ಮನೆ ರಾಜ್ಯ ಇಂದಿನಿಂದ ಕೋವಿಡ್‌ ಬೂಸ್ಟರ್‌ ಡೋಸ್‌ ಲಸಿಕಾ ಅಭಿಯಾನ: 4.34 ಕೋಟಿ ಮಂದಿಗೆ ವಿತರಣೆಯ ಗುರಿ

ಇಂದಿನಿಂದ ಕೋವಿಡ್‌ ಬೂಸ್ಟರ್‌ ಡೋಸ್‌ ಲಸಿಕಾ ಅಭಿಯಾನ: 4.34 ಕೋಟಿ ಮಂದಿಗೆ ವಿತರಣೆಯ ಗುರಿ

0

ಬೆಂಗಳೂರು (Bengaluru): 18 ವರ್ಷಗಳು ಮೇಲ್ಪಟ್ಟವರಿಗೆ ಉಚಿತವಾಗಿ ಕೋವಿಡ್‌ ಬೂಸ್ಟರ್‌ ಡೋಸ್‌ ನೀಡುವ ‘ಕೋವಿಡ್ ಲಸಿಕಾ ಅಮೃತ ಮಹೋತ್ಸವ’ಕ್ಕೆ ಇಂದು ಚಾಲನೆ ದೊರೆಯಲಿದೆ.

ಸ್ವಾತಂತ್ರ್ಯದ 75ನೇ ವರ್ಷದ ನಿಮಿತ್ತ ಸರ್ಕಾರವು ಆಚರಿಸಲಿರುವ ಅಮೃತ ಮಹೋತ್ಸವದ ಭಾಗವಾಗಿ ಈ ಅಭಿಯಾನ ನಡೆಯಲಿದೆ. ಈ ಅಭಿಯಾನವು ಸೆ.30ರವರೆಗೆ ನಡೆಯಲಿದೆ.

75 ದಿನಗಳಲ್ಲಿ 4.34 ಕೋಟಿ ಮಂದಿಗೆ ಮುನ್ನೆಚ್ಚರಿಕೆ ಡೋಸ್ ವಿತರಿಸುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ. ರಾಜ್ಯದಲ್ಲಿ 8 ಸಾವಿರ ಸರ್ಕಾರಿ ಕೇಂದ್ರಗಳಲ್ಲಿ ಮುನ್ನೆಚ್ಚರಿಕೆ ಡೋಸ್ ವಿತರಿಸಲಾಗುತ್ತದೆ. ಎರಡನೇ ಡೋಸ್ ಲಸಿಕೆ ಪಡೆದು 6 ತಿಂಗಳು ಪೂರ್ಣಗೊಳಿಸಿದವರು ಮತ್ತೊಂದು ಡೋಸ್ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ಸದ್ಯ 8.84 ಲಕ್ಷ ಡೋಸ್‌ ‘ಕೋವಿಶೀಲ್ಡ್’ ಹಾಗೂ 31.55 ಲಕ್ಷ ಡೋಸ್ ‘ಕೋವ್ಯಾಕ್ಸಿನ್’ ಲಸಿಕೆ ದಾಸ್ತಾನಿದೆ. ಲಸಿಕೆ ಮೇಳಗಳ ಜತೆಗೆ ಕಚೇರಿ ಹಾಗೂ ಕೈಗಾರಿಕಾ ಘಟಕಗಳಲ್ಲಿ ಲಸಿಕೆ ವಿತರಣೆಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.