ಮನೆ ಕಾನೂನು ಇ.ಡಿ ಅಧಿಕಾರ ನಿರಂಕುಶವಲ್ಲ: ಸುಪ್ರೀಂಕೋರ್ಟ್‌

ಇ.ಡಿ ಅಧಿಕಾರ ನಿರಂಕುಶವಲ್ಲ: ಸುಪ್ರೀಂಕೋರ್ಟ್‌

0

ನವದೆಹಲಿ(NewDelhi):  ಇಂದು ಸುಪ್ರೀಂಕೋರ್ಟ್‌ ಅಕ್ರಮ ಹಣ ವರ್ಗಾವಣೆ ವಿರೋಧಿಯ ಕಾನೂನಿನ ಅಡಿಯಲ್ಲಿ ಆರೋಪಿಯನ್ನು ಬಂಧಿಸುವ ಇ.ಡಿ ಅಧಿಕಾರ ನಿರಂಕುಶವಲ್ಲ ಎಂದು ತಿಳಿಸಿದೆ.

ಜಾರಿ ನಿರ್ದೇಶನಾಲಯವನ್ನು ಬೆಂಬಲಿಸಿರುವ ಸುಪ್ರೀಂಕೋರ್ಟ್‌ ಆರೋಪಿ ವಿರುದ್ದ ತನಿಖೆ ಆರಂಭಿಸುವ ಮತ್ತು ಬಂಧಿಸುವ, ಶೋಧಿಸುವ ಹಾಗೂ ವಶಪಡಿಸಿಕೊಳ್ಳುವ ಎಂಬ ಇತ್ಯಾದಿ ಅಧಿಕಾರಕ್ಕೆ ಸಂಬಂಧಿಸಿದಂತೆ ತನಿಖಾ ಸಂಸ್ಥೆ ಇ.ಡಿ ವಿರುದ್ದ ಎತ್ತಿರುವ ಬಹುತೇಕ ಎಲ್ಲಾ ಆಕ್ಷೇಪಣೆಗಳನ್ನು ಇಂದು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ.

ನ್ಯಾಯಾಲಯದ ಸವಾಲು ಎದುರಿಸುತ್ತಿದ್ದ ಹಣ ವರ್ಗಾವಣೆ ಕಾಯ್ದೆಯ (PMLC) ಬಹುತೇಕ ನಿಬಂಧನೆಗಳನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದಿದೆ.

ನ್ಯಾಯಾಮೂರ್ತಿ ಎ.ಎಂ.ಖಾನ್ವಿಲ್ಕರ್‌ ನೇತೃತ್ವದ ಪೀಠವು ತನಿಖಾ ಸಂಸ್ಥೆಯ ಅಧಿಕಾರವನ್ನು ಬಲಪಡಿಸಿದೆ. ಬಂಧನದ ಆಧಾರ ತಿಳಿಸದೆ ಆರೋಪಿಗಳನ್ನು ಅನಿಯಂತ್ರಿತ ಅಧಿಕಾರವು ಅಸಂವಿಧಾನಿಕ ಎಂದು ಅರ್ಜಿದಾರರು ವಾದಿಸುವ ಮೂಲಕ ಗಮನಸೆಳೆದಿದ್ದಾರೆ.