ಮನೆ ವ್ಯಾಯಾಮ ಪುಶ್‌ ಅಪ್‌ ಮಾಡುವ ರೀತಿ, ಅನುಸರಿಸಬೇಕಾದ ಕ್ರಮ

ಪುಶ್‌ ಅಪ್‌ ಮಾಡುವ ರೀತಿ, ಅನುಸರಿಸಬೇಕಾದ ಕ್ರಮ

0

ಪುಶ್‌ ಅಪ್‌ ಅನ್ನು ಮಾಡುವ ರೀತಿ, ಯಾವ ರೀತಿಯ ತಪ್ಪುಗಳನ್ನು ಮಾಡಬಾರದು, ಅನುಸರಿಸಬೇಕಾದ ಸರಿಯಾದ ಕ್ರಮದ ಬಗ್ಗೆ ಇಲ್ಲಿದೆ ಮಾಹಿತಿ.

​ನಿಮ್ಮ ಕೈಗಳನ್ನು ಇಡುವ ರೀತಿ

ಈ ವ್ಯಾಯಾಮವನ್ನು ಮಾಡುವಾಗ ನಿಮ್ಮ ಕೈಗಳನ್ನು ನಿಮ್ಮ ಭುಜದ ಜಾಗಕ್ಕೆ ಲಂಬವಾಗಿ ಇಟ್ಟುಕೊಳ್ಳಬೇಕು. ಈ ರೀತಿ ಇಟ್ಟುಕೊಳ್ಳುವುದರಿಂದ ಸರಿಯಾದ ಸ್ನಾಯುಗಳನ್ನು ಕೇಂದ್ರೀಕರಿಸಲು ಸಹಾಯವಾಗುತ್ತದೆ. ಕೈಗಳನ್ನು ಸರಿಯಾಗಿ ಇಡದಿರುವುದರಿಂದ ಸರಿಯಾದ ಉತ್ತಮವಾದ ಫಲಿತಾಂಶ ಈ ವ್ಯಾಯಾಮದಿಂದ ದೊರಕುವುದಿಲ್ಲ. ಈಗಷ್ಟೇ ಈ ವ್ಯಾಯಾಮವನ್ನು ಆರಂಭಿಸಿರುವ ಕೆಲವರಿಗೆ ಕೈಗಳನ್ನು ಈ ರೀತಿ ಇಟ್ಟುಕೊಳ್ಳುವುದು ಕಷ್ಟವಾಗಬಹುದು. ನೀವು ಆರಂಭಿಕ ಹಂತಗಳಲ್ಲಿ ನಿಮಗೆ ಸರಿ ಎನಿಸುವಂತೆ ಕೈಗಳನ್ನು ಇಟ್ಟುಕೊಳ್ಳಬಹುದು, ಆದರೆ ಇದನ್ನೇ ಅಭ್ಯಾಸ ಮಾಡಿಕೊಳ್ಳಬೇಡಿ. ದಿನಕಳೆದಂತೆ ಇದರ ಬಗ್ಗೆ ನೀವು ಎಚ್ಚರದಿಂದ ಕೈಗಳನ್ನು ಸರಿಯಾಗಿ ಇಟ್ಟುಕೊಳ್ಳುವುದನ್ನು ಅಭ್ಯಾಸ ಮಾಡಿ.

​ಅಸ್ಥಿರವಾದ ಕುತ್ತಿಗೆ

ಈ ವ್ಯಾಯಾಮವನ್ನು ಮಾಡುವಾಗ ನಿಮ್ಮ ಕುತ್ತಿಗೆಯನ್ನು ನೆಲದ ಮೇಲೆ ಕೇಂದ್ರೀಕರಿಸುವುದರಿಂದ ಈ ವ್ಯಾಯಾಮ ಮಾಡಲು ಸಹಾಯವಾಗುತ್ತದೆ ಎಂದು ನೀವು ಭಾವಿಸಿರಬಹುದು. ಆದರೆ ಇದರೊಂದಿಗೆ ಮತ್ತೊಂದು ವಿಷಯ ನಮಗೆ ತಿಳಿದಿರಲಿ ಈ ರೀತಿ ಮಾಡುವುದರಿಂದ ನಿಮ್ಮ ವ್ಯಾಯಾಮವೂ ಸಂಪೂರ್ಣ ಫಲಿತಾಂಶವನ್ನು ನಿಮಗೆ ನೀಡುವುದಿಲ್ಲ ಮತ್ತು ನಿಮ್ಮ ಕುತ್ತಿಗೆ ಮೇಲೆ ಅನಗತ್ಯವಾದ ಒತ್ತಡವನ್ನು ಹಾಕುತ್ತದೆ. ಇದರಿಂದ ನಿಮಗೆ ಕುತ್ತಿಗೆ ಸಂಬಂಧಿ ತೊಂದರೆಗಳು ಬರಬಹುದು. ಈ ವ್ಯಾಯಾಮವನ್ನು ಮಾಡುವಾಗ ನಿಮ್ಮ ಕುತ್ತಿಗೆಯನ್ನು ಸ್ಥಿರವಾಗಿರುವಂತೆ ಹಾಗೂ ಮುಂದೆ ನೋಡುವಂತೆ ನೋಡಿಕೊಳ್ಳಿ.

ಜೋತುಬಿದ್ದಿರುವ ಸೊಂಟ

ಈ ವ್ಯಾಯಾಮವನ್ನು ಮಾಡುವಾಗ ನಿಮ್ಮ ಇಡೀ ದೇಹವನ್ನು ನೀವು ನೇರವಾಗಿ ಇಟ್ಟುಕೊಳ್ಳಬೇಕು. ನಿಮ್ಮ ಕಾಲಿನ ಬೆರಳುಗಳಿಂದ ಇಡಿದು ನಿಮ್ಮ ತಲೆಯವರೆಗೂ ಇದು ಒಂದು ನೇರವಾದ ರೇಖೆಯಂತೆ ಇರಬೇಕು. ಆದರೆ ಬಹಳಷ್ಟು ಜನ ಚೆನ್ನಾಗಿ ವ್ಯಾಯಾಮವನ್ನು ಮಾಡುವಾಗ ತಮ್ಮ ಸೊಂಟವನ್ನು ಕೆಳಗೆ ಜೋತು ಬಿಡುತ್ತಾರೆ. ಸಾಮಾನ್ಯವಾಗಿ ಜೋತುಬೀಳುವ ಸೊಂಟ ಸ್ನಾಯುಗಳು ದುರ್ಬಲವಾಗಿ ಇದ್ದಾಗ ಆಗುವ ತೊಂದರೆಯಾಗಿದೆ. ಈ ರೀತಿಯ ಭಂಗಿಗಳನ್ನು ಸರಿ ಮಾಡಿಕೊಳ್ಳುವುದರಿಂದ ಈ ವ್ಯಾಯಾಮವು ಮತ್ತಷ್ಟು ಒಳ್ಳೆಯ ಫಲಗಳನ್ನು ನಿಮಗೆ ನೀಡುತ್ತವೆ.

​ನಿಮ್ಮ ಸೊಂಟವನ್ನು ಬಹಳ ಮೇಲ್ಭಾಗಕ್ಕೆ ತರುವುದು

ಜೋತುಬೀಳುವ ಸೊಂಟದಂತೆಯೇ ಬಹಳ ಮೇಲ್ಬಾಗಕ್ಕೆ ಒಯ್ಯುವ ಸೊಂಟವು ಕೂಡ ಈ ವ್ಯಾಯಾಮದಿಂದ ಆಗುವ ಬಹುದೊಡ್ಡ ತಪ್ಪಾಗಿದೆ. ಇದನ್ನು ಸರಿ ಮಾಡುವುದು ಬಹಳ ಕಷ್ಟವೂ ಹೌದು. ಆದರೆ ಇದನ್ನು ಮಾಡುವುದರಿಂದ ನಿಮಗೆ ಉತ್ತಮ ಫಲಿತಾಂಶಗಳು ದೊರೆಯುವುದು.

​ಬಹಳ ತ್ವರಿತವಾಗಿ ಈ ವ್ಯಾಯಾಮವನ್ನು ಮಾಡುವುದು

ನೀವು ಯಾವುದೇ ವ್ಯಾಯಾಮ ಮಾಡುತ್ತಿರಲಿ ಬಹಳ ತಾಳ್ಮೆಯಿಂದ ಮಾಡಬೇಕಾಗುತ್ತದೆ. ಬೇಗ ಮುಗಿಸುವ ಆತುರದಿಂದ ಹಿಂದೆ ಹಿಂದೆಯೇ ಅವಸರವಾಗಿ ವ್ಯಾಯಾಮ ಮಾಡಿದಾಗ ನಿಮಗೆ ವಿವಿಧ ಅಂಗಗಳ ಹಾಗೂ ಸ್ನಾಯುಗಳ ತೊಂದರೆ ಕಾಣಿಸಿಕೊಳ್ಳಬಹುದು. ವ್ಯಾಯಾಮಗಳನ್ನು ಎಂದಿಗೂ ಬಹಳ ನಿಧಾನವಾಗಿ ಮಾಡಬಾರದು. ಇದಕ್ಕಾಗಿ ಸಾಮಾನ್ಯ ವೇಗದಲ್ಲಿ ವ್ಯಾಯಾಮ ಮಾಡಬೇಕು. ವ್ಯಾಯಾಮಗಳನ್ನು ಅಭ್ಯಾಸ ಮಾಡುವುದು ಒಂದು ವಿಧವಾದರೆ ಅವುಗಳನ್ನು ಸರಿಯಾದ ರೀತಿಯಲ್ಲಿ ಮಾಡುವುದು ಮತ್ತೊಂದು ಪ್ರಮುಖವಾದ ಸಂಗತಿ. ತಿಳಿಯದೆ ನಾವು ಮಾಡುವ ತಪ್ಪುಗಳಿಂದ ಇದರ ಉತ್ತಮ ಫಲಿತಾಂಶಗಳನ್ನು ನಾವು ಪಡೆಯಲಾಗುವುದಿಲ್ಲ. ಆದ್ದರಿಂದ, ಯಾವುದೇ ವ್ಯಾಯಾಮಗಳನ್ನು ಮಾಡುವ ಮೊದಲು ಅದರ ಬಗ್ಗೆ ಉತ್ತಮ ಮಾಹಿತಿ ಇರಬೇಕು. ಇದರಿಂದ ಹೆಚ್ಚಿನ ಫಲಿತಾಂಶಗಳು ನಿಮಗೆ ದೊರೆಯುತ್ತದೆ.