ಮನೆ ರಾಷ್ಟ್ರೀಯ ಭಾರತದ ಅತ್ಯಂತ ಶ್ರೀಮಂತ ಮಹಿಳೆ  ಸಾವಿತ್ರಿ ಜಿಂದಾಲ್

ಭಾರತದ ಅತ್ಯಂತ ಶ್ರೀಮಂತ ಮಹಿಳೆ  ಸಾವಿತ್ರಿ ಜಿಂದಾಲ್

0

ನವದೆಹಲಿ(NewDelhi): ಫೋರ್ಬ್ಸ್ನ ವಿಶ್ವದ ಶ್ರೀಮಂತರ ಪಟ್ಟಿ ಪ್ರಕಟಗೊಂಡಿದ್ದು, ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿ ಸಾವಿತ್ರಿ ಜಿಂದಾಲ್ ಹೊರಹೊಮ್ಮಿದ್ದಾರೆ.

72 ವರ್ಷ ವಯಸ್ಸಿನಲ್ಲಿಯೂ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸುಮಾರು 12 ಬಿಲಿಯಾನ್ ಡಾಲರ್ ಸಂಪತ್ತುನ್ನು ಹೆಚ್ಚಿಸಿಕೊಂಡಿದ್ದಾರೆ.

ಜಿಂದಾಲ್ ಗ್ರೂಪ್‌ ನ ಈ ಮಾತೃ, ಬಿಲಿಯನೇರ್‌ ಗಳ ಪಟ್ಟಿಯಲ್ಲಿ 91ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಈಕೆಯ ಪತಿ ಒ.ಪಿ. ಜಿಂದಾಲ್ ಅವರು 2005ರಲ್ಲಿ ಹೆಲಿಕಾಪ್ಟರ್ ಅಪಘಾತವೊಂದರಲ್ಲಿ ಸಾವನ್ನಪಿದರು. ಆಗ ಜಿಂದಾಲ್ ಸಮೂಹ ಮಕ್ಕಳ ಪೈಕಿ ಭಾಗವಾಯಿತು.

ಅವರ ಆಸ್ತಿ ಕೇವಲ ಎರಡು ವರ್ಷಗಳಲ್ಲಿ, ಅಂದರೆ 2020ರಲ್ಲಿ 4.8 ಬಿಲಿಯನ್ ಡಾಲರ್‌ ಗಳಿಂದ, 2022ರಲ್ಲಿ 17.7ಬಿಲಿಯನ್ ಡಾಲರ್‌ ಗಳಿಗೆ ಹೆಚ್ಚಳವಾಗಿದೆ. 2019 ಹಾಗೂ 2020ರ ನಡುವೆ ಇವರ ಸಂಪತ್ತು 5.9 ಬಿಲಿಯನ್ ಡಾಲರ್‌ಗಳಿಂದ 4.8 ಬಿಲಿಯನ್ ಡಾಲರ್‌ ಗಳಿಗೆ ಇಳಿಕೆಯಾಗಿರುವುದಾಗಿ ವರದಿಯಾಗಿತ್ತು.

ಸಾವಿತ್ರಿ ಜಿಂದಾಲ್  ಕುರಿತ ಮಾಹಿತಿ:

ಸಾವಿತ್ರಿ ಜಿಂದಾಲ್ ಇತಿಹಾಸ ಬಹಳ ವಿಶೇಷತೆಗಳಿಂದ ಕೂಡಿದೆ. ಕಾಲೇಜು ಮೆಟ್ಟಿಲು ಹತ್ತಿರದಿದ್ದರೂ ವಿಶ್ವದ ಅತ್ಯಂತ ಶ್ರೀಮಂತ 13 ಬಿಲಿಯನೇರ್‌ ಗಳ ಪಟ್ಟಿಯಲ್ಲಿ ಈಕೆ ಸ್ಥಾನ ಪಡೆದುಕೊಂಡಿದ್ದಾರೆ. ಈ ಹಿಂದೆ ಈಕೆ, ಹರಿಯಾಣದಲ್ಲಿ ಭುಪಿಂದರ್ ಸಿಂಗ್ ಅವರ ಸರ್ಕಾರದಲ್ಲಿ ಸಚಿವೆಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಜಿಂದಾಲ್ ಸಮೂಹ ಭಾರತದ ಅತೀ ದೊಡ್ಡ ಉದ್ಯಮ ಸಮೂಹವಾಗಿದೆ. ಸಾವಿತ್ರಿ ಜಿಂದಾಲ್ ಅವರ ಮಗ ಸಜ್ಜನ್ ಜಿಂದಾಲ್ ಜೆಎಸ್‌ ಡಬ್ಲ್ಯುಯ ಸ್ಟೀಲ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದರೆ, ಮತ್ತೊಬ್ಬ ಮಗ ನವೀನ್ ಜಿಂದಾಲ್ ಅವರು ಜಿಂದಾಲ್ ಸ್ಟೀಲ್ & ಪವರ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.