ಮನೆ ರಾಜ್ಯ ಸುರತ್ಕಲ್‌: ಪ್ರೀತಿ ವಿಚಾರಕ್ಕೆ ಫಾಸಿಲ್‌ ಹತ್ಯೆ? ಘಟನೆ ಖಂಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

ಸುರತ್ಕಲ್‌: ಪ್ರೀತಿ ವಿಚಾರಕ್ಕೆ ಫಾಸಿಲ್‌ ಹತ್ಯೆ? ಘಟನೆ ಖಂಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

0

ಮಂಗಳೂರು (Mangalore): ಸುರತ್ಕಲ್ ನಲ್ಲಿ ನಡೆದ ಮಹಮ್ಮದ್ ಫಾಸಿಲ್ ಹತ್ಯೆಗೆ ಪ್ರೀತಿ-ಪ್ರೇಮ ವಿಚಾರ ಕಾರಣವಿರಬಹುದು ಎಂದು ಚರ್ಚೆಯಾಗುತ್ತಿದೆ.

ನಗರದ ಹೊರವಲಯದ ಸುರತ್ಕಲ್ ನಲ್ಲಿ ಫಾಜಿಲ್ ಎಂಬ ಯುವಕನ ಬರ್ಬರ ಹತ್ಯೆ ವಿಚಾರ ಹಲವು ಆಯಾಮಗಳನ್ನು ಪಡೆಕೊಳ್ಳುತ್ತಿದೆ. ಇದು ಕೋಮು ದ್ವೇಷದಿಂದಾದ ಹತ್ಯೆಯಲ್ಲ. ಬದಲಿಗೆ ಪ್ರೀತಿ ವಿಚಾರದಲ್ಲಿ ಆಗಿರುವ ಕೊಲೆ ಎನ್ನಲಾಗುತ್ತಿದೆ. ಮೃತ ಫಾಜಿಲ್ ಆಪ್ತರೇ ಇದು ಕೋಮು ದ್ವೇಷವಲ್ಲ, ಪ್ರೀತಿ ವಿಷಯದಲ್ಲಿ ಉಂಟಾದ ಗಲಾಟೆಯಾಗಿರಬಹುದು ಎಂದು ಶಂಕಿಸಿದ್ದಾರೆ. 

ಪೊಲೀಸರಿಗೆ ಸಿಕ್ಕಿರುವ ಪ್ರಾಥಮಿಕ ಮಾಹಿತಿ ಪ್ರಕಾರ ಈ ಕೊಲೆಯ ಹಿಂದೆ ಯಾವುದೇ ಕೋಮು ದ್ವೇಷವಿಲ್ಲ ಮತ್ತು ಇದು ಪ್ರತೀಕಾರದ ಕೊಲೆ ಅಲ್ಲ ಎನ್ನಲಾಗಿದೆ. ಎರಡು ಗುಂಪುಗಳ ನಡುವೆ ಪ್ರೀತಿಯ ವಿಚಾರಕ್ಕಾಗಿ ದ್ವೇಷವಿತ್ತು, ಜಿಲ್ಲೆಯ ಉದ್ವಿಗ್ನ ಸ್ಥಿತಿ ಲಾಭ ಪಡೆಯಲು ಯತ್ನಿಸಿರುವ ದುಷ್ಕರ್ಮಿಗಳು ಈ ಕೊಲೆಯನ್ನು ಕೋಮು ದ್ವೇಷಕ್ಕೆ ಸಂಪರ್ಕಿಸುವ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಮತ್ತೊಂದು ಮಾಹಿತಿಯ ಪ್ರಕಾರ ಹಣಕಾಸು ವಿಚಾರದಲ್ಲಿ ಈ ಕೊಲೆ ನಡೆದಿದೆ ಎನ್ನಲಾಗುತ್ತಿದೆ.

ಆದರೆ ಪೊಲೀಸರ ತನಿಖೆಯ ಬಳಿಕವೇ ಸ್ಪಷ್ಟ ಮಾಹಿತಿ ಹೊರ ಬರಲಿದೆ. ದುಷ್ಕರ್ಮಿಗಳ ಸುಳಿವು ಪೊಲೀಸರಿಗೆ ಲಭ್ಯವಾಗಿದ್ದು, ಪ್ರತ್ಯಕ್ಷದರ್ಶಿಗಳು ಕೊಟ್ಟ ಸುಳಿವು ಮತ್ತು ಕಾರಿನ ಸಂಖ್ಯೆ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಘಟನೆ ಖಂಡಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ

ಇನ್ನು ಫಾಜಿಲ್ ಹತ್ಯೆ ಸಂಬಂಧ ಗೃಹ ಸಚಿವ ಆರಗ ಜ್ಞಾನೇಂದ್ರ ಮಾಧ್ಯಮ‌ ಪ್ರಕಟಣೆ ಹೊರಡಿಸಿದ್ದು, ಹತ್ಯೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಂತೆಯೇ ಜನತೆ ಶಾಂತಿಯಿಂದ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ. ಸುರತ್ಕಲ್‌ನಲ್ಲಿ ಫಾಜಿಲ್ ಹತ್ಯೆ ನಡೆದಿದೆ. ಫಾಜಿಲ್ ಅಮಾನುಷ ಕೊಲೆಯನ್ನ ಅತ್ಯುಗ್ರವಾಗಿ ಖಂಡಿಸುತ್ತೇನೆ. ದುಷ್ಕೃತ್ಯ ನಡೆಸಿದವರನ್ನು ಬಂಧಿಸಿ ಕ್ರಮಕೈಗೊಳ್ಳಲು ಪೊಲೀಸರು ಪೂರ್ಣ ಸ್ವಾತಂತ್ರ್ಯ ಹೊಂದಿದ್ದಾರೆ. ಜನತೆ ಶಾಂತಿಯಿಂದ ಸಹಕರಿಸಬೇಕು ಎಂದಿದ್ದಾರೆ.