗಲಿಲ್ಲ. ಎರಡನೇ ದಿನದ ಆಟದಲ್ಲೇ ಅಫ್ಘಾನಿಸ್ತಾನ ಐದು ವಿಕೆಟ್ ಕಳೆದುಕೊಂಡಿತು. ಸ್ಪಿನ್ನರ್ ಮಾನವ್ ಸುತಾರ್, ಅಬ್ದುಲ್ ಮಲಿಕ್ (16 ರನ್), ರಹಮಾನಲ್ಲಾ ಗುರ್ಬಾಜ್ (17 ರನ್) ಮತ್ತು ಅಫ್ಸರ್ ಜಜೈ (3 ರನ್) ವಿಕೆಟ್ ಪಡೆದರು. ಸುತಾರ್ ಅವರ ಚೊಚ್ಚಲ ಪಂದ್ಯ ಇದಾಗಿತ್ತು.

ಮತ್ತೊಂದೆಡೆ, ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ ಸೆಡಿಕುಲ್ಲಾ ಅಟಲ್ (17 ರನ್) ಮತ್ತು ನಾಯಕ ಹಶ್ಮತುಲ್ಲಾ ಶಾಹಿದಿ (20 ರನ್) ಅವರನ್ನು ಪೆವಿಲಿಯನ್ಗೆ ಕಳುಹಿಸಿದರು. ರಹಮತ್ ಶಾ ಅದ್ಭುತ ಬ್ಯಾಟಿಂಗ್ ಮೂಲಕ ಅಫ್ಘಾನ್ ಇನ್ನಿಂಗ್ಸ್ ನಿಭಾಯಿಸಲು ಪ್ರಯತ್ನಿಸಿದರು. ಮೂರನೇ ದಿನದಾಟದಲ್ಲಿ, ಅಜ್ಮತುಲ್ಲಾ ಉಮರ್ಜೈ (0) ಅವರನ್ನು ಔಟ್ ಮಾಡುವ ಮೂಲಕ ಪ್ರಸಿದ್ಧ್ ಕೃಷ್ಣ ಭಾರತ ತಂಡಕ್ಕೆ ಆರಂಭಿಕ ಯಶಸ್ಸನ್ನು ತಂದುಕೊಟ್ಟರು, ರಹಮತ್ ಶಾ ತಮ್ಮ ಅದ್ಭುತ ಬ್ಯಾಟಿಂಗ್ ಫಾರ್ಮ್ ಅನ್ನು ಮುಂದುವರಿಸಿದರು, ಭಾರತ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 50ಕ್ಕೂ ಹೆಚ್ಚು ಸ್ಕೋರ್ ಗಳಿಸಿದ ಮೊದಲ ಅಫ್ಘಾನ್ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಶರಫುದ್ದೀನ್ ಅಶ್ರಫ್ (11) ರಹಮತ್‌ಗೆ ಬೆಂಬಲ ನೀಡಲು ಪ್ರಯತ್ನಿಸಿದರು, ಆದರೆ ಮಾನವ್ ಸುತಾರ್ ಅವರ ಇನ್ನಿಂಗ್ಸ್‌ಗೆ ಅಂತ್ಯ ಹಾಡಿದರು. ನಂತರ ಮಾನವ್ ಸುತಾರ್ ರಹಮತ್ ಶಾ ಅವರ ವಿಕೆಟ್​ ಪಡೆದು ಐದು ವಿಕೆಟ್ ಗೊಂಚಲು ಪೂರ್ಣಗೊಳಿಸಿದರು. ರಹಮತ್ 135 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನಿಂದ 60 ರನ್ ಗಳಿಸಿದರು. ಸುತಾರ್ ಅಲ್ಲಿಗೆ ನಿಲ್ಲಲಿಲ್ಲ, ಮೊಹಮ್ಮದ್ ಸಲೀಂ ಸಫಿ (0) ಅವರನ್ನು ಔಟ್ ಮಾಡಿ ತಮ್ಮ ಆರನೇ ವಿಕೆಟ್ ಪಡೆದರು ಎಂಬುದ್ದಾಗಿದೆ.