ಮನೆ ಮನರಂಜನೆ ಖ್ಯಾತ ಬಾಲಿವುಡ್ ಗಾಯಕ ಭೂಪಿಂದರ್ ಸಿಂಗ್ ಇನ್ನಿಲ್ಲ

ಖ್ಯಾತ ಬಾಲಿವುಡ್ ಗಾಯಕ ಭೂಪಿಂದರ್ ಸಿಂಗ್ ಇನ್ನಿಲ್ಲ

0

ಮುಂಬೈ(Mumbai) : ಖ್ಯಾತ ಬಾಲಿವುಡ್ ಗಾಯಕ ಭೂಪಿಂದರ್ ಸಿಂಗ್ (83) ಅವರು ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.

ಕರುಳಿನ ಕ್ಯಾನ್ಸರ್ ನಿಂತ ಬಳಲುತ್ತಿದ್ದ ಭೂಪಿಂದರ್ ಸಿಂಗ್ ಅವರಿಗೆ ಕೋವಿಡ್ ಸೋಂಕು ಕೂಡ ತಗುಲಿತ್ತು. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನೆನ್ನೆ(ಸೋಮವಾರ) ರಾತ್ರಿ ನಿಧನ ಹೊಂದಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಭೂಪಿಂದರ್ ಸಿಂಗ್ ಅವರು ಅಮೃತಸರದಲ್ಲಿ ಜನಿಸಿದ್ದು, ತದನಂತರ ತಮ್ಮ ವೃತ್ತಿ ಜೀವನವನ್ನು ಆಲ್ ಇಂಡಿಯಾ ರೇಡಿಯೋ ಮೂಲಕ ಪ್ರಾರಂಭಿಸಿದರು. ಬಾಲಿವುಡ್ ನ ಹಲವಾರು ಚಿತ್ರಗಳಿಗೆ ಧ್ವನಿಯಾಗಿದ್ದ ಭೂಪಿಂದರ್ ಸಿಂಗ್ ಅವರು ಮುಂಬೈನಲ್ಲಿ ವಾಸವಿದ್ದರು.

ಭೂಪಿಂದರ್ ನಿಧನಕ್ಕೆ   ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಸಂತಾಪ ಸೂಚಿಸಿದ್ದು. ಭೂಪಿಂದರ್ ಸಿಂಗ್ ಅವರ ಧ್ವನಿಯನ್ನು ಲಕ್ಷಾಂತರ ಸಂಗೀತ ಪ್ರೇಮಿಗಳು ಗೌರವಿಸುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ.