ಮನೆ ಕ್ರೀಡೆ ಕಾಮನ್‌ ವೆಲ್ತ್‌ ಗೆಮ್ಸ್‌: ಹೆವಿ ವೇಟ್‌ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಜಯಿಸಿದ ಸುಧೀರ್‌

ಕಾಮನ್‌ ವೆಲ್ತ್‌ ಗೆಮ್ಸ್‌: ಹೆವಿ ವೇಟ್‌ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಚಿನ್ನದ ಪದಕ ಜಯಿಸಿದ ಸುಧೀರ್‌

0

ಬರ್ಮಿಂಗ್‌ಹ್ಯಾಂ (Birmingham): ಕಾಮನ್‌ವೆಲ್ತ್ ಗೇಮ್ಸ್‌ ನ ಹೆವಿ ವೇಟ್‌ ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಭಾರತದ ಸುಧೀರ್ ಅವರು ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಮೊದಲ ಯತ್ನದಲ್ಲಿ 208 ಕೆ.ಜಿ. ಭಾರ ಎತ್ತಿದ ಸುಧೀರ್, ಎರಡನೇ ಯತ್ನದಲ್ಲಿ 212 ಕೆ.ಜಿ. ಎತ್ತುವ ಮೂಲಕ 134.5 ಅಂಕಗಳೊಂದಿಗೆ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಸುಧೀರ್ ಈ ಹಿಂದೆ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟಿದ್ದರು. ದಕ್ಷಿಣ ಕೊರಿಯಾದಲ್ಲಿ ಜೂನ್‌ನಲ್ಲಿ ನಡೆದಿದ್ದ ವಿಶ್ವ ಪ್ಯಾರಾ ಪವರ್‌ಲಿಫ್ಟಿಂಗ್ ಏಷ್ಯಾ ಓಷಿಯಾನಿಯಾ ಓಪನ್ ಚಾಂಪಿಯನ್‌ಷಿಪ್‌ನಲ್ಲಿ ಪುರುಷರ 88 ಕೆ.ಜಿ. ವಿಭಾಗದಲ್ಲಿ ಸುಧೀರ್ ಅವರು ಕಂಚಿನ ಪದಕ ಜಯಿಸಿದ್ದರು.

2013ರಲ್ಲಿ ಪವರ್‌ಲಿಫ್ಟಿಂಗ್ ಆರಂಭಿಸಿದ್ದ ಸುಧೀರ್ ‘ಹ್ಯಾಂಗ್‌ಜೌ 2022 ಏಷ್ಯನ್ ಪ್ಯಾರಾ ಗೇಮ್ಸ್‌’ಗೂ ಆಯ್ಕೆಯಾಗಿದ್ದರು. ಕ್ರೀಡಾಕೂಟ ಬಳಿಕ 2023ಕ್ಕೆ ಮುಂದೂಡಿಕೆಯಾಗಿದೆ.

ಈ ಮಧ್ಯೆ, ಹರ್ಮನ್‌ಪ್ರೀತ್‌ ಸಿಂಗ್ ಅವರ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ವೇಲ್ಸ್‌ ತಂಡವನ್ನು 4–1 ರಲ್ಲಿ ಮಣಿಸಿದ ಭಾರತ, ಕಾಮನ್‌ವೆಲ್ತ್‌ ಕೂಟದ ಹಾಕಿ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿದೆ. ಈ ಗೆಲುವಿನ ಮೂಲಕ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನವನ್ನು ಭಾರತ ಖಚಿತಪಡಿಸಿಕೊಂಡಿದೆ.

ಈವರೆಗೆ ಕಾಮನ್‌ವೆಲ್ತ್ ಕ್ರೀಡಾ ಕೂಟದಲ್ಲಿ ಭಾರತಕ್ಕೆ 20 ಪದಕಗಳು ದೊರೆತಿವೆ.