ಮನೆ ಉದ್ಯೋಗ ಮಂಗಳೂರು ಗ್ರಾ.ಪಂನಲ್ಲಿ 14 ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ

ಮಂಗಳೂರು ಗ್ರಾ.ಪಂನಲ್ಲಿ 14 ಹುದ್ದೆ ನೇಮಕಾತಿಗೆ ಅರ್ಜಿ ಆಹ್ವಾನ

0

ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಮಂಗಳೂರು ಗ್ರಾಮ ಪಂಚಾಯತಿಯಲ್ಲಿ 14 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್​ಗಳಲ್ಲಿ ಕೆಲಸ ಮಾಡಲು ಬೇರ್​ ಫುಟ್​​​ ಟೆಕ್ನಿಷಿಯನ್ ​ ಹುದ್ದೆಗೆ ಅಧಿಸೂಚನೆ ಹೊರಡಿಸಲಾಗಿದೆ.

ಸ್ಥಳೀಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಎಸ್​ಎಸ್​ಎಲ್​ಸಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಗಳು ಅರ್ಜಿಯನ್ನು ಆಫ್​ಲೈನ್​ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 15 ಆಗಿದೆ.

ಈ ಹುದ್ದೆಗೆ ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಕೆಗೆ ಅರ್ಹರಾಗಿದ್ದಾರೆ. ಅಭ್ಯರ್ಥಿಗಳು ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿ ಹಿಂದಿನ 3 ಅಥವಾ 2 ವರ್ಷಗಳಲ್ಲಿ 25 ದಿನಗಳಿಗೆ ಕಡಿಮೆ ಇಲ್ಲದಷ್ಟ ಕೂಲಿಗಾರರಾಗಿ ಕೆಲಸ ಮಾಡಿರಬೇಕು.

ಬೇರ್​ ಫುಟ್​​​ ಟೆಕ್ನಿಷಿಯನ್​ ಹುದ್ದೆಗೆ 14 ಸ್ಥಾನಗಳು ಖಾಲಿ ಇದ್ದು, ಮಾಸಿಕ ವೇತನ 17000 ರೂ ನೀಡಲಾಗುತ್ತದೆ.

ವಿದ್ಯಾರ್ಹತೆ: ಅಧಿಸೂಚನೆ ಪ್ರಕಾರ ಅಭ್ಯರ್ಥಿಯೂ 10ನೇ ತರಗತಿAdd Newಯನ್ನು ಪಾಸ್​ ಮಾಡಿರಬೇಕು.

ವಯಸ್ಸಿನ ಮಿತಿ: ಅಧಿಸೂಚನೆ ಅನುಸಾರ ಅಭ್ಯರ್ಥಿಯು ಕನಿಷ್ಠ 18 ಮತ್ತು ಗರಿಷ್ಠ 45 ವರ್ಷ ಮೀರಿರಬಾರದು.

ವಿಶೇಷ ಸೂಚನೆ: ಈ ಹುದ್ದೆಗೆ ಎಲ್ಲಾ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳಾ ಅಭ್ಯರ್ಥಿಗಳಿಗೆ ಪ್ರಾಧ್ಯಾನ್ಯತೆ ಇರಲಿದೆ.

ಅರ್ಜಿ ಸಲ್ಲಿಕೆ ವಿಧಾನ : ಆಫ್​ಲೈನ್ ಮುಖಾಂತರ​

ಅರ್ಜಿ ಶುಲ್ಕ: ವಿನಾಯಿತಿ ನೀಡಲಾಗಿದೆ

ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: ಜುಲೈ 4, 2022

ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ, 2022

ಅರ್ಜಿ ಸಲ್ಲಿಕೆ ಪ್ರಕ್ರಿಯೆ: ಈ ಹುದ್ದೆಗೆ ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಕೆಳಗಿನ ವಿಳಾಸಕ್ಕೆ ಖುದ್ದು ಹೋಗಿ ಅರ್ಜಿ ಸಲ್ಲಿಸಬೇಕು.

ಅರ್ಜಿ ಪಡೆಯ ಸ್ಥಳ: ಮಂಗಳೂರು ನಗರದ ಉರ್ವ ಸ್ಟೋರ್​ನಲ್ಲಿರುವ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿರುವ ಅಭಿವೃದ್ಧಿ ಶಾಖೆಯಲ್ಲಿ ಸಿಗುವ ನಿಗದಿತ ಅರ್ಜಿಯನ್ನು ಅಭ್ಯರ್ಥಿಗಳು ಭರ್ತಿ ಮಾಡಿ ಸಲ್ಲಿಸಬೇಕು.

ಅರ್ಜಿಯಲ್ಲಿ ಅಭ್ಯರ್ಥಿ ವಿವರ, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಮೊಬೈಲ್ ಸಂಖ್ಯೆಯನ್ನು, ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆಯನ್ನು ನಮೂದಿಸಬೇಕು.

ಅರ್ಜಿ ಭರ್ತಿ ವೇಳೆ ಮಹಾತ್ಮಗಾಂಧಿ ನರೇಗಾ ಯೋಜನೆಯಲ್ಲಿ ಕಾರ್ಯ ನಿರ್ವಹಣೆ ಮಾಡಿದ ವಿವರವನ್ನು ನೀಡಬೇಕು.

ಜಾತಿ ಮೀಸಲಾತಿ ಪ್ರಮಾಣ ಪತ್ರವಿದ್ದಲ್ಲಿ ಆ ಪತ್ರವನ್ನು ಅರ್ಜಿಯೊಂದಿಗೆ ಲಗತ್ತಿಸಬೇಕು.

ಅಭ್ಯರ್ಥಿ ದಾಖಲೆ ಹೊಂದಿರುವುದು ಅವಶ್ಯ

ಎಸ್​ಎಸ್​ಎಲ್​ಸಿ ಅಂಕಪಟ್ಟಿ

ನರೇಗಾ ಜಾಬ್​ ಕಾರ್ಡ್​

ಜಾತಿ ಪ್ರಮಾಣ ಪತ್ರ