ಮನೆ ಕ್ರೀಡೆ ಟಿ20 ಸರಣಿ ಟಾಸ್‌ ಗೆದ್ದ ವಿಂಡೀಸ್‌ ನಿಂದ ಭಾರತಕ್ಕೆ ಬ್ಯಾಟಿಂಗ್‌ ಆಹ್ವಾನ

ಟಿ20 ಸರಣಿ ಟಾಸ್‌ ಗೆದ್ದ ವಿಂಡೀಸ್‌ ನಿಂದ ಭಾರತಕ್ಕೆ ಬ್ಯಾಟಿಂಗ್‌ ಆಹ್ವಾನ

0
https://www.youtube.com/channel/UCmDoYGj_oDaxpT_t7Pa9iEQ

ಟ್ರಿನಿಡಾಡ್‌ (Trinidad): ಮೊದಲ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದ ವೆಸ್ಟ್‌ ಇಂಡೀಸ್‌ ಭಾರತ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದೆ.

ಇಲ್ಲಿನ ಬ್ರಿಯಾನ್‌ ಲಾರ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ವಿಂಡೀಸ್‌ ಆಹ್ವಾನದಂತೆ ಬ್ಯಾಟಿಂಗ್‌ ಮಾಡುತ್ತಿರುವ ಟೀಂ ಇಂಡಿಯಾ 1.3 ಓವರ್‌ ಗಳಲ್ಲಿ 16 ರನ್‌ ಗಳಿಸಿ ಆಡುತ್ತಿದೆ.

ಶಿಖರ್‌ ಧವನ್‌ ನಾಯಕತ್ವದ ಭಾರತ ತಂಡ ಮೂರು ಪಂದ್ಯಗಳ ಓಡಿಐ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿಕೊಳ್ಳುವ ಮೂಲಕ ಕೆರಿಬಿಯನ್‌ ನಾಡಿನಲ್ಲಿ ಇತಿಹಾಸ ಬರೆದಿತ್ತು. ಇದೀಗ ಟಿ20 ನಂ.1 ತಂಡವಾಗಿ ಭಾರತ ತಂಡ ಟಿ20 ಸರಣಿಯಲ್ಲಿ ಕಣಕ್ಕೆ ಇಳಿದಿದ್ದು, ಟಿ20 ಸರಣಿಯನ್ನು ಗೆಲ್ಲುವ ವಿಶ್ವಾಸದಲ್ಲಿದೆ. ಏಕದಿನ ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದ ರೋಹಿತ್‌ ಶರ್ಮಾ ಚುಟಕು ಸರಣಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ರೋಹಿತ್‌ ಶರ್ಮಾ ಜೊತೆಗೆ ರಿಷಭ್‌ ಪಂತ್, ಹಾರ್ದಿಕ್‌ ಪಾಂಡ್ಯ, ದಿನೇಶ್‌ ಕಾರ್ತಿಕ್‌, ಆರ್‌ ಅಶ್ವಿನ್‌ ಸೇರಿದಂತೆ ಹಲವು ಸ್ಟಾರ್‌ ಆಟಗಾರರು ಟಿ20 ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಏಕದಿನ ಸರಣಿಗೆ ಅಲಭ್ಯರಾಗಿದ್ದ ರವೀಂದ್ರ ಜಡೇಜಾ ಟಿ20 ಸರಣಿಗೆ ಮರಳಿದ್ದಾರೆ.

ಇಲ್ಲಿನ ಬ್ರಿಯಾನ್‌ ಲಾರ ಸ್ಟೇಡಿಯಂನಲ್ಲಿ ಆರಂಭವಾದ ಮೊದಲನೇ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದ ವೆಸ್ಟ್‌ ಇಂಡೀಸ್‌ ನಾಯಕ ನಿಕೋಲಸ್‌ ಪೂರನ್‌, ಭಾರತ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದ್ದಾರೆ.

ತಂಡಗಳು:

ಭಾರತ: ರೋಹಿತ್ ಶರ್ಮಾ (ಸಿ), ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಆರ್‌ ಅಶ್ವಿನ್‌, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್‌.

ವೆಸ್ಟ್ ಇಂಡೀಸ್‌: ಶಮರ ಬ್ರೂಕ್ಸ್‌, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ನಾಯಕ), ಶಿಮ್ರಾನ್ ಹೆಟ್ಮಾಯರ್, ರೊವ್ಮನ್ ಪೊವೆಲ್, ಓಡಿಯನ್ ಸ್ಮಿತ್, ಜೇಸನ್ ಹೋಲ್ಡರ್, ಅಕೀಲ್ ಹೊಸೇನ್, ಒಬೆಡ್ ಮೆಕಾಯ್, ಅಲ್ಝಾರಿ ಜೋಸೆಫ್,ಕೀಮೋ ಪಾಲ್‌.