ಮನೆ ರಾಜಕೀಯ ನಾನೇ ಮಾಡಿದ್ದು ಎಂದು ಕ್ರೆಡಿಟ್ ಗೆ ಯಾಕೆ ಇಳಿಯಬೇಕು ?: ಎಲ್.ನಾಗೇಂದ್ರ

ನಾನೇ ಮಾಡಿದ್ದು ಎಂದು ಕ್ರೆಡಿಟ್ ಗೆ ಯಾಕೆ ಇಳಿಯಬೇಕು ?: ಎಲ್.ನಾಗೇಂದ್ರ

0

ಮೈಸೂರು(Mysuru): ನಾವು ಮಾಡಿದ ಕೆಲಸವನ್ನು ಜನರು ಗುರುತಿಸಬೇಕು, ಆದರೆ ನಾನೇ ಮಾಡಿದ್ದು ಅಂತ ಯಾಕೆ ಕ್ರೆಡಿಟ್ ಗೆ ಇಳಿಯಬೇಕು ?  ಎಂದು ಶಾಸಕ ಎಲ್.ನಾಗೇಂದ್ರ, ಸಂಸದ ಪ್ರತಾಪ್ ಸಿಂಹ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಮೇಲೆ ಬೆಂಗಳೂರು ಮತ್ತು ಮೈಸೂರು ಹೆದ್ದಾರಿ ಅಭಿವೃದ್ಧಿಗೆ ಹಣ ನೀಡಿದ್ದು 2014 ರಿಂದ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿರುವುದು ಇದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಟಾಂಗ್ ನೀಡಿದ್ದಾರೆ.

ಉಸ್ತುವಾರಿ ಸಚಿವರ ಬದಲಾವಣೆ ಸಿಎಂ ಪರಮಾಧಿಕಾರವಾಗಿದೆ. ಇಲ್ಲಿ ಸ್ಥಳೀಯರು ಹೊರಗಿನವರು ಅಂತ ಏನಿಲ್ಲ. ಮೂಲ ವಲಸಿಗ ಎಂಬುದೂ ಕೂಡ ಇಲ್ಲ. ಬಿಜೆಪಿ ಪಕ್ಷವನ್ನು ನಂಬಿ ಬಂದ ಎಲ್ಲರಿಗೂ ಪಕ್ಷದ ಮಾತಿನಂತೆ ನಡೆದುಕೊಂಡಿದೆ. ನಿಗಮ ಮಂಡಳಿ ಅಧ್ಯಕ್ಷರ ಬದಲಾವಣೆಯಲ್ಲಿ ಯಾರನ್ನು ಟಾರ್ಗೆಟ್ ಮಾಡಿಲ್ಲ. ಹೊಸಬರಿಗೂ ಆದ್ಯತೆ ನೀಡಬೇಕು ಎಂದು ಸಿಎಂ ಬದಲಾವಣೆ ಮಾಡುತ್ತಿದ್ದಾರೆ ಎಂದರು.

ಮೈಸೂರಿನಿಂದ ನಾವು ಯಾರಿಗೂ ಕೂಡ ಶಿಫಾರಸ್ಸು ಮಾಡಿಲ್ಲ. ಬಿಜೆಪಿ ಪಕ್ಷವು ನಿಷ್ಠಾವಂತರಲ್ಲಿ ಮಾಡುತ್ತದೆ ಎಂದು ಹೇಳಿದ್ದಾರೆ.