ಮನೆ ಅಪರಾಧ ಪತ್ನಿ ಕೊಲೆ ಆರೋಪದಡಿ ಪತಿಗೆ ಜೈಲು: ಪತ್ನಿ ಜೀವಂತ ಪತ್ತೆ

ಪತ್ನಿ ಕೊಲೆ ಆರೋಪದಡಿ ಪತಿಗೆ ಜೈಲು: ಪತ್ನಿ ಜೀವಂತ ಪತ್ತೆ

0

ಉತ್ತರಪ್ರದೇಶ (Uttar pradesh): ಮಹಿಳೆ ಕೊಲೆ ಆರೋಪದಲ್ಲಿ ಪತಿಗೆ 10 ವರ್ಷ ಶಿಕ್ಷೆ ಪ್ರಕಟವಾದ  ನಂತರ ಕೊಲೆಗೀಡಾದ ಮಹಿಳೆ ಆಕೆಯ ಸಹೋದರಿಯ ಮನೆಯಲ್ಲಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್ ನಲ್ಲಿ ನಡೆದಿದೆ.

ಏನಿದು ಪ್ರಕರಣ?: ಜಮಾಪುರ ಗ್ರಾಮದ ನಿವಾಸಿ ಕಂಧಾಯ್ ಅವರು 2006 ರಲ್ಲಿ ರಾಮಾವತಿ ಅವರನ್ನು ವಿವಾಹವಾಗಿದ್ದರು. ಆದರೆ, 2009ರಲ್ಲಿ ರಾಮಾವತಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಕುಟುಂಬಸ್ಥರು ನ್ಯಾಯಾಲಯದ ಮೊರೆ ಹೋಗಿ ಕಂಧಾಯ್​​ ವಿರುದ್ಧ ಅಪಹರಣ ಮತ್ತು ಕೊಲೆ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ 2017 ರಲ್ಲಿ ಕಂಧಾಯ್‌ಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದರು.ಕೆಳ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿದ್ದ ಕಂಧಾಯ್,​ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ, ಆರು ತಿಂಗಳ ಜೈಲು ವಾಸದ ಬಳಿಕ ಜಾಮೀನು ಪಡೆದುಕೊಂಡಿದ್ದರು ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ (ಎಎಸ್‌ಪಿ)ಅಶೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.

ಈ ನಡುವೆ ಕೊಲೆಯಾಗಿದ್ದಾರೆ ಎಂದು ನಂಬಲಾಗಿದ್ದ ರಮಾವತಿ, ಸೋದರ ಮಾವನ ಮನೆಯಲ್ಲಿ ಕಂಡು ಬಂದಿದ್ದಾರೆ. ರಮಾವತಿ ಅವರನ್ನು ಕಂಡ ಸಂಬಂಧಿಯೊಬ್ಬರು ಪತಿ ಹಾಗೂ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.

ಈ ನಡುವೆ ಎಸ್‌ಎಚ್‌ಒ ರಾಮಗಾಂವ್ ಸಂಜಯ್ ಸಿಂಗ್ ನೇತೃತ್ವದ ಪೊಲೀಸ್ ತಂಡವು ರಾಮಾವತಿ ಇದ್ದ ಮಹಿಳಾ ಪೊಲೀಸ್ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿ ರಮಾವತಿ ಅವರನ್ನು ಒನ್ ಸ್ಟಾಪ್ ಸೆಂಟರ್‌ಗೆ ಕರೆದೊಯ್ದಿದ್ದರು.

ಇಂದು ರಾಮಾವತಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುತ್ತೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ನಿರ್ದೇಶನ ಪಡೆಯುತ್ತೇವೆ ಎಂದು ಎಎಸ್ಪಿ ಕುಮಾರ್ ಹೇಳಿದ್ದಾರೆ.