ಮನೆ ಅಪರಾಧ ಸುಶಾಂತ್ ಗೆ ನಶೆ ಏರಿಸಿದ ತಾರೆ ರಿಯಾ ಚಕ್ರವರ್ತಿ: ಎನ್‍ ಸಿಬಿ

ಸುಶಾಂತ್ ಗೆ ನಶೆ ಏರಿಸಿದ ತಾರೆ ರಿಯಾ ಚಕ್ರವರ್ತಿ: ಎನ್‍ ಸಿಬಿ

0

ಮುಂಬೈ(Mumbai): ಬಾಲಿವುಡ್ ನ ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ನಟಿ ರಿಯಾ ಚಕ್ರವರ್ತಿ ಡ್ರಗ್ಸ್ ಪೂರೈಸುತ್ತಿದ್ದರು ಎಂದು ಮಾದಕವಸ್ತು ನಿಯಂತ್ರಣ ಬ್ಯೂರೊ (ಎನ್‌ಸಿಬಿ), ಆರೋಪ ಹೊರಿಸಿದೆ.

2020ರಲ್ಲಿ ನಿಧನರಾದ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯಕ್ಕೆ ಆರೋಪ ಪಟ್ಟಿಯನ್ನು ಸಲ್ಲಿಸಿದೆ.

ಆರೋಪಪಟ್ಟಿಯಲ್ಲಿ ಕರಡು ಪ್ರತಿಯ ವಿವರಗಳು ಮಂಗಳವಾರ ಬಹಿರಂಗಗೊಂಡಿದ್ದು, ಸುಶಾಂತ್ ಸಿಂಗ್ ಅವರಿಗೆ ರಿಯಾ ಚಕ್ರವರ್ತಿ ಅವರು ಮಾದಕ ವಸ್ತು ಖರೀದಿಸಿ ಪೂರೈಸುತ್ತಿದ್ದರು ಎಂದು ವಿವರಿಸಲಾಗಿದೆ. ನಟಿ ರಿಯಾ ಚಕ್ರವರ್ತಿ ಮತ್ತು ಅವರ ಸೋದರ ಶೋವಿಕ್ ಚಕ್ರವರ್ತಿ ಸೇರಿದಂತೆ 35 ಮಂದಿಯನ್ನು ಆರೋಪಟ್ಟಿಯಲ್ಲಿ ಹೆಸರಿಸಲಾಗಿದೆ.

ಸೋದರ ಶೋವಿಕ್ ಚಕ್ರವರ್ತಿ, ಸ್ಯಾಮ್ಯುಯೆಲ್ ಮಿರಾಂಡಾ, ದಿಪೇಶ್ ಸಾವಂತ್ ಮತ್ತು ಇತರರಿಂದ ‘ಗಾಂಜಾ’ ಖರೀದಿಸಿ ಬಾಯ್‌ಫ್ರೆಂಡ್‌ ಸುಶಾಂತ್‌ಗೆ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.