ಮನೆ ರಾಜ್ಯ ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ: ಪೊಲೀಸ್ ಇನ್ಸ್ಪೆಕ್ಟರ್ ಮಮತಾ

ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ: ಪೊಲೀಸ್ ಇನ್ಸ್ಪೆಕ್ಟರ್ ಮಮತಾ

0

ಮೈಸೂರು(Mysuru): ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ಮಹಿಳಾ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಮಮತ ಎಂದು ಅಭಿಪ್ರಾಯಿಸಿದರು.

ಗ್ರಾಮೀಣ ಶಿಕ್ಷಣ ಮತ್ತು ಅರೋಗ್ಯ ಸಂಸ್ಥೆ -ಚೈಲ್ಡ್ ಲೈನ್ 1098 ವತಿಯಿಂದ ಮೈಸೂರು ತಾಲೂಕಿನ ಕಲ್ಲೂರು ನಾಗನಹಳ್ಳಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ತೆರೆದ ಮನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳಾದ ಪೋಕ್ಸೋ ಕಾಯ್ದೆ-2012, ದೈಹಿಕ ದೌರ್ಜನ್ಯ, ಮಕ್ಕಳ ಕಳ್ಳ ಸಾಗಣೆ ಕುರಿತು, ಮತ್ತು ಅವುಗಳನ್ನು ತಡೆಗಟ್ಟುವಲ್ಲಿ ಕಾನೂನಿನ ಕ್ರಮ ಮತ್ತು ಜಾಗೃತಿ ಕುರಿತು  ಮಾಹಿತಿ ನೀಡಿದರು.

ಚೈಲ್ಡ್ ಲೈನ್ ನೋಡಲ್ ಸಂಯೋಜಕ ಧನರಾಜ್ ಮಾತನಾಡಿ, ಮಕ್ಕಳ ಹಕ್ಕುಗಳಾದ ಬದುಕುವ, ರಕ್ಷಣೆ ಹೊಂದುವ, ಅವಕಾಶ ಮತ್ತು ವಿಕಾಸ ಹೊಂದುವ ಮತ್ತು ಬಾಗವಹಿಸುವ ಹಕ್ಕು ಕುರಿತು,  ಬಾಲ್ಯ ವಿವಾಹ ಕಾಯ್ದೆ ಮತ್ತು ಅದರ ದುಷ್ಪರಿಣಾಮಗಳ ಕುರಿತು ತಿಳಿಸಿದರು.

ಈ ಸಂದರ್ಭದಲ್ಲಿ  ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಘವೇಂದ್ರ, ಮಹದೇವ್ ಬಿ ಆರ್ ಸಿ, ಶಾಲೆಯ ಮುಖ್ಯ ಶಿಕ್ಷಕ ಸೋಮಶೇಖರ್, ಎಸ್ ಡಿ ಎಂ ಸಿ ಅಧ್ಯಕ್ಷರಾದ ಹೇಮಂತ್ ಕುಮಾರ್, ಸಮಾಜ ಕಾರ್ಯಕರ್ತೆ ಪದ್ಮಶ್ರೀ, ಮಕ್ಕಳ ರಕ್ಷಣಾ ಘಟಕ, ಮಕ್ಕಳ ವಿಶೇಷ ಪೊಲೀಸ್ ಘಟಕ ಮಕ್ಕಳ ವಿಶೇಷ ಪೊಲೀಸ್ ಅಧಿಕಾರಿ ಶ್ರೀರಾಮಪ್ರಸಾದ್, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗಿರೀಶ್, ಇಲವಾಲ ಪೊಲೀಸ್ ಠಾಣೆ ಎಸ್‍ಐ ಇಶರತ್  ಬೇಗಮ್, ಮಕ್ಕಳ ಪ್ರತಿನಿಧಿಗಳಾದ ಸಿಂಚನ ಮತ್ತು ಪ್ರಶಾಂತ್, RLHP ಚೈಲ್ಡ್ ಲೈನ್ ಸಂಯೋಜಕಿ ಶಶಿಕುಮಾರ್ ಉಪಸ್ಥಿತರಿದ್ದರು.