ಮನೆ ರಾಜ್ಯ ಒಂದನೇ ತರಗತಿಗೆ ಮಕ್ಕಳನ್ನು ದಾಖಲಿಸಲು 6 ವರ್ಷವಾಗಿರಬೇಕು: ಸರ್ಕಾರದ ಆದೇಶ

ಒಂದನೇ ತರಗತಿಗೆ ಮಕ್ಕಳನ್ನು ದಾಖಲಿಸಲು 6 ವರ್ಷವಾಗಿರಬೇಕು: ಸರ್ಕಾರದ ಆದೇಶ

0

ಬೆಂಗಳೂರು (Bengaluru): ಮಕ್ಕಳನ್ನು ಒಂದನೇ ತರಗತಿಗೆ ದಾಖಲಿಸಲು ವಯೋಮಿತಿ ನಿಗದಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಹೊಸ ನಿಯಮದ ಪ್ರಕಾರ ಒಂದನೇ ತರಗತಿಗೆ ಸೇರಿಸಲು ಮಕ್ಕಳಿಗೆ 6 ವರ್ಷವಾಗಿರಬೇಕು.

ಆರ್‌ ಟಿಇ ಶಿಕ್ಷಣ ಕಾಯ್ದೆ, ಕಡ್ಡಾಯ ಶಿಕ್ಷಣ ನಿಯಮ 2012 ಅನ್ವಯ ವಯೋಮಿತಿಯನ್ನು ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದೆ ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಲು 5 ವರ್ಷ 5 ತಿಂಗಳು ಹಾಗೂ 5 ವರ್ಷ 10 ತಿಂಗಳು ಆಗಿರಬೇಕು ಎಂದು ನಿಯಮವಿತ್ತು. ಆದರೆ ಈಗ ಒಂದನೇ ತರಗತಿಗೆ ಮಕ್ಕಳನ್ನು ದಾಖಲಿಸಲು 6 ವರ್ಷವಾಗಿರಬೇಕು ಎಂದು ಆದೇಶಿಸಿದೆ.