ಮನೆ ರಾಜಕೀಯ ದೈಹಿಕ, ಮಾನಸಿಕವಾಗಿ ಸದೃಡವಾಗಿರುವವರೆಗೆ ರಾಜಕೀಯದಲ್ಲಿರುತ್ತೇನೆ: ಸಿದ್ದರಾಮಯ್ಯ

ದೈಹಿಕ, ಮಾನಸಿಕವಾಗಿ ಸದೃಡವಾಗಿರುವವರೆಗೆ ರಾಜಕೀಯದಲ್ಲಿರುತ್ತೇನೆ: ಸಿದ್ದರಾಮಯ್ಯ

0

ದಾವಣಗೆರೆ(Davanagere): ತಾವೂ ಮಾನಸಿಕವಾಗಿ, ದೈಹಿಕವಾಗಿ ಸದೃಢವಾಗಿರುವವರೆಗೂ ರಾಜಕೀಯದಲ್ಲಿರುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ದಾವಣಗೆರೆಯಲ್ಲಿ ಸಿದ್ದರಾಮಯ್ಯ ಹಿತೈಷಿಗಳು ಆಯೋಜಿಸಿರುವ ತಮ್ಮ75ನೇ ಜನ್ಮದಿನ ಅಮೃತ ಮಹೋತ್ಸವ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನಶಕ್ತಿಯೇ ಬಹಳ ದೊಡ್ಡದು, ಎಲ್ಲರಿಂದಲೂ ಇಷ್ಟು ಸುದೀರ್ಘ ಕಾಲ ರಾಜಕೀಯದಲ್ಲಿ ಇರಲು ಸಾಧ್ಯವಾಗಲ್ಲ. ನನ್ನ ಮೇಲೆ ಜನರ ನಿರಂತರ ಪ್ರೀತಿ , ವಿಶ್ವಾಸ ಇದ್ದಿದ್ದರಿಂದ 44 ವರ್ಷಗಳ ಕಾಲ ರಾಜಕೀಯದಲ್ಲಿದ್ದೇನೆ. ಇಷ್ಟು ವರ್ಷಗಳಲ್ಲಿ ನಾನು ಶಾಸಕ , ಮಂತ್ರಿಯಾಗಿ, ಉಪಮುಖ್ಯ ಮಂತ್ರಿಯಾಗಿ , ಮುಖ್ಯಮಂತ್ರಿಯಾಗಿ ಜನರ ಸೇವೆ ಮಾಡಲು ಸಾಧ್ಯವಾಗಿದೆ. ಇದಕ್ಕೆಲ್ಲಾ ಸಮಸ್ತ ಕನ್ನಡ ಜನತೆಗೆ ಧನ್ಯವಾದ ಹೇಳುತ್ತೇನೆ ಎಂದರು.

ಡಿಕೆಶಿಯೊಂದಿಗೆ ಮನಸ್ತಾಪವಿಲ್ಲ:  ತಮ್ಮ ಜನ್ಮದಿನದ ಕಾರ್ಯಕ್ರಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ವಿರೋಧವಿದೆ ಎಂಬ ಸುದ್ದಿ ವಿರೋಧ ಪಕ್ಷ ಸೃಷ್ಟಿಸಿರುವ ಗೊಂದಲ, ನನ್ನ ಹುಟ್ಟುಹಬ್ಬ ಆಚರಿಸಲು ಡಿಕೆ ಶಿವಕುಮಾರ್‌ ಬೆಂಬಲವಿದೆ. ಇಲ್ಲಿವರೆಗೆ ನಡೆದ ಎಲ್ಲಾ ಗೊಂದಲಗಳಿಗೂ ಕಾರಣ ರಾಜ್ಯದ ಆಡಳಿತ ಪಕ್ಷ. ಕಾಂಗ್ರೆಸ್‌ನಲ್ಲಿ ನಾವೆಲ್ಲಾ ಒಂದಾಗಿದ್ದೇವೆ. ಯಾರ ನಡುವೆ ಬಿನ್ನಾಭಿಪ್ರಾಯವಿಲ್ಲ. ಮುಂದಿನ ಚುನಾವಣೆಯಲ್ಲಿನಾವೆಲ್ಲರೂ ಒಟ್ಟಾಗಿ ಶ್ರಮಿಸಿ ಕರ್ನಾಟಕದಲ್ಲಿ ಬಿಜೆಪಿ ಸರಕಾರವನ್ನು ತೊಲಗಿಸಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದರು.