ಮನೆ ರಾಷ್ಟ್ರೀಯ ವಿಶ್ವದಾದ್ಯಂತ ಟ್ವಿಟರ್‌ ಸೇವೆಯಲ್ಲಿ ಕೆಲಕಾಲ ವ್ಯತ್ಯಯ

ವಿಶ್ವದಾದ್ಯಂತ ಟ್ವಿಟರ್‌ ಸೇವೆಯಲ್ಲಿ ಕೆಲಕಾಲ ವ್ಯತ್ಯಯ

0

ನವದೆಹಲಿ (New Delhi): ಸಾಮಾಜಿಕ ಜಾಲತಾಣ ಟ್ವಿಟರ್ ಸೇವೆಯಲ್ಲಿ ಗುರುವಾರ ವಿಶ್ವದಾದ್ಯಂತ ಕೆಲಕಾಲ ವ್ಯತ್ಯಯ ಉಂಟಾಗಿದೆ.  ಕೆಲ ಸಮಯದಲ್ಲೇ ಸಮಸ್ಯೆ ಸರಿಯಾಗಿದೆ ಎಂದು ‘ವೆಬ್‌ಸೈಟ್ ಡೌನ್‌ಡಿಟೆಕ್ಟರ್’ ತಿಳಿಸಿದೆ.

ಸೇವೆಯಲ್ಲಿನ ಜಾಗತಿಕ ವ್ಯತ್ಯಯದ ಕುರಿತು ಟ್ವಿಟರ್‌ ಈ ವರೆಗೆ ಪ್ರತಿಕ್ರಿಯೆ ನೀಡಿಲ್ಲ. ಡೌನ್‌ಡೆಕ್ಟರ್‌ನಲ್ಲಿ 54,000 ಕ್ಕೂ ಹೆಚ್ಚು ಮಂದಿ ಸಮಸ್ಯೆ ಕುರಿತು ವರದಿ ಮಾಡಿದ್ದಾರೆ.

ಸಂಜೆ 4.45ರಿಂದ 5 ಗಂಟೆ ನಡುವಿನ ಅವಧಿಯಲ್ಲಿ ಟ್ವಿಟರ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು ಎಂದು ವೆಬ್‌ಸೈಟ್‌ ಹಾಗೂ ಸೇವೆಗಳ ಸ್ಥಿತಿಯ ಕುರಿತು ಮಾಹಿತಿ ನೀಡುವ ‘ಡೌನ್ ಡಿಟೆಕ್ಟರ್’ ಹೇಳಿದೆ.

ಜಗತ್ತಿನ ಶ್ರೀಮಂತ ಉದ್ಯಮಿ ಇಲಾನ್‌ ಮಸ್ಕ್ ಅವರೊಂದಿಗೆ ಟ್ವಿಟರ್‌ ಕಾನೂನಾತ್ಮಕ ಹೋರಾಟದಲ್ಲಿ ತೊಡಗಿದೆ. ಮಸ್ಕ್‌ ಟ್ವಿಟರ್‌ ಅನ್ನು 44 ಶತಕೋಟಿಗೆ ಡಾಲರ್‌ಗೆ ಖರೀದಿಸುವುದಾಗಿ ಏಪ್ರಿಲ್‌ನಲ್ಲಿ ಹೇಳಿದ್ದರು. ಆದರೆ ಕಳೆದ ವಾರ ಅವರು ಒಪ್ಪಂದದಿಂದ ದೂರ ಸರಿಯುತ್ತಿರುವುದಾಗಿ ಘೋಷಿಸಿದ್ದರು. ಒಪ್ಪಂದವನ್ನು ಪೂರ್ಣಗೊಳಿಸಲು ಟ್ವಿಟರ್ ಮಂಗಳವಾರ ಮಸ್ಕ್ ವಿರುದ್ಧ ಮೊಕದ್ದಮೆ ಹೂಡಿದೆ.