ಮನೆ ವ್ಯಾಯಾಮ ಮಳೆಗಾಲದಲ್ಲಿ ಮನೆಯಲ್ಲೇ ಮಾಡಬಹುದಾದ ವ್ಯಾಯಾಮಾಗಳು

ಮಳೆಗಾಲದಲ್ಲಿ ಮನೆಯಲ್ಲೇ ಮಾಡಬಹುದಾದ ವ್ಯಾಯಾಮಾಗಳು

0

ಮಳೆಗಾಲದಲ್ಲಿ ಹೊರಗೆ ಹೋಗಿ ವ್ಯಾಯಾಮಾ ಮಾಡಲು ಕಷ್ಟವೆನ್ನಿಸುತ್ತದೆ. ಇದಕ್ಕೆ ಇಲ್ಲಿದೆ ಪರಿಹಾರ. ಹೌದು ಮನೆಯಲ್ಲೇ ಮಾಡಬಹುದಾದ ವ್ಯಾಯಾಮಾಗಳ ಮಾಹಿತಿ ಇಲ್ಲಿದೆ. ಇದನ್ನು ಅನುಸರಿಸಿ ಮಳೆಗಾಲ, ಚಳಿಗಾಲದಲ್ಲೂ ನಿಮ್ಮ ಫಿಟ್‌ ನೆಸ್‌ ಅನ್ನು ಮೂಲೆ ಗುಂಪು ಮಾಡದಿರಿ.

​ಪುಷ್‌ಅಪ್ಸ್‌

ಹೇಗಿದ್ದರೂ ಜಿಮ್‌ನ ಒಳಗೆ ಅಥವಾ ಮನೆಯ ಒಳಗೇ ಪುಷ್‌ಅಪ್ಸ್‌ಗಳನ್ನು ಮಾಡುವುದು. ಹೀಗಾಗಿ ಮಳೆಗಾಲದಲ್ಲಿ ಹೊರಗೆ ಹೋಗಲು ಸಾಧ್ಯವಾಗದಿದ್ದರೂ ಆರಾಮದಲ್ಲಿ ಪುಷ್‌ಅಪ್ಸ್‌ಗಳನ್ನು ಮಾಡುವ ಮೂಲಕ ದೇಹವನ್ನು ಆರೋಗ್ಯವಾಗಿರಿಸಿಕೊಳ್ಳಬಹುದು. ಪ್ರತಿದಿನ ಬೆಳಗ್ಗೆ ನಿಮಗೆ ಸಾಧ್ಯವಾದಷ್ಟು ಪುಷ್‌ಅಪ್ಸ್‌ಗಳನ್ನು ಅಭ್ಯಾಸ ಮಾಡಿ. ವಿವಿಧ ರೀತಿಯ ಪುಷ್‌ಅಪ್ಸ್‌ಗಳಿವೆ. ಡೈಮಂಡ್‌ ಪುಷ್‌ಅಪ್ಸ್‌, ಕ್ರಾಸ್‌ ಎಲ್ಬೋ ಪುಷ್‌ಅಪ್ಸ್‌ ಇತ್ಯಾದಿ. ಇವುಗಳನ್ನು ಮಾಡುವುದರಿಂದ ನಿಮ್ಮ ಮಸಲ್ಸ್‌ಗಳು ಬಲವಾಗುತ್ತವೆ. ಜೊತೆಗೆ ಕೊಬ್ಬು ಕರಗಿ ದೇಹದ ತೂಕವೂ ಸಮತೋಲನದಲ್ಲಿರುತ್ತದೆ.

​ಭಾರ ಎತ್ತುವುದು

ಮನೆಯಲ್ಲಿಯೇ ಭಾರ ಎತ್ತುವ ಮೂಲಕ ವ್ಯಾಯಾಮಗಳನ್ನು ಮಾಡಬಹುದು. ಇದರಿಂದ ದೇಹದಲ್ಲಿನ ಅನಗತ್ಯ ಕೊಬ್ಬನ್ನು ಕರಗಿಸಬಹುದಾಗಿದೆ. ಸಾಧ್ಯವಾದರೆ ಡೆಂಬಲ್ಸ್‌ಗಳನು ಖರೀದಿಸಿ. ಇದು ಹೆಚ್ಚು ಉಪಯೋಗಕ್ಕೆ ಬರುತ್ತದೆ. ಸಾರ್ವಕಾಲಿಕವಾಗಿ ಡೆಂಬಲ್ಸ್ ವ್ಯಾಯಾಮ ಮಾಡಬಹುದಾಗಿದೆ. ತೋಳಿನ ಭಾಗದಲ್ಲಿ ಹಾಗೂ ಕುತ್ತಿಗೆಯ ಭಾಗದ ಕೊಬ್ಬನ್ನು ಕರಗಿಸಬಹುದಾಗಿದೆ.

ಸ್ಕಿಪ್ಪಿಂಗ್‌

ನೀವು ಸ್ಕಿಪ್ಪಿಂಗ್‌ ಮಾಡಲು ಮನೆಯಿಂದ ಹೊರಗೇ ಹೋಗಬೇಕಂತಿಲ್ಲ. ಕಿಟಿಕಿಗಳನ್ನು ತೆರೆದು ಚೆನ್ನಾಗಿ ಗಾಳಿ, ಬೆಳಕು ಬರುವಲ್ಲಿ ಮನೆಯ ಒಳಗೆ ಮಾಡಬಹುದು. ಪ್ರತಿದಿನ 10 ರಿಂದ 15 ನಿಮಿಷ ಸ್ಕಿಪ್ಪಿಂಗ್‌ ಮಾಡುವುದರಿಂದ ದೇಹದಲ್ಲಿನ ಅನಗತ್ಯ ಕೊಬ್ಬು ಕರಗುತ್ತದೆ.

ಯೋಗಾಸನ

ದೇಹವನ್ನು ಫಿಟ್‌ ಆಗಿ ಇರಿಸಿಕೊಳ್ಳಲು ವ್ಯಾಯಾಮದಷ್ಟೇ ಯೋಗಾಸನಗಳೂ ಕೂಡ ಸಹಾಯಕವಾಗಿದೆ. ಹೀಗಾಗಿ ಪ್ರತಿದಿನ ನೀವು ಮನೆಯೊಳಗೇ 1 ಗಂಟೆ ವಿವಿಧ ರೀತಿಯ ಆಸನಗಳನ್ನು ಮಾಡಬಹುದಾಗಿದೆ. ಸೂರ್ಯ ನಮಸ್ಕಾರ, ತಾಡಾಸನ, ವಜ್ರಾಸನ, ಧನುರಾಸನದಂತಹ ಆಸನಗಳು ನಿಮ್ಮ ದೇಹವನ್ನು ಫಿಟ್‌ ಆಗಿರಲು ಸಹಾಯ ಮಾಡುತ್ತವೆ.