ಮನೆ ರಾಜ್ಯ ಸವಾಲ್ ವರದಿಗೆ ಬೆಚ್ಚಿ ಬೆದರಿದ ಸರ್ಕಾರ: ಆದೇಶ ಪತ್ರದ ತಪ್ಪು ಸರಿಪಡಿಸಿ ಮರು ಆದೇಶ

ಸವಾಲ್ ವರದಿಗೆ ಬೆಚ್ಚಿ ಬೆದರಿದ ಸರ್ಕಾರ: ಆದೇಶ ಪತ್ರದ ತಪ್ಪು ಸರಿಪಡಿಸಿ ಮರು ಆದೇಶ

0

ಬೆಂಗಳೂರು(Bengaluru): `ಸವಾಲ್ ಟಿವಿ’ ವರದಿಗೆ ಹೆದರಿದ ಸರ್ಕಾರ ಆದೇಶ ಪತ್ರದಲ್ಲಿನ ತಪ್ಪುಗಳನ್ನು ಸರಿಪಡಿಸಿ ಹೊಸ ಆದೇಶ ಪತ್ರವನ್ನು ಹೊರಡಿಸಿದೆ.

ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರು ಅನಧಿಕೃತವಾಗಿ ಫೋಟೋ ತೆಗೆಯುವುದು, ವಿಡಿಯೋ ಮಾಡುವುದಕ್ಕೆ ನಿರ್ಬಂಧ ಹೇರಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂಪಡೆದು ಆದೇಶ ಹೊರಡಿಸಿತ್ತು. ಆದರೆ ಆದೇಶ ಪತ್ರದಲ್ಲಿ ಕನ್ನಡದ ಪದಗಳನ್ನು ತಪ್ಪಾಗಿ ಬಳಸಲಾಗಿತ್ತು.

ಈ ಕುರಿತು `ಸವಾಲ್ ಟಿವಿ’ ಆದೇಶ ಪತ್ರದಲ್ಲಿನ ತಪ್ಪುಗಳನ್ನು ಪಟ್ಟಿ ಮಾಡಿ ವರದಿ ಪ್ರಕಟಿಸಿತ್ತು. ಅಲ್ಲದೇ ಸಾಮಾಜಿಕ ಜಾಲತಾಣ ಬಳಕೆದಾರರು ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಇದನ್ನು ಗಮನಿಸಿದ ಅಧಿಕಾರಿಗಳು ತಪ್ಪು ಸರಿಪಡಿಸಿ ಆದೇಶ ಹೊರಡಿಸಿದ್ದಾರೆ.

ಹಳೆಯ ಆದೇಶ ಪತ್ರದಲ್ಲಿ ತಪ್ಪಾಗಿ ಬಳಸಲಾದ ಪದಗಳು

ನಡಾವಳಿ ಎಂಬ ಪದಕ್ಕೆ “ನಡವಳಿ”,

ಪ್ರಸ್ತಾವನೆ – “ಪ್ರಸತ್ತಾವನೆ’,

ಮೇಲೆ- “ಮೇಲೇ”,

ಭಾಗ- “ಬಾಗ”

ಕರ್ನಾಟಕ – “ ಕರ್ನಾಟ”

ಆಡಳಿತದ– “ ಆಡಳಿದ”

ನಿದ್ದೆಯಿಂದ ಎಚ್ಚೆತ್ತುಕೊಂಡು ಸರ್ಕಾರ ವ್ಯಾಕರಣ ದೋಷವನ್ನು ಸರಿಪಡಿಸಿದೆ.