ಮನೆ ರಾಜ್ಯ ಸೌಹಾರ್ದತೆ, ಸಾಮರಸ್ಯ, ಸಹಬಾಳ್ವೆಗೆ ಭಾರತ ಮಾದರಿ: ರಾಜಾರಾಮ್

ಸೌಹಾರ್ದತೆ, ಸಾಮರಸ್ಯ, ಸಹಬಾಳ್ವೆಗೆ ಭಾರತ ಮಾದರಿ: ರಾಜಾರಾಮ್

0

ಮೈಸೂರು(Mysuru): ಸೌಹಾರ್ದತೆ, ಸಾಮರಸ್ಯ, ಸಹಬಾಳ್ವೆಗೆ ಒಂದು ಶ್ರೇಷ್ಠ ಮಾದರಿ ದೇಶ ಅಂದರೆ ಭಾರತ ಎಂದು ನಗರ ಕಾಂಗ್ರೆಸ್ ಉಪಾಧ್ಯಕ್ಷರಾದ ರಾಜಾರಾಮ್  ಎಂದು ಅಭಿಪ್ರಾಯಿಸಿದರು.

ಕೃಷ್ಣರಾಜ ಯುವ ಬಳಗ ಹಾಗೂ ಸುಜೀವ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಕಡೆಯ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡಿಪುರಂ ವೃತ್ತದಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನಂತರ ಸಾರ್ವಜನಿಕರಿಗೆ ಪ್ರಸಾದ ವಿತರಿಸಲಾಯಿತು.

ಈ ಸಂದರ್ಭ ಮಾತನಾಡಿದ ಅವರು, ಮೈಸೂರು ಸಹಾಸ್ರಾರು ವರ್ಷಗಳಿಂದಲೂ ಕಾಪಾಡಿಕೊಂಡು ಬಂದಿರುವ ಈ ಸೌಹಾರ್ದ, ಸಾಮರಸ್ಯವನ್ನು ರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ದೇಶದ ನಾಗರಿಕರ ಮುಂದೆ ಇದೆ. ಇದು ಉಳಿದಾಗಲಷ್ಟೆ ದೇಶದ ಏಕತೆ ಮತ್ತು ಸಮಗ್ರತೆ ಉಳಿಯಲು ಸಾಧ್ಯ, ಸಂವಿಧಾನದ ಆಶಯಗಳು ಮುಂದುವರೆಯಲಿಕ್ಕೆ ಸಾಧ್ಯ, ಪ್ರಜಾಸತ್ತೆ ಉಳಿಯಲು ಸಾಧ್ಯ, ದೇಶದ ಅಭಿವೃದ್ಧಿಯಾಗಲು ಸಾಧ್ಯ. ಇದೆಲ್ಲವೂ ಸಾಧ್ಯವಾಗಬೇಕಾದರೆ ಎಲ್ಲರೂ ಒಗ್ಗೂಡಿ ಬದುಕುವ ವಾತಾವರಣ ಸೌಹಾರ್ದತೆ ನಿರ್ಮಾಣವಾಗಬೇಕು.   ಅನ್ನೋನ್ಯವಾಗಿ ಕೂಡಿ ಬದುಕೋಣ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯರಾದ  ಶೋಭಾ ಸುನೀಲ್ ,ವಿನಯ್ ಕಣಗಾಲ್ ,ಕೃಷ್ಣರಾಜ  ಯುವಬಳಗದ ಅಧ್ಯಕ್ಷ ನವೀನ್ ಕೆಂಪಿ ,ಸುನೀಲ್, ನಾರಾಯಣ್, ವಿನಯ್ ಕುಮಾರ್, ರವಿಶಂಕರ್, ದುರ್ಗಾ ಪ್ರಸಾದ್, ರಾಕೇಶ್ ಕುಂಚಿಟಿಗ, ಶಿವಕುಮಾರ್, ಮಹಾದೇವ್ ಹಾಜರಿದ್ದರು.