ಮನೆ ರಾಜ್ಯ ಕಾಡುಗಳ್ಳರಿಗೆ ಸಿಂಹಸ್ವಪ್ನವಾಗಿದ್ದ ಬಂಡೀಪುರದ ರಾಣಾ ಇನ್ನಿಲ್ಲ

ಕಾಡುಗಳ್ಳರಿಗೆ ಸಿಂಹಸ್ವಪ್ನವಾಗಿದ್ದ ಬಂಡೀಪುರದ ರಾಣಾ ಇನ್ನಿಲ್ಲ

0

ಗುಂಡ್ಲುಪೇಟೆ(Gundlupete): ಕಾಡುಗಳ್ಳರಿಗೆ ಸಿಂಹಸ್ವಪ್ನವಾಗಿದ್ದಅರಣ್ಯ ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಶ್ವಾನ ದಳದ ‘ರಾಣಾ’ ಸೋಮವಾರ ರಾತ್ರಿ ಮೃತಪಟ್ಟಿದೆ.

ಒಂಬತ್ತು ವರ್ಷ ವಯಸ್ಸಿನ ಜರ್ಮನ್‌ ಶೆಫರ್ಡ್‌ ತಳಿಯ ರಾಣಾ ವಾರದ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿತ್ತು. ಸೋಮವಾರ ಅದರ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿತ್ತು. ಸಿಬ್ಬಂದಿ ಗುಂಡ್ಲುಪೇಟೆಯ ಪಶು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಸಂಜೆಯ ಬಳಿಕ ವಾಂತಿ ಭೇದಿ ಕಾಣಿಸಿಕೊಂಡಿತ್ತು. ರಾತ್ರಿ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯ ಅಪರಾಧ ಪತ್ತೆಗಾಗಿ ಅರಣ್ಯ ಇಲಾಖೆಯು ರಾಜ್ಯದಲ್ಲೇ ಮೊದಲ ಬಾರಿಗೆ 2015ರಲ್ಲಿ ಬಂಡೀಪುರದಲ್ಲಿ ‘ರಾಣಾ’ನನ್ನು ನಿಯೋಜಿಸಿತ್ತು. ಮಧ್ಯಪ್ರದೇಶ ಭೋಪಾಲ್‌ನಲ್ಲಿ 11 ತಿಂಗಳು ತರಬೇತಿ ಪಡೆದು ಬಂದಿದ್ದ ಠಾಣಾ ಕಾಡುಗಳ್ಳರಿಗೆ ಸಿಂಹಸ್ವಪ್ನವಾಗಿತ್ತು.