ಮನೆ ಅಪರಾಧ ಮೊಬೈಲ್ ಕಳ್ಳತನವಾದರೆ ಎಫ್ಐಆರ್ ಕಡ್ಡಾಯ: ಬೆಂಗಳೂರು ಪೊಲೀಸ್​ ಕಮಿಷನರ್ ಸೂಚನೆ

ಮೊಬೈಲ್ ಕಳ್ಳತನವಾದರೆ ಎಫ್ಐಆರ್ ಕಡ್ಡಾಯ: ಬೆಂಗಳೂರು ಪೊಲೀಸ್​ ಕಮಿಷನರ್ ಸೂಚನೆ

0

ಬೆಂಗಳೂರು(Bengaluru): ಪೊಲೀಸ್ ಠಾಣೆಗೆ ಮೊಬೈಲ್ ಕದ್ದಿರುವ ಬಗ್ಗೆ ದೂರು ಕೊಡಲು ಬಂದರೆ ಕಡ್ಡಾಯವಾಗಿ ಎಫ್ಐಆರ್ ಮಾಡಬೇಕು ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಖಡಕ್ ಸೂಚನೆ ನೀಡಿದ್ದಾರೆ.

ಈ ಬಗ್ಗೆ ವಾರ್ಷಿಕ ಸಭೆಯಲ್ಲಿ ಚರ್ಚಿಸಲಾಗಿದ್ದು, ಮೊಬೈಲ್ ಕಳೆದು ಹೋದರೆ ಇ-ಲಾಸ್ ಸಾಫ್ಟ್​​ವೇರ್​ನಲ್ಲಿ ದೂರು ನೀಡಬಹುದು. ಆದರೆ, ಮೊಬೈಲ್ ರಾಬರಿ ಮಾಡಿದರೆ ಪೊಲೀಸ್ ಠಾಣೆಯಲ್ಲಿ ಸಾರ್ವಜನಿಕರು ದೂರು ನೀಡಬಹುದು. ಪೊಲೀಸರು ಇಂತಹ ಪ್ರಕರಣಗಳಲ್ಲಿ ಶೀಘ್ರವೇ ಎಫ್ಐಆರ್ ದಾಖಲಿಸಲೇಬೇಕು ಎಂದು ತಾಕೀತು ಮಾಡಿದ್ದಾರೆ.

ಇ-ಲಾಸ್​ ಮುಖಾಂತರ ಮೊಬೈಲ್ ಕಳ್ಳತನದ ಬಗ್ಗೆ ದೂರುಗಳು ಬರುತ್ತಿವೆ. ಆದರೆ, ಈ ರೀತಿಯ ಪ್ರಕರಣಗಳಲ್ಲಿ ಪೊಲೀಸ್ ಠಾಣೆಗೆ ಸಾರ್ವಜನಿಕರು ನೇರವಾಗಿ ಬಂದ ದೂರು ನೀಡಬೇಕು. ಅಲ್ಲದೇ, ಇಂತಹ ದೂರುಗಳ ಬಗ್ಗೆ ಪೊಲೀಸ್​ ಸಿಬ್ಬಂದಿ ನಿರ್ಲಕ್ಷ್ಯ ತೋರಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.