ಮನೆ ರಾಷ್ಟ್ರೀಯ ಸಂಸತ್ ಮುಂಗಾರು ಅಧಿವೇಶನ: ಅಸಂಸದೀಯ ಪದಗಳ ಪಟ್ಟಿ ಬಿಡುಗಡೆ

ಸಂಸತ್ ಮುಂಗಾರು ಅಧಿವೇಶನ: ಅಸಂಸದೀಯ ಪದಗಳ ಪಟ್ಟಿ ಬಿಡುಗಡೆ

0

ನವದೆಹಲಿ(New Delhi): ಜುಲೈ 18 ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಅಸಂಸದೀಯ ಪದಗಳ ಪಟ್ಟಿಯನ್ನು ಲೋಕಸಭೆಯ ಸೆಕ್ರೆಟರಿಯೇಟ್ ಬಿಡುಗಡೆ ಮಾಡಿದೆ.

ಪಟ್ಟಿಯಲ್ಲಿರುವ ಅಸಂಸದೀಯ ಪದಗಳನ್ನ ಬಳಸಿದರೆ ಕಲಾಪದಿಂದ ಹೊರ ಹಾಕುವುದಾಗಿ ಎಚ್ಚರಿಕೆ ನೀಡಿದೆ.

ಪಟ್ಟಿಯಲ್ಲಿ ಜುಮ್ಲಜೀವಿ, ಬಾಲ್ ಬುದ್ಧಿ, ಕೊವಿಡ್ ಸ್ಪ್ರೆಡ್ಡರ್, ಸ್ನೂಪ್ಗೇಟ್, ಅರಾಜಕತಾವಾದಿ, ಶಕುನಿ, ಸರ್ವಾಧಿಕಾರಿ, ತಾನಶಾ, ತಾನಶಾಹಿ, ಜೈಚಂದ್, ವಿನಾಶ್ ಪುರುಷ, ಖಾಲಿಸ್ತಾನಿ, ಖೂನ್ ಸೆ ಖೇತಿ, ದೋಹ್ರಾ ಚರಿತ್ರ, ನಿಕಮ್ಮ, ನೌಟಂಕಿ, ದಿಂಡೋರಾ ಪೀಟ್ನಾ, ಬೆಹ್ರಿ ಸರ್ಕಾರ್ ಸೇರಿ ಹಲವು ಪದಗಳು ಸೇರಿದ್ದು ಈ ಪದಗಳನ್ನು ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲೂ ಬಳಸುವಂತಿಲ್ಲ. ಬಳಸಿದರೆ ಕಲಾಪದಿಂದ ಹೊರ ಹಾಕುವ ಎಚ್ಚರಿಕೆ ನೀಡಿದೆ.

ಮುಂಗಾರು ಅಧಿವೇಶನ ಜುಲೈ 18 ರಿಂದ ಆರಂಭವಾಗಿ ಆಗಸ್ಟ್ 12 ರಂದು ಕೊನೆಗೊಳ್ಳಲಿದೆ ಎಂದು ಲೋಕಸಭೆಯ ಸಚಿವಾಲಯ ಈಗಾಗಲೇ ತಿಳಿಸಿದೆ.